ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya) ನಾಯಕಿಯಾಗಿ ಬರಲಿದ್ದಾರೆ ಎಂದು ಈ ಹಿಂದೆಯೇ ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ಬ್ರೇಕ್ ಮಾಡಿತ್ತು. ಈ ಸಿನಿಮಾವನ್ನು ರಾಜ್ ಬಿ ಶೆಟ್ಟಿ (Raj B Shetty) ಅವರು ನಿರ್ದೇಶನ ಮಾಡಲಿದ್ದಾರೆ ಎಂದು ಬರೆಯಲಾಗಿತ್ತು. ಅದೀಗ ನಿಜವಾಗಿದೆ. ರಮ್ಯಾ ಕೇವಲ ನಿರ್ಮಾಪಕಿಯಾಗಿ ಮಾತ್ರ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿಲ್ಲ, ನಿರ್ಮಾಣದ ಜೊತೆಗೆ ನಟಿಯಾಗಿಯೂ ಪ್ರವೇಶ ಮಾಡಿದ್ದಾರೆ. ಈ ಸಿನಿಮಾಗೆ ಸ್ವಾತಿ ಮುತ್ತಿನ ಮಳೆ ಹನಿಯೇ (Swati Muthina Male Haniye) ಎಂದು ಹೆಸರಿಡಲಾಗಿದೆ.
ಈಗಾಗಲೇ ಕನ್ನಡ ಸಿನಿಮಾ (Sandalwood) ರಂಗಕ್ಕೆ ನಿರ್ಮಾಪಕಿಯಾಗಿ ಮತ್ತೆ ಕಮ್ ಬ್ಯಾಕ್ ಮಾಡಿರುವ ನಟಿ ರಮ್ಯಾ (Ramya) , ಮೊನ್ನೆಯಷ್ಟೇ ತಮ್ಮ ಸಂಸ್ಥೆಯ ಹೆಸರನ್ನು ಅನೌನ್ಸ್ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದರು. ತಮ್ಮ ಆ್ಯಪಲ್ ಬಾಕ್ಸ್ (Apple Box) ಸಿನಿಮಾ ಸಂಸ್ಥೆಯಿಂದ ಹಲವಾರು ಚಿತ್ರಗಳನ್ನು ಮತ್ತೆ ವೆಬ್ ಸೀರಿಸ್ ಮಾಡುವುದಾಗಿಯೂ ಘೋಷಣೆ ಮಾಡಿದ್ದರು. ಸದ್ಯದಲ್ಲೇ ಪ್ರಥಮ ಸಿನಿಮಾ ಘೋಷಣೆಯ ವಿಚಾರವನ್ನೂ ಹೇಳಿಕೊಂಡಿದ್ದರು. ಅದರಂತೆ ಸಿನಿಮಾ ಹೆಸರು, ತಾರಾಗಣ ಮತ್ತು ನಿರ್ದೇಶಕರ ಹೆಸರನ್ನೂ ಇಂದು ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ನಟಿ ಸಮಂತಾ ಆರೋಗ್ಯದ ಬಗ್ಗೆ ಮತ್ತೆ ಆತಂಕ: ‘ಶಾಕುಂತಲಾ’ ಸಿನಿಮಾ ರಿಲೀಸ್ ಮುಂದಕ್ಕೆ
ಕಾಂತಾರ ಸಿನಿಮಾ ನೋಡಲು ಬಂದಿದ್ದ ರಮ್ಯಾ, ಮಾಧ್ಯಮಗಳ ಜೊತೆ ಮಾತನಾಡುತ್ತಾ, ದಸರಾ ಹಬ್ಬಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುವುದಾಗಿ ತಿಳಿಸಿದರು. ಅಕ್ಟೋಬರ್ 5 ರಂದು ಆ ಸುದ್ದಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ. ಅಂದುಕೊಂಡಂತೆ ತಾವೇ ನಾಯಕಿಯಾಗಿ ನಟಿಸುತ್ತಿರುವ ಮತ್ತು ನಿರ್ಮಾಣ ಮಾಡುತ್ತಿರುವ ಹಾಗೂ ನಿರ್ದೇಶಕನ ಹೆಸರನ್ನೂ ಇಂದು ತಿಳಿಸಿದ್ದಾರೆ.
ಸೆಪ್ಟಂಬರ್ 30ರಂದೇ ಪಬ್ಲಿಕ್ ಟಿವಿ ಡಿಜಿಟೆಲ್ ಎಕ್ಸ್ ಕ್ಲೂಸಿವ್ ಆಗಿ ಸುದ್ದಿಯನ್ನು ಬ್ರೇಕ್ ಮಾಡಿದ್ದು. ರಮ್ಯಾ ಅವರ ನಿರ್ಮಾಣ ಸಂಸ್ಥೆಯಿಂದ ಪ್ರಥಮ ಚಿತ್ರವಾಗಿ ರಾಜ್ ಬಿ ಶೆಟ್ಟಿ (Raj B Shetty) ನಿರ್ದೇಶನದ ಸಿನಿಮಾ ಬರಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರಾಜ್ ಬಿ ಶೆಟ್ಟಿ ಮತ್ತು ರಮ್ಯಾ ಅವರು ಒಂದು ಸುತ್ತಿನ ಮಾತುಕತೆ ಕೂಡ ಮಾಡಿದ್ದಾರೆ ಎನ್ನಲಾಗುತ್ತಿದೆ. ಪ್ರಥಮ ಚಿತ್ರವಾಗಿ ಅದೇ ನಿರ್ಮಾಣಗೊಳ್ಳಬಹುದಂತೆ. ಬಹುಶಃ ಇದೇ ಸಿನಿಮಾ ಸಮಾಚಾರವನ್ನು ಅವರು ಅಕ್ಟೋಬರ್ 5 (October 5) ರಂದು ತಿಳಿಸಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕು. ಎಂದು ಬರೆಯಲಾಗಿತ್ತು. ಅದು ಈಗ ನಿಜವಾಗಿದೆ.