– ಕುತೂಹಲ ಮೂಡಿಸಿದೆ ರಮ್ಯಾ-ಅಮಿತ್ ನಡೆ
ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರಾಗಿರುವ ರಮ್ಯಾ ಹಾಗು ಅಮಿತ್ ಮಾಳವೀಯ ಚುನಾವಣಾ ರಾಜಕೀಯದ ರಣರಂಗದಲ್ಲಿ ಯಾವಾಗಲೂ ಕಾದಾಡುತ್ತಿರುತ್ತಾರೆ. ಪ್ರತಿದಿನ ಸಹ ಇಬ್ಬರು ಟ್ವಿಟ್ಟರ್ ನಲ್ಲಿ ಒಬ್ಬರಿಗೊಬ್ಬರು ಟಾಂಗ್ ಕೊಡುತ್ತಿರುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ಕಾದಾಟ ನಡೆಸುವ ರಮ್ಯಾ ಮತ್ತು ಅಮಿತ್ ಮಾಳವೀಯಾ ಮಾತ್ರ ಖಾಸಗಿ ಜೀವನದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಭೇಟಿಯಾದ ಇಬ್ಬರೂ ಜೊತೆ ಜೊತೆಯಾಗಿ ನಗುತ್ತಾ ಫೋಟೋ ತೆಗೆಸಿಕೊಂಡಿದ್ದಾರೆ.
Advertisement
ಸದ್ಯ ಇಬ್ಬರ ನಡೆಯ ಮೇಲೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗಳು ಸಹ ನಡೆಯುತ್ತೀವೆ. ಕೆಲವು ದಿನಗಳ ಹಿಂದೆ ಖಾಸಗಿ ಚಾನೆಲ್‍ಗೆ ಫೋನ್ ನಲ್ಲಿ ನೇರ ಸಂಪರ್ಕಕ್ಕೆ ಬಂದಿದ್ದ ಇಬ್ಬರೂ ಒಬ್ಬರ ಮೇಲೋಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದರು.