ಬೆಂಗಳೂರು: ನಾಳೆ ಒಬ್ಬ ಡ್ಯಾನ್ಸರ್ ಬರಬಹುದು, ಫೈಟರ್ ಬರಬಹುದು ಆದರೆ ಪುನೀತ್ ರಾಜ್‍ಕುಮಾರ್ ಮತ್ತೆ ಬರಲ್ಲ ಎಂದು ನಟ ರಮೇಶ್ ಅರವಿಂದ್ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ರಮೇಶ್ ಅರವಿಂದ್ ನಟಿಸಿರುವ 100 ಎಂಬ ಸಿನಿಮಾದ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುಕಿರಣ್ ಮನೆಯಲ್ಲಿ ನಡೆದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸುಮಾರು 2 ಗಂಟೆಗಳ ಕಾಲ ಕಣ್ಣಲ್ಲಿ ಕಣ್ಣಿಟ್ಟು ಬುದ್ಧನ ಬಗ್ಗೆ ಮಾತನಾಡಿದ್ವಿ. ನಾಳೆ ಒಬ್ಬ ಡ್ಯಾನ್ಸರ್ ಬರಬಹುದು, ಫೈಟರ್ ಬರಬಹುದು. ಆದ್ರೆ ಅಪ್ಪು ಬರಲು ಸಾಧ್ಯವಿಲ್ಲ ಎಂದು ಭಾವುಕರಾಗಿ ನುಡಿದರು. ಇದನ್ನೂ ಓದಿ: ಅಪ್ಪು ಜೊತೆಗಿನ ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಿರುವ ಶಿವಣ್ಣ, ರಾಘಣ್ಣ
Advertisement
Advertisement
ಅಪ್ಪು ಗಂಧದಗುಡಿ ಕನಸು ನನಸಾಗುವ ಮೊದಲು ಅವರು ಈ ಲೋಕ ಬಿಟ್ಟು ಹೊರಟು ಬಿಟ್ಟರು. ಪುನೀತ್ ಮತ್ತೊಂದು ‘ಗಂಧದ ಗುಡಿ’ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದರು. ಲಾಕ್ ಡೌನ್ ಟೈಮ್ ನಲ್ಲಿ ಕ್ಯಾಮೆರಾಮ್ಯಾನ್ ಅಮೋಘ ವರ್ಷ ಜೊತೆ ಸೇರಿ ಕರ್ನಾಟಕದ ಕಾಡುಗಳ ಬಗ್ಗೆ ಚಿತ್ರೀಕರಣ ಮಾಡಿದ್ದರು. ಸುಮಾರು 90 ನಿಮಿಷಗಳ ಫೀಚರ್ ಫಿಲಂ ಶೂಟ್ ಮಾಡಿ ಗಂಧದ ಗುಡಿ ಹೆಸರಿನಲ್ಲಿ ತೆರೆಗೆ ತರಲು ಸಜ್ಜಾಗಿದ್ದರು. ನಮ್ಮ ರಾಜ್ಯದ ಕಾಡುಗಳು ವನ್ಯಜೀವಿಗಳ ಬಗ್ಗೆ ಈ ಫಿಲಂ ಬೆಳಕು ಚೆಲ್ಲುತ್ತದೆ. ವಿಶೇಷವೆಂದರೆ ಈ ಚಿತ್ರದಲ್ಲಿ ಅಪ್ಪು ಕೂಡ ಕಾಣಿಸಿಕೊಂಡಿದ್ದಾರೆ.
Advertisement
ಪುನೀತ್ ನವೆಂಬರ್ 1ಕ್ಕೆ ಟೀಸರ್ ಲಾಂಚ್ ಮಾಡಲು ಪ್ಲಾನ್ ಮಾಡಿದ್ದರು. ಈ ಬಾರಿ ರಾಜ್ಯೋತ್ಸವಕ್ಕೆ ಇದು ನನ್ನ ಗಿಫ್ಟ್ ಅಂತ ಆತ್ಮೀಯರ ಬಳಿ ಹೇಳಿಕೊಂಡಿದ್ದರು. ಆದರೆ ಟೀಸರ್ ರಿಲೀಸ್ ಮಾಡುವ ಹೊತ್ತಿನಲ್ಲಿ ಅಭಿಮಾನಿಗಳನ್ನು ಪುನೀತ್ ಅಗಲಿದರು. ಈಗ ಪುನೀತ್ ಅವರ 11 ದಿನದ ಕಾರ್ಯದ ನಂತರ ಗಂಧದಗುಡಿ ರಿಲೀಸ್ ಬಗ್ಗೆ ಮಾಹಿತಿ ಸಿಗಬಹುದು ಎಂದು ಅಪ್ಪು ಜೊತೆಗಿನ ಒಡನಾಟವನ್ನು ರಮೇಶ್ ಅರವಿಂದ್ ಹಂಚಿಕೊಂಡರು. ಇದನ್ನೂ ಓದಿ: ಪುನೀತ್ ಸಾವಿನ ನಂತರ ಜಯದೇವ ಆಸ್ಪತ್ರೆಗೆ ರೋಗಿಗಳು ಶೇ.30 ಹೆಚ್ಚಳ
ಇದೇ ವೇಳೆ ನಿರ್ಮಾಪಕ ರಮೇಶ್ ರೆಡ್ಡಿ ಮಾತನಾಡಿ, ಪುನೀತ್ ಅವರಿಗೆ ಸಿನಿಮಾ ಮಾಡಬೇಕು ಅಂದ್ಕೊಂಡಿದ್ದೆ ಅದನ್ನು ಅವರ ಹತ್ತಿರ ಹೇಳಿಕೊಂಡಿದ್ದೆ. ಮನೆಗೆ ಬನ್ನಿ ಮಾತಾಡೋಣ ಅಂತ ಹೇಳಿದ್ದರು. ಸಲಗ ಪ್ರೋಗ್ರಾಂನಲ್ಲಿ ಸ್ಟೇಜ್‌ನಲ್ಲಿ ಮಾತಾಡುವಂತೆ ಧೈರ್ಯ ತುಂಬಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.