ಹುಬ್ಬಳ್ಳಿ: ಸಿಡಿ ಷಡ್ಯಂತ್ರ (CD Case) ಬಗ್ಗೆ ಸಿಬಿಐ (CBI) ತನಿಖೆಗೆ ತ್ರೀವಾಗಿ ಒತ್ತಾಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಮತ್ತೆ ಬುಧವಾರ ದೆಹಲಿ (Delhi) ದಂಡಯಾತ್ರೆ ಕೈಗೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಮತ್ತೆ ದೆಹಲಿ ಪ್ರವಾಸ ಕೈಗೊಂಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ತಮ್ಮ ಆಪ್ತ ಕಿರಣ್ ಜಾಧವ್ ಹಾಗೂ ಹಿಂಡಲಗಾ ಗ್ರಾ.ಪಂ. ಅಧ್ಯಕ್ಷ ನಾಗೇಶ್ ಮನ್ನೋಳ್ಕರ್ ಜೊತೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಯತ್ತ ಜಾರಕಿಹೊಳಿ ಪ್ರಯಾಣ ಬೆಳೆಸಿದ್ದಾರೆ.
ಕಳೆದ ವಾರ ಜಾರಕಿಹೊಳಿ ಅಮಿತ್ ಶಾ (Amit Shah) ಭೇಟಿಯಾಗಿದ್ದರು ಈ ವೇಳೆ ಬುಧವಾರ ಅಥವಾ ಗುರುವಾರ ತಮಗೆ ಕರೆಯಿಸಿ ಮಾತನಾಡುವೆ ಎಂದು ಶಾ ಭರವಸೆ ನೀಡಿದ್ದರು ಎನ್ನಾಲಾಗಿದೆ. ಅಮಿತ್ ಶಾ ಕರೆಯ ನಿರೀಕ್ಷೆಯಲ್ಲಿ ದೆಹಲಿಗೆ ತೆರಳುತ್ತಿರುವ ರಮೇಶ್ ಜಾರಕಿಹೊಳಿ ಸಾಧ್ಯವಾದರೆ ಗುರುವಾರ ಸಂಜೆ ಮತ್ತೆ ಶಾ ಭೇಟಿ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ: ತೇಜಸ್ವಿ ಸೂರ್ಯಗೆ ಅಮಾವಾಸ್ಯೆ ಎಂದು ಕರೆಯುತ್ತೇನೆ: ಸಿದ್ದರಾಮಯ್ಯ
ರಾಜಕೀಯ ಬದ್ಧ ವೈರಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ತಮ್ಮ ಆಪ್ತ ನಾಗೇಶ್ ಮನ್ನೋಳ್ಕರ್ ಅವರನ್ನು ಕಣಕ್ಕಿಳಿಸಲು ರಮೇಶ್ ಜಾರಕಿಹೊಳಿ ಭರ್ಜರಿ ತಯಾರಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿಯೇ ನಾಗೇಶ್ ಮನ್ನೋಳ್ಕರ್ ಅವರನ್ನು ದೆಹಲಿಗೆ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಹೈಕಮಾಂಡ್ ಭೇಟಿ ಮಾಡಲಿದ್ದಾರೆಂದು ಆಪ್ತ ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ. ಇದನ್ನೂ ಓದಿ: ಸತ್ಯವನ್ನು ಹೇಳಲು ಧೈರ್ಯ ಇಲ್ಲದವನು ರಾಜಕೀಯ ನಪುಂಸಕ- ಹೆಚ್ಡಿಕೆ ವಿರುದ್ಧ ಸಿಟಿ ರವಿ ವಾಗ್ದಾಳಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k