ಎವರ್ ಯಂಗ್ ಹೀರೋ ರಮೇಶ್ ಅರವಿಂದ್ (Ramesh Aravind) ಅವರು ಸದ್ಯ ‘ಶಿವಾಜಿ ಸುರತ್ಕಲ್’ ಸಿನಿಮಾ ಸಕ್ಸಸ್ ನಡುವೆ ಇದೀಗ ಹೊಸ ಸೀರಿಯಲ್ ನಿರ್ಮಾಣಕ್ಕೆ(Produce) ಕೈ ಹಾಕಿದ್ದಾರೆ. ಈ ಮೂಲಕ ಯುವ ಉತ್ಸಾಹಿ ತಂಡಕ್ಕೆ ನಟ ರಮೇಶ್ ಅರವಿಂದ್ (Ramesh Aravind) ಸಾಥ್ ನೀಡಿದ್ದಾರೆ.
Advertisement
ನಟ, ನಿರ್ದೇಶಕ, ಬರಹಗಾರನಾಗಿ ಸಕ್ಸಸ್ ಕಂಡಿರುವ ನಟ ರಮೇಶ್ ಅರವಿಂದ್ ಅವರು ಮತ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಂದಿನಿ 2, ಸುಂದರಿ ಸೀರಿಯಲ್‌ನ ನಿರ್ಮಾಣ ಮಾಡಿರುವ ರಮೇಶ್, ಇದೀಗ ‘ನೀನಾದೆ ನಾʼ (Neenadena Serial) ಎಂಬ ಸೀರಿಯಲ್‌ಗೆ ಕೈಜೋಡಿಸಿದ್ದಾರೆ. ಇದೀಗ ಓದಿ: 7 ತಿಂಗಳ ಬಳಿಕ ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಧ್ರುವ ಸರ್ಜಾ
Advertisement
Advertisement
ದೇವರ ಆಟ ಬಲ್ಲವರಾರು ಎಂಬ ಮಾತಿದೆ. ಈ ಕತೆನೂ ಒಂಥರ ಹಾಗೇನೇ ಅಪರಿಚಿತ ಹೃದಯಗಳ ಅನಿರೀಕ್ಷಿತ ಪ್ರೇಮಯಾನವೇ ‘ನೀನಾದೆ ನಾ’ ಧಾರಾವಾಹಿ. ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ್ರು ಕೂಡ ಸಂಸ್ಕಾರ-ಸಂಸ್ಕೃತಿ, ಆಚಾರ-ವಿಚಾರಗಳನ್ನು ಪರಿಪಾಲಿಸುವಲ್ಲಿ ಸದಾ ಮುಂದೆ ಈ ಕಥಾ ನಾಯಕಿ ‘ವೇದಾ’. ಅಜ್ಜಿಯ ಪ್ರೀತಿಯ ಮೊಮ್ಮಗಳು ‘ವೇದಾ’ ನೇರ ನಡೆಯನ್ನು ಹೊಂದಿರುತ್ತಾಳೆ. ಈಕೆಗೆ ಮನೆಯವರ ಸಮ್ಮುಖದಲ್ಲಿ, ಹುಟ್ಟಿ ಬೆಳೆದ ಊರಲ್ಲಿ, ಮನೆಯವರು ನೋಡಿದ ಹುಡುಗನೊಂದಿಗೆ ಮದುವೆಯಾಗಬೇಕು ಎಂಬ ಅಸೆ ಇರುತ್ತೆ ಆದರೆ ಮುಂದೆ ನಡೆಯೋದು ಮಾತ್ರ ವಿಧಿಲಿಖಿತ. ಇನ್ನು ಕಥಾ ನಾಯಕ ವಿಕ್ರಮ್. ಗುಂಡಾಗಿರಿ ಮಾಡಿಕೊಂಡು, ತನ್ನ ಬಾಸ್ ಹೇಳಿದನ್ನು ಚಾಚು ತಪ್ಪದೆ ಮಾಡೋ ಈತನಿಗೆ , ಆಚಾರ-ವಿಚಾರ ಸಂಸ್ಕಾರವಂತೂ ಇಲ್ವೇ ಇಲ್ಲ, ಪದವಿ ಪಡೆದಿದ್ರು ಕೂಡ ಈತ ಹೀಗಿರೋದ್ರಿಂದ ಅಪ್ಪನಿಗೂ ಇವನ ಮೇಲೆ ಸಿಕ್ಕಾಪಟ್ಟೆ ಕೋಪವಿರುತ್ತೆ.
Advertisement
ಅಚಾನಕ್ ಆಗಿ ಒಂದು ದಿನ ದೇವರ ಸನ್ನಿಧಾನದಲ್ಲಿ ವಿಧಿಯಾಟದಂತೆ ವಿಕ್ರಮ್- ವೇದಾಳಿಗೆ ತಾಳಿ ಕಟ್ಟುತ್ತಾನೆ. ಶ್ರೀಮಂತ ಕುಟುಂಬದಲ್ಲಿ ಬೆಳೆದ ವೇದ ರೌಡಿಯಂತಿರುವ ವಿಕ್ರಮ್ ನನ್ನು ಗಂಡ ಎಂದು ಒಪ್ಪಿಕೊಳ್ತಾಳ.? ವಿದ್ಯಾವಂತಳಾಗಿರುವ ವೇದಾಳ ಮುಂದಿನ ನಡೆ ಏನು? ವಿರುದ್ಧ ಮನಸುಗಳು ಹೇಗೆ ಒಂದಾಗುತ್ತೆ ಎಂಬುದೇ ‘ನೀನಾದೆ ನಾ’ ಧಾರಾವಾಹಿಯ ಮುಖ್ಯ ಕಥಾ ಹಂದರ.
‘ನೀನಾದೆ ನಾ’ ಧಾರಾವಾಹಿಯು ಅದ್ಬುತ ತಾರಾಬಳಗವನ್ನು ಹೊಂದಿದ್ದು, ನಾಯಕನ ಪಾತ್ರದಲ್ಲಿ ದಿಲೀಪ್ ಶೆಟ್ಟಿ (Dileep Shetty) , ನಾಯಕಿಯಾಗಿ ಖುಷಿ (Khushi Shivu) ಅಭಿನಯಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಗೆ ಖ್ಯಾತ ನಟ ರಮೇಶ್ ಅರವಿಂದ್ ರವರು ‘ವಂದನ ಮೀಡಿಯಾ'(Vandhana Media) ಎಂಬ ಸಂಸ್ಥೆಯಡಿ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಹದಿನೈದು ವರ್ಷಗಳಿಂದ ಹೊಸತನಕ್ಕೆ ಮೊದಲ ಆಧ್ಯತೆ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗ್ತಿದೆ ವಿಭಿನ್ನ ಪ್ರೇಮಕತೆ ʼನೀನಾದೆ ನಾ’ ಇದೇ ಮೇ 16 ಮಂಗಳವಾರದಿಂದ ರಾತ್ರಿ 9.30ಕ್ಕೆ ತಪ್ಪದೇ ವೀಕ್ಷಿಸಿ.