ಹಾಸನ: ಅಧಿಕಾರಿಗಳು 50:50 ನಿವೇಶನ ಕೊಡುವುದನ್ನು ಯಾವುದೇ ಕಾರಣಕ್ಕೂ ಸಭೆಗೆ ಮಂಡಿಸಲ್ಲ. ಅವರಿಗೆ ಆ ಅಧಿಕಾರವಿದೆ. ಮುಡಾ ಹಗರಣಕ್ಕೆ (MUDA Scam) ಅಧಿಕಾರಿಗಳು ಕಾರಣವೇ ಹೊರತು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಮಿತಿಯಲ್ಲ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ (Ramesha Bandisiddegowda) ಹೇಳಿದರು.
Advertisement
ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಅವರು ನೇರ ಅರ್ಜಿದಾರರಲ್ಲ. ಸಿದ್ದರಾಮಯ್ಯ ಅವರ ಒಂದೇ ಒಂದು ಸಹಿ ಇಲ್ಲ. ಯಾರ ಗಮನಕ್ಕೂ ತರದೇ ಅಧಿಕಾರಿಗಳೇ ಇದನ್ನ ಮಾಡಿದ್ದಾರೆ. ಇದು ಮುಡಾ ಅಧ್ಯಕ್ಷರು ಮತ್ತು ಯಾವ ಸದಸ್ಯರ ಗಮನಕ್ಕೂ ಬರಲ್ಲ. ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಸವಲತ್ತು ಪಡೆದಿರುವ ಎಲ್ಲರ ಹೆಸರು ಹೇಳಬೇಕು. ತನಿಖೆ ನಡೆಯುತ್ತಿದೆ ಸತ್ಯಾಂಶ ಹೊರಬರುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: Fashion Tips| ಹೆಣ್ಣಿಗೆ ಸೀರೆ ಯಾಕೆ ಅಂದ?- ನಾರಿಮಣಿಯರ ಗಮನ ಸೆಳೆದ ಬನಾರಸ್ ಸೀರೆ
Advertisement
Advertisement
ನಾನು ಒಬ್ಬ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ. ನಾನು ಮೂರು ಬಾರಿ ಶಾಸಕನಾಗಿ ಮುಡಾದಲ್ಲಿ ಕೆಲಸ ಮಾಡಿದ್ದೇನೆ. ಅರ್ಜಿ ಇಲ್ಲದೇನೆ ಹೇಗೆ ಮಂಜೂರಾತಿ ಮಾಡಲು ಆಗುತ್ತೆ? ಅರ್ಜಿ ಇಲ್ಲ ಎಂದು ನಾವೇನು ಹೇಳಿಲ್ಲ. ಮಂಜೂರಾತಿ ಮಾಡಿಕೊಡಿ ಎಂದು ಅರ್ಜಿ ಕೊಟ್ಟಿದ್ದಾರೆ. ತಪ್ಪು ಬರೆದಾಗ ವೈಟ್ನರ್ ಹಾಕೋದು ಸಹಜ. ನ್ಯಾಯಾಂಗ ತನಿಖೆಗೆ ಕೊಟ್ಟಿದ್ದೇವೆ ಪರಿಶೀಲನೆ ಮಾಡಲಿ ಎಂದು ತಿಳಿಸಿದರು. ಇದನ್ನೂ ಓದಿ: ಮಂಕಿಪಾಕ್ಸ್ ಕಾಯಿಲೆ ಮುಂಜಾಗ್ರತ ಕ್ರಮವಾಗಿ ವಿಕ್ಟೋರಿಯಾದಲ್ಲಿ 50 ಬೆಡ್ ಮೀಸಲು – ಶರಣ ಪ್ರಕಾಶ್ ಪಾಟೀಲ್
Advertisement
ಯಡಿಯೂರಪ್ಪ (BS Yediyurappa) ಅವರ ತಂಗಿ ಮಕ್ಕಳಿಗೆ ನಿವೇಶನಗಳನ್ನು ಕೊಟ್ಟಿಲ್ವಾ? 50:50 ಯಲ್ಲಿ ನಿವೇಶನ ತಗೊಂಡಿಲ್ವಾ? ಪ್ರಾಮಾಣಿಕರಾಗಿದ್ದರೆ ಅವರು ತಿಳಿಸಲಿ. ಜೆಡಿಎಸ್ ಶಾಸಕರು (JDS MLAs) 50:50 ಹಂಚಿಕೆ ಅಡಿಯಲ್ಲಿ ಎಷ್ಟು ನಿವೇಶನ ತೆಗೆದುಕೊಂಡಿದ್ದಾರೆ? 1800-2000 ಸೈಟ್‌ಗಳನ್ನು ವ್ಯವಸ್ಥಿತವಾಗಿ ತೆಗೆದುಕೊಂಡಿದ್ದಾರಲ್ಲಾ? ಅದು ಯಾರದ್ದು? ಇವರು, ಇವರ ತಮ್ಮನ ಮಕ್ಕಳು, ಅಕ್ಕನ ಮಕ್ಕಳು, ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳಿಗೆ ಕೊಟ್ಟಿಲ್ವಾ? ಎಂದು ಕಿಡಿಕಾರಿದರು.
ಸಿಎಂ, ಡಿಸಿಎಂ ದೆಹಲಿ ಭೇಟಿಯ ವಿಚಾರ ತಿಳಿಸಿದ ಅವರು, ಎಲ್ಲಾ ಶಾಸಕರು ದೆಹಲಿಗೆ ಹೋಗಿಲ್ಲ. ಸಿಎಂ ಮತ್ತು ಡಿಸಿಎಂ ಅವರು ರಾಜ್ಯದ ಇವತ್ತಿನ ಪರಿಸ್ಥಿತಿ ಬಗ್ಗೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಹಿತಿ ನೀಡಲು ದೆಹಲಿಗೆ ಹೋಗಿದ್ದಾರೆ. ಅವರನ್ನು ದೆಹಲಿಗೆ ಹೋಗುವುದಕ್ಕೆ ಎಲ್ಲಾ ಶಾಸಕರು ಒತ್ತಾಯ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸಂಬಂಧಿಕನಿಂದಲೇ 10ರ ಬಾಲಕಿ ಮೇಲೆ ಅತ್ಯಾಚಾರ – ಅರೆಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆ; ಕಾಮುಕ ಅರೆಸ್ಟ್
ರಾಷ್ಟ್ರಪತಿ ಅವರನ್ನು ಭೇಟಿ ಮಾಡೋಣ ಎಂದಿದ್ದೇವೆ. ಬಿಜೆಪಿ-ಜೆಡಿಎಸ್ ನವರು ಗದಾಪ್ರಹಾರ ಮಾಡುತ್ತಿದ್ದಾರೆ. ಅದನ್ನು ರಾಷ್ಟ್ರಪತಿಗಳಿಗೆ ಮನದಟ್ಟು ಮಾಡಿಕೊಡೋಣ ಎಂದು ಹೇಳಿದ್ದೇವೆ. ಆದಷ್ಟು ಬೇಗ ಎಲ್ಲಾ ಶಾಸಕರು ಹೋಗಿ ರಾಷ್ಟ್ರಪತಿಗಳನ್ನು ಭೇಟಿ ಮಾಡುತ್ತೇವೆ ಎಂದು ಹೇಳಿದರು.