‘ನಾಟು ನಾಟು’ (Natu Natu) ಹಾಡಿಗೆ ಆಸ್ಕರ್ (Oscar) ಬರುತ್ತಿದ್ದಂತೆಯೇ ಮತ್ತೆ ಬಾಲಿವುಡ್ (Bollywood) ಮೇಲೆ ಹಲವರು ಮುಗಿ ಬಿದ್ದಿದ್ದಾರೆ. ಪ್ರಕಾಶ್ ರೈ (Prakash Rai) ಸೇರಿದಂತೆ ಕೆಲ ನಟರು ಆಸ್ಕರ್ ಪ್ರಶಸ್ತಿಯನ್ನಿಟ್ಟುಕೊಂಡು ಬೇರೆ ಬೇರೆ ರೀತಿಯಲ್ಲಿ ಟಾಂಗ್ ನೀಡುತ್ತಿದ್ದಾರೆ. ಆರ್.ಆರ್.ಆರ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದವರ ವಿರುದ್ಧ ವಾಗ್ದಾಳಿ ಮಾಡಿರುವ ಅವರು, ಆಸ್ಕರ್ ಪ್ರಶಸ್ತಿ ಬಂದಿದ್ದಕ್ಕೆ ಈಗ ಏನ್ ಹೇಳ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.
Advertisement
ನಟಿ ರಮ್ಯಾ (Ramya) ಕೂಡ ಹಿಂದಿ ಹೇರಿಕೆ ಹಾಗೂ ಬಾಲಿವುಡ್ ಬಗ್ಗೆ ವಿಭಿನ್ನವಾದ ರೀತಿಯಲ್ಲೇ ಟ್ವೀಟ್ ಮಾಡಿದ್ದು, ಹಿಂದಿ (Hindi) ಮಾತಾಡಲ್ಲ ಎಂದು ವೈರಲ್ ಆಗಿದ್ದ ಆಟೋಡ್ರೈವರ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಭಾರತ ಹಲವು ಭಾಷೆಗಳನ್ನು, ನಾನಾ ರೀತಿಯ ಸಂಸ್ಕೃತಿಯನ್ನು ಹೊಂದಿರುವ ದೇಶ. ಯಾರೂ ಯಾರ ಮೇಲೆ ಹೇರಿಕೆ ಸಲ್ಲ. ಭಾರತ ಅಂದರೆ ಬಾಲಿವುಡ್ ಅಲ್ಲ, ಭಾರತ ಅಂದರೆ ಹಿಂದಿಯಲ್ಲ’ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಕ್ರಿಕೆಟರ್ ಶುಭಮನ್ ಗಿಲ್ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾದ ರಶ್ಮಿಕಾ ಮಂದಣ್ಣ
Advertisement
Advertisement
ಭಾಷಾ ವಿಚಾರವಾಗಿ ನಟಿ ರಮ್ಯಾ ಆಗಾಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಲೇ ಇರುತ್ತಾರೆ. ಅದರಲ್ಲೂ ದಕ್ಷಿಣ ಸಿನಿಮಾಗಳ ಬಗ್ಗೆಯೂ ಮೆಚ್ಚುಗೆ ನುಡಿಗಳನ್ನು ಆಡಿದ್ದಾರೆ. ನಾಟು ನಾಟು ತೆಲುಗಿನ ಸಿನಿಮಾ. ಆಸ್ಕರ್ ವೇದಿಕೆಯ ಮೇಲೆ ತೆಲುಗು ಗೀತೆಯನ್ನೇ ಹಾಡಿದ್ದು ಎಂದು ಬರೆಯುವ ಮೂಲಕ ಹಿಂದಿ ಹೇರಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ವಿರೋಧಿಸಿದ್ದಾರೆ. ರಮ್ಯಾ ಟ್ವೀಟ್ ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.