ಬೆಂಗಳೂರು: ರಮೇಶ್ ಜಾರಕಿಹೊಳಿ (Ramesh Jarkiholi) ಅವರಿಗೆ ಡಿಕೆ ಶಿವಕುಮಾರ್ (DK Shivakumar) ಮೇಲಿನ ಸಿಟ್ಟು ಹಾಗೂ ಸಿಡಿ (CD) ಜಿದ್ದು ತೀವ್ರಗೊಂಡಿದೆ. ಯಾರ ಮಾತೂ ಕೇಳದ ಸಾಹುಕಾರ್ ಸಿಡಿ ಕೇಸ್ ಸಿಬಿಐ ತನಿಖೆಗೆ ಕೊಡುವಂತೆ ಪಟ್ಟು ಮುಂದುವರಿಸಿದ್ದಾರೆ. ಈ ಚುನಾವಣೆಯೊಳಗೆ ಸಿಬಿಐಗೆ (CBI) ಕೇಸ್ ಕೊಡಿಸಲು ಹಠ ಹಿಡಿದು ಕೂತಿದ್ದಾರೆ. ಈ ಮೂಲಕ ಡಿಕೆಶಿ ಮೇಲೆ ಸೇಡು ತೀರಿಸಿಕೊಳ್ಳಲು ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ.
ಇದೀಗ ಸಾಹುಕಾರ್ ವೇಗಕ್ಕೆ ಬ್ರೇಕ್ ಹಾಕಲು ಅವರ ಕುಟುಂಬ ಮುಂದಾಗಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡೆಗೆ ಅವರ ಸಹೋದರರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಸಾಹುಕಾರ್ ಧೋರಣೆ, ಹಠ ಒಪ್ಪದ ಜಾರಕಿಹೊಳಿ ಸಹೋದರರು, ಇಷ್ಟೊಂದು ದ್ವೇಷ ಬೇಡ, ಸರಿಯಲ್ಲ ಎಂದು ಕಿವಿ ಮಾತು ಹೇಳಿದ್ದಾರೆನ್ನಲಾಗಿದೆ.
Advertisement
Advertisement
ನಿನ್ನ ಹಠದಿಂದ ಈಗಾಗಲೇ ಸಾಕಷ್ಟು ನಷ್ಟ ಆಗಿಹೋಗಿದೆ. ಈ 2 ವರ್ಷ ನಮ್ಮ ಕುಟುಂಬವೂ ಮುಜುಗರ ಅನುಭವಿಸಿದೆ. ಈಗ ಇದೆಲ್ಲವನ್ನೂ ನಿಲ್ಲಿಸು. ಇನ್ನು ಇದನ್ನು ಮುಂದುವರಿಸಿದರೆ ಮತ್ತಷ್ಟು ಆಪತ್ತು, ನಷ್ಟ ಆಗುತ್ತದೆ. ನೀನು ಅವರತ್ತ ಕಲ್ಲೆಸೆದರೆ ಅವರೂ ನಿನ್ನೆಡೆ ಎಸೆಯುತ್ತಾರೆ. ಈ ರೀತಿ ಸೇಡಿನ ರಾಜಕೀಯಕ್ಕೆ ಅಂತ್ಯ ಇರುವುದಿಲ್ಲ, ಇದರಿಂದ ವಿನಾಶ ಮಾತ್ರ. ಸಾರ್ವಜನಿಕ ಬದುಕು, ಮುಂದೆ ನಡೆಯುವ ಹಾದಿಯ ಬಗ್ಗೆ ಗಮನ ಕೊಡು ಎಂದು ಜಾರಕಿಹೊಳಿ ಸಹೋದರರು ಅಣ್ಣ ರಮೇಶ್ ಜಾರಕಿಹೊಳಿಗೆ ಉಪದೇಶ ಮಾಡಿದ್ದಾರೆ.
Advertisement
Advertisement
ಇದೀಗ ಸಹೋದರರ ಸಲಹೆಗೆ ಗೋಕಾಕ್ ಸಾಹುಕಾರ್ ನಡೆ ಏನು ಎನ್ನುವ ಕುತೂಹಲ ಮೂಡಿದೆ. ಸಹೋದರರ ಉಪದೇಶಕ್ಕೆ ರಮೇಶ್ ಜಾರಕಿಹೊಳಿ ಮಣಿಯುತ್ತಾರಾ ಅಥವಾ ಇಲ್ಲವಾ ಎನ್ನುವುದು ಸ್ಪಷ್ಟವಿಲ್ಲ. ಇನ್ನುಮೇಲಾದರೂ ರಮೇಶ್ ಸಿಟ್ಟು, ಜಿದ್ದು ತಣ್ಣಗಾಗುತ್ತಾ ಎಂಬುದು ಅವರ ಬೆಂಬಲಿಗರೂ ನಿರೀಕ್ಷೆ ಹುಟ್ಟಿಸಿದೆ. ಅಥವಾ ನನಗೆ ನನ್ನ ಹಠ, ಸೇಡೇ ಮುಖ್ಯ ಎಂದು ಸಿಡಿ ವಾರ್ ಮುಂದುವರಿಸುತ್ತಾರಾ ಎಂಬುದು ತಿಳಿಯದೇ ಹೋಗಿದೆ. ಇದನ್ನೂ ಓದಿ: ಕಾರ್ಕಳದಿಂದ ಮುತಾಲಿಕ್ ಸ್ಪರ್ಧೆ – ಬಿಜೆಪಿಯಿಂದ ಅಭ್ಯರ್ಥಿ ಹಾಕಬೇಡಿ: ಶ್ರೀರಾಮಸೇನೆ ಒತ್ತಾಯ
ಆದರೆ ಇದಕ್ಕೆ ವ್ಯತಿರಿಕ್ತವೆಂಬಂತೆ ರಮೇಶ್ ಜಾರಕಿಹೊಳಿ ಇದೀಗ ದೆಹಲಿಗೆ ಹೊರಟು ನಿಂತಿದ್ದಾರೆ. ಗುರುವಾರ ಸಂಜೆ ದೆಹಲಿಗೆ ತೆರಳಲಿರುವ ಸಾಹುಕಾರ್ ಶುಕ್ರವಾರ ಅಮಿತ್ ಶಾ ಭೇಟಿಗೆ ಮುಂದಾಗಲಿದ್ದಾರೆ. ಸಿಡಿ ಕೇಸ್ ಸಿಬಿಐ ತನಿಖೆಗೆ ವಹಿಸುವಂತೆ ಅಮಿತ್ ಶಾ ಬಳಿ ರಮೇಶ್ ಮತ್ತೊಮ್ಮೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಇತ್ತೀಚೆಗೆ ಅಮಿತ್ ಶಾ ಬೆಳಗಾವಿಗೆ ಬಂದಾಗಲೂ ಇದೇ ಒತ್ತಾಯವನ್ನು ರಮೇಶ್ ಜಾರಕಿಹೊಳಿ ಪ್ರಸ್ತಾಪಿಸಿದ್ದರು. ಒಟ್ಟಿನಲ್ಲಿ ಸಿಡಿ ಕೇಸ್ ಹೈಕಮಾಂಡ್ ಅಂಗಳಕ್ಕೆ ತಲುಪುತ್ತಿದ್ದು, ಮುಂದಿನ ವಿದ್ಯಮಾನಗಳು ಕುತೂಹಲ ಮೂಡಿಸಿವೆ. ಇದನ್ನೂ ಓದಿ: ಸೊರಬದಲ್ಲಿ ಸಹೋದರರ ಸವಾಲ್ – ದಾಯಾದಿಗಳ ಜಿದ್ದಾಜಿದ್ದಿ ಈ ಬಾರಿ ಮತ್ತಷ್ಟು ಜೋರು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k