ತುಮಕೂರು: ಮುದ್ದಹನುಮೇಗೌಡದ್ದು ಬರೀ ಐರನ್ ಲೆಗ್ ಅಲ್ಲ. ಅದಕ್ಕಿಂತ ಕೆಟ್ಟದ್ದು. ಅವರನ್ನು ನಂಬಿದವರೆಲ್ಲಾ ಹಾಳಾಗಿ ಹೋಗಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡ ಹರಿಹಾಯ್ದಿದ್ದಾರೆ.
ಕುಣಿಗಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುದ್ದಹನುಮೇಗೌಡ ಬೆಳಗ್ಗೆ ಕಾಂಗ್ರೆಸ್ ಅಂತಾರೆ ಮಧ್ಯಾಹ್ನ ಬಿಜೆಪಿ, ಸಾಯಂಕಾಲ ಆಮ್ ಆದ್ಮಿ ಅಂತಾರೆ. ಮುದ್ದಹನುಮೇಗೌಡರು ಸುಲಭದಲ್ಲಿ ಸ್ವಾಹ ಮಾಡುವ ಗಿರಾಕಿ ಕಾಂಗ್ರೆಸ್ ಇಬ್ಬಾಗ ಮಾಡಿದ ಪುಣ್ಯಾತ್ಮ. ಈಗ ಬಿಜೆಪಿಗೆ ಹೋದರೆ ಗೆದ್ದು ಬಿಡುತ್ತೇನೆ ಎನ್ನುವ ಸ್ವಾರ್ಥ ಹೊಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಮುದ್ದಹನುಮೇಗೌಡ ಅವರಿಗೇ ರಾಜಕೀಯದಲ್ಲಿ ಯಾವ ನೈತಿಕತೆಯೂ ಇಲ್ಲ. ಕುಣಿಗಲ್ ತಾಲೂಕಿನಲ್ಲಿ ಅವರ ಸಾಧನೆ ಏನು? ಒಂದೇ ಒಂದು ಅಡಿ ಕಾಲುವೆ ಮಾಡಿದ್ದಾರಾ? ನಾನು ಕುಣಿಗಲ್ ತಾಲೂಕಿನವನು ಅಂತಾರೆ, ಕುಣಿಗಲ್‍ನಿಂದ ಟಿಕೆಟ್ ಕೇಳುತ್ತಾರೆ. ಎಲ್ಲರೂ ಪ್ರೈಮರಿ ಸ್ಕೂಲ್, ಮಿಡಲ್ ಸ್ಕೂಲ್, ಹೈ ಸ್ಕೂಲ್ ಇಲ್ಲಿಯೇ ಓದಿರುವುದು. ಇಲ್ಲಿ ಓದಿದ್ದೇನೆ ಅಂದ ಮಾತ್ರಕ್ಕೆ ಟಿಕೆಟ್ ಕೊಡಬೇಕು ಅಂತ ಹೇಳಿದರೆ ಹೇಗೆ? ಹಾಗಿದ್ದರೆ ಬಹಳಷ್ಟು ಮಂದಿ ಎಮ್‍ಎಲ್‍ಎ ಆಗಿಬಿಡುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಹತ್ಯೆಗೈದ ಅಪ್ರಾಪ್ತ ಬಾಲಕ
Advertisement
Advertisement
ಮುದ್ದಹನುಮೇಗೌಡರು ಶಾಸಕರಾಗಿದ್ದು ಕುಣಿಗಲ್ ತಾಲೂಕಿನ 20 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ. ಮುದ್ದಹನುಮೇಗೌಡರು ಬರೀ ಐರನ್ ಲೆಗ್ ಅಲ್ಲ. ಅದಕ್ಕಿಂತ ಕೆಟ್ಟದ್ದು. ಅವರನ್ನು ನಂಬಿದವರನೆಲ್ಲಾ ಹಾಳು ಮಾಡಿ ಬಿಡುತ್ತಾರೆ. ಅವರು ಕಾಲಿಟ್ಟ ಪಕ್ಷವೆಲ್ಲಾ ಮುಳುಗಿ ಹೋಗುತ್ತದೆ. ನನ್ನ ಜೊತೆಯಲ್ಲಿ ಇದ್ದುಕೊಂಡೆ ನನಗೆ ಟಿಕೆಟ್ ತಪ್ಪಿಸಿದ ಕುತಂತ್ರಿ. ಇನ್ನೊಬ್ಬರು ಬೆಳೆಯಬಾರದು ಎನ್ನುವ ಕೆಟ್ಟ ಮನೋಭಾವ ಅವರದ್ದು, ಅವರು ಗೆದ್ದು ಕೆಲಸ ಮಾಡಿದ್ದ ಲೋಕಸಭಾ ಕ್ಷೇತ್ರ ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲೇ ಸ್ಪರ್ಧಿಸಿ ಚಾಲೆಂಜ್ ತೋರಿಸಲಿ ಎಂದು ಸವಾಲೊಡ್ಡಿದ್ದಾರೆ. ಇದನ್ನೂ ಓದಿ: ಕೊರೊನಾ ಇನ್ನೂ ಮುಗಿದಿಲ್ಲ, ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿ: ಉದ್ಧವ್ ಠಾಕ್ರೆ