ಬೆಳಗಾವಿ: ಮಹಾ ನಾಯಕನ ಎಲ್ಲ ಕುತಂತ್ರ ಬಗ್ಗೆ ಸಿಬಿಐ ತನಿಖೆಗೆ ನೀಡಬೇಕು. ಸಿಎಂಗೆ ಮನವಿ ಮಾಡಿದ್ದು ಕೇಂದ್ರ ಗೃಹಸಚಿವರಿಗೂ ಮನವಿ ಮಾಡ್ತೇನೆ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಹೇಳಿದರು.
Advertisement
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿಗೆ ನನ್ನ ಹೆದರಿಕೆ ಇದೆ. ನಾನು ಒಬ್ಬನೇ ಅವನನ್ನು ಎದುರಿಸೋನು. ಅವನಿಗೆ ಹೆದರಿಕೆ ಇದೆ, ಇಂತಹ ನೂರು ಸಿಡಿ ಬಂದ್ರೂ ನಾನು ಹೆದರಲ್ಲ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಬರ್ತ್‍ಡೇಗೆ ಬರ್ತಾರಂತೆ ಮೋದಿ – ಭಾವನಾತ್ಮಕ ಯಾನ ತೆರೆದಿಡ್ತಾರಾ ರಾಜಾಹುಲಿ?
Advertisement
Advertisement
ಸಿಡಿ ಪ್ರಕರಣದಲ್ಲಿ ಸ್ಥಳೀಯ ನಾಯಕರ ಪಾತ್ರ ಇದೆಯಾ ಎಂದು ಮಾಧ್ಯಮಗಳ ಪ್ರಶ್ನೆಗೆ ಅವರೆಲ್ಲ ಏಜೆಂಟರು ಎಂದ ರಮೇಶ್ ಜಾರಕಿಹೊಳಿ, ನಮಗೇನಿದ್ದರೂ ಟಾರ್ಗೆಟ್ ಡಿ.ಕೆ.ಶಿವಕುಮಾರ್. ಸಿಬಿಐ ತನಿಖೆ ಆದ್ರೆ ಎಲ್ಲ ಗೊತ್ತಾಗುತ್ತದೆ.ನನ್ನ ಹಾಗೆ ಬೇರೆಯವರು ಸಫರ್ ಆಗಬಾರದು. ಚುನಾವಣೆ ಸಂದರ್ಭದಲ್ಲಿ ಸಚಿವ ಸ್ಥಾನ ಬೇಡ ಎಂದು ನಾನೇ ಹೇಳಿದ್ದೇನೆ. ಮುಂದೆ 2023ಕ್ಕೆ ಮತ್ತೆ ಆಗೋಣ, ಇನ್ನೆಷ್ಟು ಮೂರು ತಿಂಗಳು ಮಾತ್ರ.ಮೂರು ತಿಂಗಳಲ್ಲಿ ಸಚಿವ ಸ್ಥಾನ ನೀಡೋದರಲ್ಲಿ ಅರ್ಥ ಇಲ್ಲ ಎಂದರು.
Advertisement
ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ಟಿಕೆಟ್ ನೀಡಬೇಕು ಎಂದು ಶಾಸಕರು ಪತ್ರ ಬರೆದ ವಿಚಾರಕ್ಕೆ ಅದು ನನಗೆ ಗೊತ್ತಿಲ್ಲ. ನಮ್ಮಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡ್ತೇವೆ ಎಂದರು. ಇದನ್ನೂ ಓದಿ: ಆರ್ ಅಶೋಕ್‍ಗೆ ಸಕ್ಕರೆ ನಾಡಿನ ಉಸ್ತುವಾರಿ- ಸಾಮ್ರಾಟ್ ಸಾಮರ್ಥ್ಯಕ್ಕೆ ಅಗ್ನಿಪರೀಕ್ಷೆ
ಬೆಳಗಾವಿ ಬಿಜೆಪಿಯಲ್ಲಿ ಜಾರಕಿಹೊಳಿ ವರ್ಸಸ್ ಅದರ್ಸ್ ವಿಚಾರಕ್ಕೆ, ಗೋಕಾಕ್ ಕೊಡಲಿ ಇಡೀ ಜಿಲ್ಲೆ ಕೊಡಲಿ ಕೆಲಸ ಮಾಡುತ್ತೇನೆ. ಇದೇ ವೇಳೆ ಉದ್ದ ಅಂಗಿ ನಾಯಕನ ಹೇಳಿಕೆ ವಿಚಾರಕ್ಕೆ ಸಾಂದರ್ಭಿಕವಾಗಿ ಮಾತನಾಡಿದ್ದೇನೆ, ಹೊಳ್ಳಿ ಹೊಳ್ಳಿ ಮಾತನಾಡೋದರಲ್ಲಿ ಅರ್ಥ ಇಲ್ಲ ಎಂದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k