ನಟ, ನಿರ್ದೇಶಕ ಹಾಗೂ ನಿರೂಪಕ ರಮೇಶ ಅರವಿಂದ್ (Ramesh Aravind) 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ದೈಜಿ ಸಿನಿಮಾದ (Daiji Cinema) ಟೀಸರ್ ಕೂಡಾ ರಿಲೀಸ್ ಆಗಿದೆ. ಈ ವೇಳೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ನಟ ವಿಷ್ಣುವರ್ಧನ್ (Vishnuvardhan) ಅವರ ಜೊತೆಗಿನ ದಿನಗಳು ಹಾಗೂ ಅವರಿಗೆ ಸಲ್ಲಬೇಕಾದ ಗೌರವಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ಜೊತೆಗೆ ಆಪ್ತಮಿತ್ರ-3 ಸಿನಿಮಾ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಆಪ್ತಮಿತ್ರ (Apthamitra) ಸಿನಿಮಾವನ್ನ ಮಾಡಿಯಾದ್ಮೇಲೆ ಒಂದು ದುರ್ಘಟನೆ ನಡೆಯಿತು. ಇದಾದ ಬಳಿಕ ಆಪ್ತರಕ್ಷಕ ಅಂದ್ರೆ ಆಪ್ತಮಿತ್ರ ಸಿನಿಮಾದ ಭಾಗ-2 ಸಿನಿಮಾ ರಿಲೀಸ್ ನಂತರ ಮತ್ತೊಂದು ಆಘಾತವೇ ನಡೆದುಹೋಯ್ತು. ಕಾಕತಾಳಿಯವೋ ಅಥವಾ ಆಕಸ್ಮಿಕವೋ ಇವೆರಡು ಘಟನೆ ನಡೆದ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಆಪ್ತಮಿತ್ರ ಸಿರೀಸ್ ಅಂದ್ರೆ ಕೊಂಚ ಹಿಂಜರಿಕೆ ಉಂಟಾಗಿದೆ. ಇದು ಕಲಾವಿದರಿಗೂ ಸಹ ಆಘಾತ, ಆತಂಕವನ್ನ ಸೃಷ್ಟಿಸಿದೆ. ಹೀಗಾಗಿ ಆಪ್ತಮಿತ್ರ ಪಾರ್ಟ್-3 ಬರುತ್ತಾ ಎನ್ನುವ ಹಲವಾರು ಪ್ರಶ್ನೆಗಳು ಆಗಾಗ ಕೇಳಿ ಬರುತ್ತಿವೆ. ಇದನ್ನೂ ಓದಿ: ಉಪೇಂದ್ರ ದಂಪತಿ ಫೋನ್ ಹ್ಯಾಕ್ – ಸೈಬರ್ ವಂಚಕರು ದೋಚಿದ್ದೆಷ್ಟು ಹಣ?
ಆಪ್ತಮಿತ್ರ ಸಿನಿಮಾದ ಪಾರ್ಟ್-3 ಸ್ಕಿಪ್ಟ್ ಬಂದಿದೆಯಾ..? ಬಂದರೆ ಸಿನಿಮಾ ಮಾಡುತ್ತಿರಾ ಎನ್ನುವ ಪ್ರಶ್ನೆಗೆ ನಟ ರಮೇಶ್ ಅರವಿಂದ್ ಪ್ರತಿಕ್ರಿಯೆ ನೀಡಿದ್ದಾರೆ. `ನನ್ನ ಪ್ರಕಾರ ಅದೊಂದು ಸಬ್ಜೆಕ್ಟ್, ಅದೊಂದು ಸ್ಕಿçÃನ್, ಅದೊಂದು ಪಿಕ್ಸಿಯಸ್ ಕ್ಯಾರೆಕ್ಟರ್ ನಾಗವಲ್ಲಿ ಅನ್ನೋದು. ಆದರೆ ಆಪ್ತರಕ್ಷಕ ಮಾಡುವ ವೇಳೆ ಅಂತಹದೊಂದು ಕಥೆ ಬಂದಿತ್ತು. ಆಪ್ತಮಿತ್ರ, ಆಪ್ತರಕ್ಷಕ ಆದ್ಮೇಲೆ ನಾನು ಮಾಡ್ತಿರುವ ಹಾರರ್ ಸಿನಿಮಾ ದೈಜಿನೇ’ ಎಂದು ಹೇಳಿದ್ದಾರೆ.