ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಶ್ರೀಕೃಷ್ಣ ಎಂದ ಶಾಸಕ ರಮೇಶ್ ಕುಮಾರ್ ಪ್ರಸ್ತಾಪ ಪಟೇಲರು, ರಾಮಕೃಷ್ಣ ಹೆಗಡೆ ಅವರನ್ನು ಇಂದು ವಿಧಾನಸಭೆಯಲ್ಲಿ ನೆನಪಿಸಿಕೊಳ್ಳುವಂತೆ ಮಾಡಿತು.
Advertisement
ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಅಗತ್ಯತೆ ಕುರಿತ ಚರ್ಚೆ ವೇಳೆ ಸಿದ್ದರಾಮಯ್ಯ ಮಾತನಾಡುವಾಗ ರಾಮನ ಲೆಕ್ಕ – ಕೃಷ್ಣನ ಲೆಕ್ಕದ ಬಗ್ಗೆ ಪ್ರಸ್ತಾಪಿಸಿದ್ರು. ಚುನಾವಣೆ ಮುಗಿದ ಬಳಿಕ ಒಂದು ತಿಂಗಳಲ್ಲಿ ಖರ್ಚು ವೆಚ್ಚ ಕೊಡಬೇಕು ಅಂತ ಚುನಾವಣಾ ಆಯೋಗ ಹೇಳುತ್ತದೆ. ಆದರೆ ನಾವು ಆತ್ಮವಂಚನೆ ಮಾಡಿಕೊಂಡು ಲೆಕ್ಕ ಹೇಳ್ತೇವೆ. ಆಯೋಗಕ್ಕೆ ಕೊಡುವಾಗ ರಾಮನ ಲೆಕ್ಕ – ಭೀಮನ ಲೆಕ್ಕ ಅಂತ ಕೊಡ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ರು. ಆಗ ಸಿದ್ದರಾಮಯ್ಯ ಮಾತಿಗೆ ಸಿದ್ದು ಸವದಿ ಆಕ್ಷೇಪ ಅದು ರಾಮನ ಲೆಕ್ಕ – ಕೃಷ್ಣನ ಲೆಕ್ಕ ಎಂದ್ರು. ಆಗ ಸಿದ್ದರಾಮಯ್ಯ ಮಾತನಾಡಿ ಯಾಕೇ ಭೀಮನ ಲೆಕ್ಕ ಅಲ್ವಾ? ಯಾಕೆ ಭೀಮ ಬೇಡ್ವಾ? ಕೃಷ್ಣನ ಲೆಕ್ವಾ? ಓಕೆ ರಾಮನ ಲೆಕ್ಕ – ಕೃಷ್ಣನ ಲೆಕ್ಕ ಬಿಡಿ ಎಂದರು. ಇದನ್ನೂ ಓದಿ: ಚುನಾವಣಾ ವ್ಯವಸ್ಥೆ ಬದಲಾಗದಿದ್ರೆ ಪ್ರಜಾಪ್ರಭುತ್ವ ದುರ್ಬಲವಾಗುತ್ತೆ: ಸಿದ್ದರಾಮಯ್ಯ
Advertisement
Advertisement
ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಶಾಸಕ ರಮೇಶ್ ಕುಮಾರ್, ಅದು ರಾಮನ ಲೆಕ್ಕ – ಕೃಷ್ಣನ ಲೆಕ್ಕ ಅಂತ ಮಾಮೂಲು ಹೇಳೋದು. ರಾಮನಿಗೆ ಒಬ್ಬ ಪತ್ನಿ – ಕೃಷ್ಣನಿಗೆ ಲೆಕ್ಕ ಇಲ್ಲ. ನೀವು ಹೇಗಿದ್ದರೂ ಕೃಷ್ಣ ಅಲ್ವಾ ಅಂತಾ ರಮೇಶ್ ಕುಮಾರ್ ಸಿದ್ದರಾಮಯ್ಯ ಕಾಲೆಳೆದ್ರು. ಅದಕ್ಕೆ ಜೆ.ಹೆಚ್.ಪಟೇಲ್ ಹೇಳಿಕೆ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಹಿಂದೆ ಜೆ ಹೆಚ್ ಪಟೇಲ್ ಹೇಳ್ತಾ ಇದ್ರು. ನಾನು ಮೊದಲು ಕಚ್ಚೆ ಹಾಕ್ತಿದೆ, ಅಮೇಲೆ ಪಂಚೆ ಹಾಕಲು ಶುರು ಮಾಡಿದೆ, ಏಕೆಂದರೆ ನನ್ನ ಕಚ್ಚೆ ಹರಕ ಅಂತಿದ್ರು ಅಂತಾ ಪಟೇಲರು ಹೇಳ್ತಿದ್ರು. ಈ ಸಮಾಜದಲ್ಲಿ ಎರಡು ವರ್ಗ ಇರುತ್ತದೆ – ಒಂದು ರಾಮನ ವರ್ಗ – ಇನ್ನೊಂದು ಕೃಷ್ಣನ ವರ್ಗ. ನಾನು ಕೃಷ್ಣನ ವರ್ಗದವನು ಅಂತ ಪಟೇಲ್ ಹೇಳ್ತಾ ಇದ್ರು ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು. ಇದನ್ನೂ ಓದಿ: ಡಿಕೆಶಿ ವಿದೇಶಕ್ಕೆ ತೆರಳಲು ಅನುಮತಿ ನೀಡಿದ ದೆಹಲಿ ಹೈಕೋರ್ಟ್
Advertisement
ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶ ಮಾಡಿ, ರಾಮಕೃಷ್ಣ ಹೆಗಡೆ ಅವರ ಬರ್ತ್ ಡೇ ದಿನ ಕಾರ್ಯಕ್ರಮದಲ್ಲೇ ಪಟೇಲರು ಬಹಿರಂಗವಾಗಿ ಹೇಳಿಕೆ ನೀಡಿದ್ರು. ಹೆಗಡೆ ಅವರೇ ಇಷ್ಟು ವರ್ಷ ಆಯ್ತು. ಇಷ್ಟು ದಿನ ಕೃಷ್ಣನ ಥರಾ ಇದ್ರಿ, ಇನ್ನು ಮುಂದೆಯಾದ್ರೂ ರಾಮನ ಥರಾ ಇರಿ ಎಂದು ಪಟೇಲರು ಅಂದಿದ್ದರು ಎಂದು ಸಿಎಂ ನೆನಪಿಸಿಕೊಂಡ್ರು. ಇಬ್ಬರು ಮಾಜಿ ಸಿಎಂಗಳ ಅಂದಿನ ಮಾತುಕತೆ ಪ್ರಸಂಗ ಹೇಳಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು.