90 ಕೋಟಿಯಲ್ಲಿ ಸಿನಿಮಾ ಮಾಡೋದನ್ನ ಕೇಳಿದ್ದೀರಿ. ಆದರೆ 90 ಕೋಟಿಯನ್ನ ಕೇವಲ ಒಂದು ಹಾಡಿಗೆ ಖರ್ಚು ಮಾಡುವ ಸುದ್ದಿ ಕೇಳಿದ್ದೀರಾ? ತಮ್ಮದೇ ದಾಖಲೆಯನ್ನ ತಾವೇ ಮುರಿಯೋಕೆ ಸಜ್ಜಾಗಿದ್ದಾರೆ ರಾಮ್‌ಚರಣ್‌ತೇಜಾ. ಹಾಗಾದ್ರೆ ಆ ಸಿನಿಮಾ ಯಾವುದು? ಇಲ್ಲಿದೆ ಮಾಹಿತಿ. ಇದನ್ನೂ ಓದಿ:‘ಚಂದ್ರಮುಖಿ 2’ ಸಿನಿಮಾದ ಕಂಗನಾ ರಣಾವತ್ ಫಸ್ಟ್ ಲುಕ್ ರಿಲೀಸ್
Advertisement
‘ಆರ್‌ಆರ್‌ಆರ್’ (RRR) ಸಿನಿಮಾದ ‘ನಾಟು ನಾಟು’ (Naatu Naatu) ಹಾಡಿಗೆ ಕೊಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿತ್ತು. ಉಕ್ರೇನ್‌ನಲ್ಲಿ ಭರ್ತಿ 15 ದಿನ ಚಿತ್ರೀಕರಿಸಿದ ಹಾಡು ಕೊನೆಗೆ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಳ್ತು. ಅಂದಹಾಗೆ ಈ ದಾಖಲೆ ಇದೀಗ ನೆನಪಾಗುತ್ತಿರೋದು ರಾಮ್‌ಚರಣ್ ಮುಂದಿನ ಚಿತ್ರಕ್ಕಾಗಿ. ಅದುವೇ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಸಲುವಾಗಿ.
Advertisement
Advertisement
ರಾಮ್‌ಚರಣ್ (Ramcharan) ಜೊತೆ ಖ್ಯಾತ ನಿರ್ದೇಶಕ ಶಂಕರ್ ಗೇಮ್ ಚೇಂಚರ್ ಪ್ರಾಜೆಕ್ಟ್ ಮುಗಿಸಲಿದ್ದಾರೆ. ಕಿಯಾರಾ (Kiara Advani) ನಾಯಕಿ. ಅಂದಹಾಗೆ ಈ ಚಿತ್ರದ ಒಂದು ಹಾಡಿಗೆ ಭರ್ತಿ 90 ಕೋಟಿ ಎತ್ತಿಡಲಾಗಿದೆ ಎಂಬುದು ಬಡಾ ಖಬರ್. 90 ಕೋಟಿಯಲ್ಲಿ ಅದ್ದೂರಿ ಸಿನಿಮಾವೇ ಆಗಿಬಿಡುತ್ತೆ. ಅಂಥದ್ರಲ್ಲಿ ಒಂದ್ ಹಾಡಿಗೆ 90 ಕೋಟಿ ವ್ಯಯಿಸಲಾಗುತ್ತೆ ಅಂದ್ರೆ ಆ ಹಾಡು ಅದೆಷ್ಟು ಅದ್ಧೂರಿಯಾಗಿರಲಿದೆ ಅನ್ನೋ ಇಮ್ಯಾಜಿನೇಷನ್ನೇ ಅದ್ಭುತ. ಇದುವರೆಗೆ ಅತಿಹೆಚ್ಚು ಬಜೆಟ್‌ನಲ್ಲಿ ತಯಾರಾದ ಹಾಡು ಎಂಬ ಹೆಗ್ಗಳಿಕೆ ಪಡೆದಿರೋದು ನಾಟು ನಾಟು. ಇದೀಗ ತಮ್ಮದೇ ದಾಖಲೆಯನ್ನ ರಾಮ್‌ಚರಣ್ ಗೇಮ್‌ಚೇಂಜರ್ ಮೂಲಕ ಮುರಿಯಲಿದ್ದಾರೆ.
Advertisement
ಎಸ್. ಶಂಕರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಗೇಮ್ ಜೇಂಜರ್’ (Game Changer) ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆಯಿದೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ಬೆಳ್ಳಿತೆರೆಯಲ್ಲಿ ಅಬ್ಬರಿಸಲಿದೆ. ಈ ಬಗ್ಗೆ ಸದ್ಯದಲ್ಲೇ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.