ಕೋಲಾರ: ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯಕಟ್ಟಿಕೊಳ್ಳಿ ರಮೇಶ್ ಸರ್ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕೋಲಾರದ ಪೊಲೀಸ್ ಇಲಾಖೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದ ವೀಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.
Advertisement
ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಅವರ ಕಾರ್ಯವೈಖರಿಯ ಬಗ್ಗೆ ರಮೇಶ್ ಕುಮಾರ್ ಅವರು ತರಾಟೆಗೆ ತೆಗೆದುಕೊಂಡಿದ್ದರು. ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಚಾರವಾಗಿ ಮಾಜಿ ಸ್ವೀಕರ್ ವಿರುದ್ಧ ಪೊಲೀಸ್ ಇಲಾಖೆಯಲ್ಲಿ ಆಕ್ರೋಶ ಭುಗಿಲೆದಿದೆ.ಇದನ್ನೂ ಓದಿ: ಮಂಗಳೂರು ಏರ್ ಪೋರ್ಟ್ ರ್‍ಯಾಪಿಡ್ ಪಿಸಿಆರ್ ಟೆಸ್ಟ್ – ಅನಿವಾಸಿಗಳ ಬೇಡಿಕೆಗೆ ಸ್ಪಂದಿಸಿದ ದ.ಕ. ಡಿಸಿ
Advertisement
ಪೊಲೀಸರು ಯಾವುದೇ ವಾಹನಗಳನ್ನು ತಪಾಸಣೆ ಮಾಡುವಂತಿಲ್ಲ, ದಂಡ ಹಾಕುವಂತಿಲ್ಲ ಎಂದು ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯಕಟ್ಟಿಕೊಳ್ಳಿ ರಮೇಶ್ ಕುಮಾರ್ ಸರ್. ಈ ನಿಮ್ಮ ಒಳ್ಳೆಯತನಕ್ಕಾದರು ಪೊಲೀಸರಿಗೆ ಬಿಪಿ, ಶುಗರ್ ಮಾಯವಾಗಲಿ. ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ನೀಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ರಮೇಶ್ ಅವರಿಗೆ ಟಕ್ಕರ್ ಕೊಡುತ್ತಿದ್ದಾರೆ. ಸ್ಟೇಟಸ್ ಹಾಗೂ ಫೇಸ್ಬುಕ್‍ನಲ್ಲಿ ರಮೇಶ್ ಅವರ ವಿರುದ್ಧ ಇಲಾಖೆಯ ಸಿಬ್ಬಂದಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ನಮಗೆ ಅಧಿಕಾರ ಕೊಟ್ಟವರು ನೀವೇ ಅದನ್ನು ಪ್ರಶ್ನೆ ಮಾಡುವವರು ನೀವೇ ಎಂದು ಟಾಂಗ್ ಕೊಟ್ಟಿದ್ದಾರೆ.ಇದನ್ನೂ ಓದಿ:ಲಾಲ್‍ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಮತ್ತೊಂದು ಉದ್ಯಾನವನ: ತೋಟಗಾರಿಕೆ ಸಚಿವ ಮುನಿರತ್ನ
ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದರ ಪರ ವಿರೋಧದ ಚರ್ಚೆ ನಡೆಯುತ್ತಿದೆ.ಇದನ್ನೂ ಓದಿ:ರಮೇಶ್ ಕುಮಾರ್ ವಿರುದ್ಧ ಜೆ.ಪಿ ನಗರ ಎಎಸ್‍ಐ ಗರಂ