ಕನ್ನಡದ ಹೆಸರಾಂತ ನಟ, ಮೊನ್ನೆಯಷ್ಟೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ರಮೇಶ್ ಅರವಿಂದ್ (Ramesh Aravind) ಸೇರಿ ಮೂವರಿಗೆ ರಾಣಿ ಚೆನ್ನಮ್ಮ (Rani Chennamma) ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ (Honorary Doctorate) ಘೋಷಿಸಲಾಗಿದೆ. ಕನ್ನಡ ಚಿತ್ರರಂಗಕ್ಕೆ (Sandalwood) ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಮೇಶ್ ಅವರನ್ನು ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.
Advertisement
ರಮೇಶ್ ಅರವಿಂದ್ ಅವರ ಜೊತೆ ಸಮಾಜ ಸೇವೆ ಕ್ಷೇತ್ರದಲ್ಲಿ ವಿ.ರವಿಚಂದರ್, ಧಾರ್ಮಿಕ ಕ್ಷೇತ್ರದಲ್ಲಿ ಸೇವೆಗೈದ ಮಾತೆ ಅಕ್ಕ ಅನ್ನಪೂರ್ಣ ತಾಯಿಗೆ ಗೌರವ ಡಾಕ್ಟರೇಟ್ ಘೋಷಣೆಯಾಗಿದೆ. ಸೆ.14 ರಂದು ಮಧ್ಯಾಹ್ನ 12 ಕ್ಕೆ ಸುವರ್ಣಸೌಧದಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ವಿ.ವಿ ತಿಳಿಸಿದೆ. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು
Advertisement
Advertisement
ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರಚಂದ ಗೆಹ್ಲೋಟ್ ವಹಿಸಲಿದ್ದು, ಆಂಧ್ರದ ಕೇಂದ್ರಿಯ ಬುಡಕಟ್ಟು ವಿವಿ ಕುಲಪತಿ ಪ್ರೊ. ಟಿ.ವಿ ಕಟ್ಟಿಮನಿ ಅವರಿಂದ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವಥ್ ನಾರಾಯಣ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ರಾಣಿ ಚೆನ್ನಮ್ಮ ವಿವಿ ಕುಲಪತಿ ಪ್ರೊ. ರಾಮಚಂದ್ರೆಗೌಡ ಮಾಹಿತಿ ನೀಡಿದ್ದಾರೆ.