ಬೆಂಗಳೂರು: ನಾಡಿನೆಲ್ಲೆಡೆ ಇಂದು ರಾಮನವಮಿ ಸಂಭ್ರಮ. ರಾಮ ಹುಟ್ಟಿದ ದಿನವನ್ನು ಅದ್ದೂರಿಯಾಗಿ ಆಚರಿಸಲು ಬೆಂಗಳೂರಿನಾದ್ಯಂತ ಸಿದ್ಧತೆ ಮಾಡಲಾಗಿದ್ದು, ರಥಯಾತ್ರೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
Advertisement
ರಾಜಧಾನಿ ಎಲ್ಲೆಡೆ ಇಂದು ರಾಮ ನಾಮ ಭಜನೆ ಜಪಿಸಲಿದೆ. ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿದೆ. ಇಡೀ ದಿನ ಭಕ್ತರು ಉಪವಾಸ ಇದ್ದು ವ್ರತ ಮಾಡಿ ಪಾನಕ, ಕೋಸಂಬರಿ, ಮಜ್ಜಿಗೆ ಸೇವಿಸಿದರೆ ಶುಭ ಆಗುತ್ತೆ ಅನ್ನೋ ನಂಬಿಕೆಯಿದೆ.
Advertisement
Advertisement
ಒಂದೆಡೆ ದೇವಾಲಯಗಳಲ್ಲಿ ಜೈ ರಾಮ ಭಜನೆ ಮೊಳಗುತ್ತಿದ್ರೇ ಮತ್ತೊಂದೆಡೆ ರಾಮನವಮಿ ಅಂಗವಾಗಿ ಬೃಹತ್ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ನಗರದ ಕೋರಮಂಗಲದ ಎರಡನೇ ಕ್ರಾಸ್ ನಿಂದ ಸಂಜೆ 4 ಗಂಟೆಯಿಂದ ಆರಂಭವಾಗಲಿದೆ. ಇನ್ನೊಂದೆಡೆ ವಿಶ್ವ ಹಿಂದೂ ಪರಿಷದ್ ಹೆಬ್ಬಾಳ ಘಟಕದಿಂದಲೂ ರಾಮರಥ ಯಾತ್ರೆ ಶೋಭಾ ಯಾತ್ರೆಯನ್ನು ಆಯೋಜಿಸಲಾಗಿದೆ. ಈ ರಥಯಾತ್ರೆ ಸಂಜೆ 4 ಕ್ಕೆ ಅಶ್ವಥನಗರದಿಂದ ಆರಂಭವಾಗಿ ಸಂಜಯನಗರ ಮುಖ್ಯರಸ್ತೆಯ ಮೂಲಕ ಸಾಗಿ ಭೂಪಸಂದ್ರದಲ್ಲಿ ಕೊನೆಯಾಗುವುದು.
Advertisement
ಇತ್ತ ಇಂದಿನಿಂದ 2 ದಿನಗಳ ಕಾಲ ಗಾಳಿ ಆಂಜನೇಯ, ಸ್ಯಾಟಲೈಟ್ ಬಸ್ ನಿಲ್ದಾಣದ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿಷೇಧವಿದೆ. 2 ದಿನಗಳ ಕಾಲ ಗಾಳಿ ಆಂಜನೇಯ ದೇಗುಲದಲ್ಲಿ ರಥೋತ್ಸವ ನಡೆಯಲಿದ್ದು, 2 ದಿನ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಬೇಕಿದೆ. ಇದನ್ನೂ ಓದಿ: ಸುರ್ಜೆವಾಲ ಟ್ವೀಟ್‌ಗೆ ಯಾವುದೇ ಕಿಮ್ಮತ್ತಿಲ್ಲ : ಬೊಮ್ಮಾಯಿ
ಪರ್ಯಾಯ ಮಾರ್ಗ ಎಲ್ಲಿ..?
* ಮೈಸೂರು ಕಡೆ ಹೋಗುವವರು ಹೊಸಗುಡ್ಡದಹಳ್ಳಿ ಜಂಕ್ಷನ್ ಬಳಿ ಎಡ ತಿರುವು – ಟಿಂಬರ್ ಯಾರ್ಡ್ ಬಡಾವಣೆ ಮೂಲಕ – ಹೊಸಕೆರೆಹಳ್ಳಿ ರಸ್ತೆ ಮಾರ್ಗವಾಗಿ – ಮೈಸೂರು ಕಡೆ ಹೋಗಬಹುದು.
* ಬೆಂಗಳೂರು ಕಡೆ ಬರುವವರು ಕಿಂಕೋ ಜಂಕ್ಷನ್ ಬಳಿ ಎಡ ತಿರುವು – ಮೇಲ್ಸೇತುವೆ ಮೂಲಕ ಬಾಪೂಜಿ ಜಂಕ್ಷನ್ ಮೂಲಕ ನಗರಕ್ಕೆ ಎಂಟ್ರಿ