ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಅತ್ಯಾಚಾರ ಪ್ರಕರಣ ಸಂತ್ರಸ್ತೆ ಎಸ್‍ಐಟಿ ರಚನೆಯನ್ನೇ ಪ್ರಶ್ನಿಸಿ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾಳೆ.
ಇಂದು ಸಂತ್ರಸ್ತೆ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು ಅರ್ಜಿಯಲ್ಲಿ ಎಸ್‍ಐಟಿ ರಚನೆ, ತನಿಖೆಯ ವಿಧಾನ ಮತ್ತು ಎಸ್‍ಐಟಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ನಡೆದ ತನಿಖೆಯನ್ನು ಯುವತಿ ಪ್ರಶ್ನಿಸಿದ್ದಾಳೆ. ಎಸ್‍ಐಟಿ ರಚನೆಯೇ ಸರಿ ಇಲ್ಲ ಸರ್ಕಾರ ಸ್ವಯಂ ಪ್ರೇರಿತವಾಗಿ ರಚನೆ ಮಾಡಿಲ್ಲ, ಎಸ್‍ಐಟಿ ರಚನೆಯೇ ಸರಿ ಇಲ್ಲವೆಂದಾಗ ಅದರ ವರದಿಯನ್ನು ಕೋರ್ಟಿಗೆ ಸಲ್ಲಿಕೆ ಮಾಡಿ, ವಿಚಾರಣೆ ನಡೆಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾಳೆ. ಇದನ್ನೂ ಓದಿ: ದೇವೇಂದ್ರ ಫಡ್ನವೀಸ್ ಮೂಲಕ ಮಂತ್ರಿಗಿರಿಗೆ ರಮೇಶ್ ಜಾರಕಿಹೊಳಿ ಲಾಬಿ
Advertisement
Advertisement
ಎಸ್‍ಐಟಿ ವರದಿಯ ಮೇಲೆ ನಮಗೆ ನಂಬಿಕೆ ಇಲ್ಲ, ಇಂತಹ ವರದಿಯನ್ನು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಲು ಹೈಕೋರ್ಟ್ ಸೂಚಿಸಿದೆ. ಇದಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾಳೆ. ಇದನ್ನೂ ಓದಿ: ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್
Advertisement
Advertisement
ಕೆಲದಿನಗಳ ಹಿಂದೆ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಯುವತಿ ಪರ ವಕೀಲರ ಆಕ್ಷೇಪದ ನಡುವೆಯೂ ಸಂಬಂಧಿಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಪ್ರಕರಣದ ಅಂತಿಮ ವರದಿ ಸಲ್ಲಿಸಲು ಎಸ್‍ಐಟಿಗೆ ಗ್ರೀನ್ ಸಿಗ್ನಲ್ ನೀಡಿತ್ತು. ಮಧ್ಯಂತರ ತಡೆಯಾಜ್ಞೆಯನ್ನು ತೆರವು ಮಾಡಿತ್ತು. ಈ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಗೆ ಎಸ್‍ಐಟಿ ಕ್ಲೀನ್ ಚಿಟ್ ಕೊಟ್ಟಿದೆ. ಇದು ಸಮ್ಮತಿಯ ಸೆಕ್ಸ್ ಪ್ರಕರಣ, ಇಲ್ಲಿ ಲೈಂಗಿಕ ದೌರ್ಜನ್ಯ ನಡೆದಿಲ್ಲ. ಇಲ್ಲಿ ಅತ್ಯಾಚಾರ ನಡೆದಿದೆ ಎಂಬ ಅಂಶ ಬೆಳಕಿಗೆ ಬಂದಿಲ್ಲ. ಇದನ್ನು ಯುವತಿಯೂ ಒಪ್ಪಿಕೊಂಡಿದ್ದಾಳೆ. ಇದಕ್ಕೆ ಪೂರಕವಾದ ತಾಂತ್ರಿಕ ಸಾಕ್ಷ್ಯಗಳು ಕೂಡ ಇವೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಹಿಜಬ್ ವಿವಾದದ ಹಿಂದೆ ಇರುವುದು ಕಾಂಗ್ರೆಸ್ ಪಕ್ಷ ಎನ್ನುವುದಕ್ಕೆ ಈಗ ಇನ್ನೊಂದು ಸಾಕ್ಷ್ಯ ಲಭಿಸಿದೆ: ಬಿಜೆಪಿ