ವಿಜಯಪುರ: ಗೋರಿಯಲ್ಲಿ ಕಾಲಿಡಲು ಹೊರಟ ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಾ? ನಾನು ಹುಟ್ಟಿದಾಗಿನಿಂದಲೂ ಕಾಂಗ್ರೆಸ್ ವಿರೋಧಿ ಎಂದು ಸಂಸದ ಜಿಗಜಿಣಗಿ (Ramesh Jigajinagi) ತಿಳಿಸಿದರು.
ಕಾಂಗ್ರೆಸ್ (Congress) ಪಕ್ಷಕ್ಕೆ ಹೋಗುತ್ತಾರೆ ಎಂಬ ವದಂತಿ ವಿಚಾರಕ್ಕೆ ವಿಜಯಪುರದಲ್ಲಿ (Vijayapura) ಸ್ಪಷ್ಟನೆ ನೀಡಿದರು. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿರುವ ಅನ್ಯಾಯದಿಂದ ನಾನು ಆ ಪಕ್ಷಕ್ಕೆ ಮೊದಲಿನಿಂದಲೂ ವಿರೋಧ ಮಾಡುತ್ತಿದ್ದೇನೆ. ಈ ಹಿಂದೆ ನಮ್ಮ ದಲಿತ ಸಮುದಾಯದಲ್ಲಿ ವಿದ್ಯಾವಂತರಿರಲಿಲ್ಲ. ಈಗ ಎಲ್ಲರೂ ವಿದ್ಯಾವಂತರಿದ್ದಾರೆ. ತಿಳಿದುಕೊಂಡಿರುವವರು ಇದ್ದಾರೆ ಎಂದರು.
Advertisement
Advertisement
ಈಗ ನಮ್ಮ ಜನರಿಗೆ ಹೋಗಿ ಕೇಳಿದರೆ ಕಾಂಗ್ರೆಸ್‌ನಿಂದ ಆದಂತಹ ಅನ್ಯಾಯದ ಕುರಿತು ಅವರೇ ಹೇಳುತ್ತಾರೆ. ಹಿಂದೆ ನಾನೇ ಚುನಾವಣೆಗೆ ನಿಂತಾಗ ನಮ್ಮ ಅಜ್ಜಿ ನನಗೆ ಮತ ಹಾಕಿರಲಿಲ್ಲ, ಕಾಂಗ್ರೆಸ್ ಪಕ್ಷಕ್ಕೆ ಹಾಕಿದ್ದರು. ಆದರೆ ಈಗ ದಲಿತ ಸಮುದಾಯದವರು ಪ್ರಜ್ಞಾವಂತರಾಗಿದ್ದಾರೆ ಎಂದು ಹೇಳಿದರು.
Advertisement
ಬಿಜೆಪಿಯಲ್ಲಿ ಚುನಾವಣೆಗೆ ವಯಸ್ಸಿನ ಮಿತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿ (BJP) ಬಿ.ಎಸ್ ಯಡ್ಡಿಯೂರಪ್ಪ ಅವರಿಗೆ ಟಿಕೆಟ್ ಕೊಟ್ಟಿಲ್ವ. ಹಾಗಾದರೆ ನನಗೆ ಅನ್ವಯಿಸುತ್ತಾ ವಯಸ್ಸಿನ ಮಿತಿ. ಕೇವಲ ದಲಿತರಿಗೆ ಬೇಡ ಅಂತಾರಾ ಬಿಜೆಪಿಯವರು ಎಂದು ಪ್ರಶ್ನಿಸಿದರು. ಉಕ್ರೇನ್ ಮೇಲೆ ಏಕಕಾಲಕ್ಕೆ 120 ಕ್ಷಿಪಣಿಗಳ ದಾಳಿ ನಡೆಸಿದ ರಷ್ಯಾ
Advertisement
ನಾನು ನಾಗಠಾಣ ವಿಧಾನಸಭಾ ಆಕಾಂಕ್ಷಿನೂ ಅಲ್ಲ, ಲೋಕಸಭಾ ಆಕಾಂಕ್ಷಿನೂ ಅಲ್ಲ. ಟಿಕೆಟ್ ಕೊಟ್ರೆ ಸ್ಪರ್ಧಿಸುತ್ತೇನೆ ಇಲ್ಲ ಅಂದ್ರೆ ಮನೆಯಲ್ಲಿ ಆರಾಮಾಗಿ ಇರುತ್ತೇನೆ. ರಾಜ್ಯದಲ್ಲಿ ದಲಿತ ಸಿಎಂ ಆಗುವುದಿದ್ದರೆ ಈ ಜಗತ್ತಿನಲ್ಲಿ ಯಾರಿಂದಲೂ ತಪ್ಪಿಸಲು ಆಗುವುದಿಲ್ಲ ಎಂದು ಭವಿಷ್ಯ ನುಡಿದರು. ನಾಳೆ ಮಂಡ್ಯಕ್ಕೆ ಅಮಿತ್ ಶಾ ಗ್ರ್ಯಾಂಡ್ ಎಂಟ್ರಿ – ಅನ್ನದಾತರ ಕಿಚ್ಚಿಗೆ ಬೆದರಿ ಕಾರ್ಯಕ್ರಮ ದಿಢೀರ್ ಬದಲಾವಣೆ