ಬೆಂಗಳೂರು: ಅಲಿಖಾನ್ ಮುಖಾಂತರ ನಾನು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ 18 ಕೋಟಿ ರೂ. ಮೌಲ್ಯದ 57 ಕೆ.ಜಿ. ಚಿನ್ನವನ್ನು ನೀಡಿದ್ದೇನೆ ಎಂದು ಅಂಬಿಕಾ ಜ್ಯೂವೆಲರ್ಸ್ ಮಾಲೀಕ ರಮೇಶ್ ಕೊಠಾರಿ ಸಿಆರ್ ಪಿಸಿ 164 (ತಪ್ಪೊಪ್ಪಿಗೆ ಹೇಳಿಕೆ) ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸಿದ್ದಾರೆ. ಸಿಸಿಬಿ ಅಧಿಕಾರಿಗಳು ನ್ಯಾಯಾಧೀಶರ ಮುಂದೆಯೇ ಎಲ್ಲ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ
ಇಡಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಬಿಡೆಂಟ್ ಕಂಪನಿ ಮಾಲೀಕ ಫರೀದ್ ಪುತ್ರ ಸೈಯದ್ 57 ಕೆಜಿ ಚಿನ್ನವನ್ನು ಜನಾರ್ದನ ರೆಡ್ಡಿಗೆ ನೀಡಲು ಮುಂದಾಗಿದ್ದನು. ಅಲಿಖಾನ್ ಆಪ್ತ ಬಳ್ಳಾರಿಯ ರಾಜಮಹಲ್ ಜ್ಯೂವೆಲರ್ಸ್ ನ ರಮೇಶ್ ಎಂಬವರನ್ನು ಸಂಪರ್ಕಿಸಿದ್ದನು. ಈ ವೇಳೆ ರಾಜಮಹಲ್ ಜ್ಯೂವೆಲರ್ಸ್ ಮಾಲೀಕ ರಮೇಶ್ 57 ಕೆಜಿ ಚಿನ್ನವನ್ನು ನೀಡಲು ಒಪ್ಪಿದ್ದನು. 18 ಕೆಜಿ ಚಿನ್ನಕ್ಕಾಗಿ ರಮೇಶ್, ಬೆಂಗಳೂರಿನ ಅಂಬಿಕಾ ಜ್ಯೂವೆಲರ್ಸ್ ಮಳಿಗೆಯ ಮಾಲೀಕ ರಮೇಶ್ ಕೊಠಾರಿಯಾ ಎಂಬವರನ್ನು ಸಂಪರ್ಕ ಮಾಡಲಾಗಿತ್ತು.
Advertisement
Advertisement
ಬಳ್ಳಾರಿಯ ರಮೇಶ್ ಬೆಂಗಳೂರಿನಿಂದ ಚಿನ್ನ ಖರೀದಿಸಿ ಸೈಯದ್ ನೀಡಿದ್ದನು. ಕೊನೆಗೆ ಸೈಯದ್ ಎಲ್ಲ ಚಿನ್ನವನ್ನು ಜನಾರ್ದನ ರೆಡ್ಡಿಗೆ ತಲುಪಿಸಿದ್ದನು. ಈ ಸಂಬಂಧ ಸಿಸಿಬಿ ಪೊಲೀಸರು ರಮೇಶ್ ಕೊಠಾರಿಯಾರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಇಂದು ನ್ಯಾಯಾಧೀಶರ ಮುಂದೆ ರಮೇಶ್ ಕೊಠಾರಿಯಾ ಚಿನ್ನ ನೀಡಿದ್ದಾಗಿ ತಪ್ಪೊಪ್ಪಿಕೊಂಡಿದ್ದರಿಂದ, ಸಿಸಿಬಿ ವಿಚಾರಣೆಯಲ್ಲಿರುವ ಜನಾರ್ದನ ರೆಡ್ಡಿಯ ಬಂಧನವಾಗುವ ಸಾಧ್ಯತೆಗಳಿವೆ.
Advertisement
ರೆಡ್ಡಿ ಎಂಟ್ರಿ ಹೇಗಾಯ್ತು?
ಇಡಿಯಲ್ಲಿ ಕೇಸ್ ದಾಖಲಾದ ಬಳಿಕ ಮುಂದೆ ಕಷ್ಟವಿದೆ ಎನ್ನುವುದನ್ನು ಅರಿತ ಸೈಯದ್ ಜನಾರ್ದನ ರೆಡ್ಡಿಯ ಸಹಾಯ ಕೋರಿದ್ದ. ಹೀಗಾಗಿ ಜನಾರ್ದನ ರೆಡ್ಡಿ, ರೆಡ್ಡಿ ಆಪ್ತ ಅಲಿಖಾನ್ ಮತ್ತು ಸೈಯದ್ ಒಂದು ಕಡೆ ಸಭೆ ನಡೆಸಿದ್ದರು. ಸಭೆಯಲ್ಲಿ ಈ ಪ್ರಕರಣದಲ್ಲಿ ಪಾರಾಗಲು ರೆಡ್ಡಿ 20 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ. ಒಪ್ಪಂದದ ಪ್ರಕಾರ 20 ಕೋಟಿ ರೂ.ವನ್ನು ಚಿನ್ನದ ರೂಪದಲ್ಲಿ ನೀಡುವಂತೆ ಜನಾರ್ದನ ರೆಡ್ಡಿ ಷರತ್ತು ವಿಧಿಸಿದ್ದರು.
Advertisement
ಯಾವುದಿದು ಅಂಬಿಡೆಂಟ್ ಕಂಪನಿ?
ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ದುಬೈ ಮೂಲದ ಉದ್ಯಮಿಗಳು ಸ್ಥಾಪಿಸಿದ್ದಾರೆ. ಈ ಕಂಪನಿಯ ಕಚೇರಿ ಬೆಂಗಳೂರಿನ ಕನಕನಗರದ ಮುಖ್ಯರಸ್ತೆಯಲ್ಲಿದೆ. ಈ ಕಂಪನಿಯನ್ನು ನಡೆಸುತ್ತಿದ್ದ, ಸೈಯದ್ ಅಹಮದ್, ನಿಮ್ಮ ಹಣವನ್ನ ಒಂದು ವರ್ಷದಲ್ಲಿ ದ್ವಿಗುಣ ಮಾಡಿಕೊಡುತ್ತೇವೆ ಎಂದು ಜನರಿಂದ ಹಣ ಪಡೆಯುತ್ತಿದ್ದ. ಗ್ರಾಹಕರಿಂದ ಕನಿಷ್ಠ ಹೂಡಿಕೆ ಎಂದು ಹೇಳಿ ಒಂದು ಲಕ್ಷ ರೂ. ಪಡೆದು, ಪ್ರತಿ ಮೂರು ತಿಂಗಳಿಗೊಮ್ಮೆ 40 ಸಾವಿರ ರೂ.ದಂತೆ ವರ್ಷಕ್ಕೆ 1.60 ಸಾವಿರ ವಾಪಸ್ಸು ಕೊಡುವುದಾಗಿ ಗ್ರಾಹಕರನ್ನು ನಂಬಿಸಿದ್ದ. ಹೀಗಾಗಿ ಇಲ್ಲಿ ಸಾವಿರಾರು ಜನರು ಹೂಡಿಕೆ ಮಾಡಿದ್ದರು. ಇದೇ ದೋಖಾ ಕಂಪೆನಿಯಲ್ಲಿ ಬೇನಾಮಿ ಹೆಸರಲ್ಲಿ ರೆಡ್ಡಿ ಆಪ್ತ ಅಲಿಖಾನ್ ಹಣ ಹೂಡಿಕೆ ಮಾಡಿದ್ದ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews