ಮನೆ ಹಾಗೂ ಮನಸ್ಸಿನ ಅಂಧಕಾರವನ್ನು ಕಳೆಯುವ ಬೆಳಕನ್ನು ಸಂಭ್ರಮಿಸಿ ಆರಾಧಿಸುವ ಹಬ್ಬವೇ ದೀಪಾವಳಿ. ಭಾರತದಲ್ಲಿ ದೀಪಾವಳಿ (Deepavali) ಹಬ್ಬಕ್ಕೆ ವಿಶೇಷವಾದ ಸ್ಥಾನವಿದೆ. ಕಾರ್ತಿಕ ಮಾಸದ ಮೊದಲನೆಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ.
ದೀಪಾವಳಿ ಹಬ್ಬಕ್ಕೂ ರಾಮಾಯಣಕ್ಕೂ (Ramayana) ವಿಶೇಷ ನಂಟಿದೆ. ಶ್ರೀ ರಾಮ (Lord Rama) ರಾವಣನನ್ನು ಸಂಹರಿಸಿ ಸೀತೆಯನ್ನು ಮರಳಿ ಅಯೋಧ್ಯೆಗೆ ಕರೆ ತಂದ ದಿನವೇ ದೀಪಾವಳಿ ಎಂಬ ನಂಬಿಕೆ ಇದೆ. ರಾಮ ಅಯೋಧ್ಯೆಗೆ (Ayodhya) ಆಗಮಿಸಿದ ಆ ದಿನ ಅಯೋಧ್ಯೆಯ ಜನ ಆನಂದದಿಂದ ದೀಪಗಳನ್ನು ಬೆಳಗಿಸಿ ರಾಮ ಹಾಗೂ ಸೀತೆಯನ್ನು ಸ್ವಾಗತಿಸಿದ್ದರು. ಇದೇ ಮುಂದೆ ದೀಪಾವಳಿಯಾಗಿ ಆಚರಣೆಗೆ ಬಂತು ಎನ್ನುವ ನಂಬಿಕೆ ಇದೆ. ಇದನ್ನೂ ಓದಿ: ಇಂದು ಅಯೋಧ್ಯೆಯಲ್ಲಿ ಅದ್ಧೂರಿ ದೀಪೋತ್ಸವ – ಏಕಕಾಲದಲ್ಲಿ ಬೆಳಗಲಿದೆ 24 ಲಕ್ಷ ಹಣತೆ
ಭಾರತದ ಬೇರೆ ಬೇರೆ ಸ್ಥಳಗಳಲ್ಲಿ ದೀಪಾವಳಿಗೆ ವಿಶೇಷವಾದ ಮಹತ್ವವಿದೆ. ಅಲ್ಲದೇ ವಿಶೇಷವಾದ ಕೆಲವು ಸಂಪ್ರದಾಯಗಳು ಇರುತ್ತವೆ. ಕೆಲವರು ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ಹಬ್ಬವನ್ನು ಆಚರಿಸುತ್ತಾರೆ. ದೀಪಗಳು ಈ ಹಬ್ಬದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಇನ್ನು ಒಡಿಶಾ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ದೀಪಾವಳಿಯ ರಾತ್ರಿಯಂದು ಮಹಾಕಾಳಿಯ ಪೂಜಿಸುವ ಪದ್ಧತಿಯಿದೆ. ಪಾರ್ವತಿ ದೇವಿಯು ಕಾಳಿ ಅವತಾರವನ್ನು ತಾಳಿ ಅಸುರರನ್ನು ಸಂಹರಿಸಿದ ದಿನವನ್ನು ದೀಪಾವಳಿ ಎಂದು ಕರೆಯುತ್ತಾರೆ ಎಂಬ ನಂಬಿಕೆ ಕೂಡ ಇದೆ.
ಮಹಾಭಾರತಕ್ಕೂ ದೀಪಾವಳಿಯ ನಂಟಿದೆ. ನರಕಾಸುರನನ್ನು ಶ್ರೀ ಕೃಷ್ಣ ಸಂಹರಿಸಿದ ದಿನವೇ ನರಕ ಚತುರ್ದಶಿ. ಇದನ್ನೇ ದೀಪಾವಳಿ ಎಂದು ಆಚರಿಸಲಾಗುತ್ತದೆ. ದೀಪಾವಳಿ ದಿನವೇ ಪಾಂಡವರು ಅಜ್ಞಾತವಾಸದಿಂದ ಹಸ್ತಿನಾಪುರಕ್ಕೆ ಮರಳಿದ್ದರು ಎಂಬ ಮಾತಿದೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಮುಂದಾದ ಸಚಿವರನ್ನು ಗರ್ಭಗುಡಿ ಬಾಗಿಲಲ್ಲೇ ತಡೆದ ಮಹಿಳಾ ಕಾನ್ಸ್‌ಟೇಬಲ್