ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಅಗಲಿಕೆಗೆ ಹಿರಿಯ ನಟ ಬ್ಯಾಂಕ್ ಜನಾರ್ದನ್ ಮತ್ತು ನಟ, ನಿರ್ದೇಶಕ ರಮೇಶ್ ಅರವಿಂದ್ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಪಬ್ಲಿಕ ಟಿವಿ ಜೊತೆ ಮಾತನಾಡಿದ ನಟ ನಿರ್ದೇಶಕ ರಮೇಶ್ ಅರವಿಂದ್, ಅವರು ಮಾಡಿದ ಸಿನಿಮಾ ಅವರನ್ನ ಬಾಲಿವುಡ್‍ಗೆ ಕರೆದುಕೊಂಡು ಹೋಗಿವೆ. ಬಜೆಟ್‍ನಲ್ಲಿ ಕೆಲಸ ಮಾಡುತ್ತಾರೆ. ಹಲವಾರು ನಟರನ್ನು ಪರಿಚಯಿಸಿದ್ದಾರೆ. ಯಂಗ್ ಗೆ ಸ್ಟರ್ ಅವಕಾಶ ಕೊಡುತ್ತಿದ್ದರು. ನನ್ನ ಶೋಗೆ ಬಂದಾಗ “ಎಷ್ಟು ದಿನ ಅಂತಾ ಬೇರೆ ಅವರ ಕಾಲು ಎಳೆಯುತ್ತೀರಾ? ಅಂದ್ರೆ ನೀವು ಅವರ ಕೆಳಗೆ ಇದ್ದೀರಾ ಎಂದು ಅರ್ಥ ಎಂದು ಹೇಳಿದ್ದರು. ಬಾಲಿವುಡ್‍ಗೆ ಹೋಗಿ ಬಂದ ಮೇಲೆ ಜೀವನ ಎಂದರೆ ಏನು ಎಂದು ಗೊತ್ತಾಯಿತು ಎಂದಿದ್ದರು. ಅದನ್ನು ನಾನು ಮರೆಯಲು ಸಾಧ್ಯವಿಲ್ಲ. ಇದು ಇಂಡಸ್ಟ್ರಿಗೆ ದೊಡ್ಡ ನಷ್ಟ. ಅವರಂತಹ ಥಿಂಕರ್ ಇರಬೇಕು ಅಂದ್ರು.
Advertisement
Advertisement
ಹೀರೋ ಅಂದರೆ ಹೀಗೆ ಇರಬೇಕು, ಇಷ್ಟು ಹೈಟ್ ಇರಬೇಕು, ಇಷ್ಟು ಬೆಳ್ಳಗಿರಬೇಕು, ಈ ಥರ ನಗಬೇಕು ಅನ್ನೋದಲ್ಲಾ ಸುಳ್ಳು ಎಂದು ಸಾಬೀತು ಮಾಡಿದ ಕೆಲವೇ ಕೆಲವು ನಟರಲ್ಲಿ ಕಾಶಿನಾಥ್ ಒಬ್ಬರು. ಅವರ ವೀಕ್‍ನೆಸ್ ಗಳನ್ನೇ ಸ್ಟ್ರೆಂತ್ ಮಾಡಿಕೊಳ್ಳುವ ಶಕ್ತಿ ಅವರಲ್ಲಿತ್ತು. ಅವರ ಯೋಜನೆಗಳ ಮೂಲಕವೇ ಅವರು ಇಷ್ಟು ಸಾಧನೆ ಮಾಡಿದ್ದಾರೆ. ಸೆಕ್ಸ್ ಕೂಡ ಎಂಟರ್‌ಟೈನ್‌ಮೆಂಟ್ ರೀತಿಯಲ್ಲಿ ತೋರಿಸಿಕೊಟ್ಟವರು. ಇಂದು ಅವರು ಇಲ್ಲ ಅಂದರೆ ತುಂಬಾ ದುಃಖ ಆಗುತ್ತದೆ ಎಂದು ತಿಳಿಸಿದರು.
Advertisement
ಹಿರಿಯ ನಟ ಬ್ಯಾಂಕ್ ಜನಾರ್ದನ್ ಮಾತನಾಡಿ, ತುಂಬಾ ದುಃಖ ಆಗುತ್ತಿದೆ. ಅವರು ಎಂತೆಂಥ ನಟರನ್ನು ಸಿನಿಮಾಗೆ ಪರಿಚಯಿಸಿದ್ದಾರೆ. ಅಪ್ರತಿಮ ಕಲಾವಿದ, ಉತ್ತಮ ನಿರ್ದೇಶಕ. ನನಗೆ ತುಂಬಾ ಆತ್ಮೀಯ. ಒಬ್ಬರಿಗೆ ಉಪಕಾರ ಮಾಡಿದರೆ ಅವರು ನಾನು ಮಾಡಿದ್ದೀನಿ ಎಂದು ಯಾರಿಗೂ ಹೇಳುತ್ತಿರಲ್ಲಿ. ಕಾಲಕ್ಕೆ ತಕ್ಕಂತೆ ಸಿನಿಮಾ ಮಾಡುತ್ತಿದ್ದರು. ಅವರಿಂದ ನಾನು, ಉಮಾಶ್ರೀ ತುಂಬಾ ಹೆಸರು ಮಾಡಿದ್ದೇವೆ. ನಾನು ಸಹ ಅವರ ಗರಡಿಯಲ್ಲಿ ಮುಂದೆ ಬಂದಿದ್ದೇನೆ. ಈಗ ಅವರು ಇಲ್ಲ ಎಂದು ಕೇಳಿದರೆ ಏನು ಹೇಳಬೇಕು ಗೊತ್ತಾಗ್ತಿಲ್ಲ. ಒಂದು ರೀತಿ ಅವರು ನನಗೆ ಗುರುಗಳು ಎಂದು ಹೇಳಿದ್ರು.
Advertisement
https://www.youtube.com/watch?v=JY1P-IPdVQE
This was the final selfie with https://t.co/DT3aUJ3NSk Kashinath pic.twitter.com/542rfuyLCO
— Ramesh Aravind (@Ramesh_aravind) January 18, 2018