Connect with us

Districts

ಡಾ.ಶ್ರೀ ನಿರ್ಮಲಾನಂದ ಸ್ವಾಮೀಜಿ ಕರ್ನಾಟಕ ಜಾನಪದ ಪರಿಷತ್ತಿನ ಪ್ರಧಾನ ಪೋಷಕರಾಗಿ ಘೋಷಣೆ: ಟಿ ತಿಮ್ಮೇಗೌಡ

Published

on

ರಾಮನಗರ: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರನ್ನು ಕರ್ನಾಟಕ ಜಾನಪದ ಪರಿಷತ್ತಿನ ಪ್ರಧಾನ ಪೋಷಕರನ್ನಾಗಿ ಪರಿಷತ್ತಿನ ಆಡಳಿತ ಮಂಡಳಿಯ ಸಭೆಯಲ್ಲಿ ನೇಮಕ ಮಾಡಕೊಳ್ಳಲಾಗಿದೆ ಎಂದು ಎಂದು ಪರಿಷತ್ತಿನ ರಾಜ್ಯ ಘಟಕದ ಅದ್ಯಕ್ಷ ಡಾ. ಟಿ. ತಿಮ್ಮೇಗೌಡ ಜನಪದ ಲೋಕದಲ್ಲಿ ತಿಳಿಸಿದ್ದಾರೆ.

ರಾಮನಗರ ಹೊರವಲಯದಲ್ಲಿನ ಜಾನಪದ ಲೋಕದ ಸರಸ್ವತಿ ಮಂದಿರದಲ್ಲಿ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಎಚ್.ಎನ್. ನಂಜರಾಜ್ ಸ್ಮರಣಾರ್ಥ ರಾಜ್ಯ ಮಟ್ಟದ ಜನಪದ ಗೀತಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ರಾಜ್ಯದ ವಿವಿದೆಡೆಗಳಿಂದ ನೂರಾರು ಜನಪದ ಗಾಯಕರು ಹಾಗೂ ಜನಪದ ಗಾಯನ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಜನಪದ ಗೀತೆಗಾಯನ ಮೂಲಕ ಒಬ್ಬರಿಗೊಬ್ಬರು ಸಾಕಷ್ಟು ಪೈಪೋಟಿ ನೀಡಿದ್ದು ನೆರೆದಿದ್ದವರನ್ನು ಮೂಕವಿಸ್ಮಿತರನ್ನಾಗಿಸಿತ್ತು.

Advertisement
Continue Reading Below

ಜನಪದ ಗೀತಗಾಯನ ಸ್ಪರ್ಧೆಯಲ್ಲಿ ಮಂಡ್ಯ ತಾಲೂಕಿನ ಕೀಲಾರ ಗ್ರಾಮದ ಮಂಜೇಶ್‍ಗೌಡ ಮತ್ತು ತಂಡ ಪ್ರಥಮ ಬಹುಮಾನಗಳಿಸುವ ಮೂಲಕ ಟ್ರೋಫಿ ಹಾಗೂ ಹತ್ತು ಸಾವಿರ ರೂಪಾಯಿಗಳ ನಗದು ಬಹುಮಾನವನ್ನ ತನ್ನದಾಗಿಸಿಕೊಂಡ್ರೆ, ಮುಧೋಳದ ಯಶೋಧ ನಡುವಿನಮನಿ ಮತ್ತು ತಂಡ ದ್ವಿತೀಯ ಬಹುಮಾನ ಪಡೆದು ಟ್ರೋಫಿ ಹಾಗೂ ಐದು ಸಾವಿರ ನಗದು ಬಹುಮಾನ ಹಾಗೂ ಅರಕಲಗೂಡಿನ ಪ್ರದೀಪ ಮತ್ತು ತಂಡ ತೃತೀಯ ಬಹುಮಾನ ಗಳಿಸಿ ಟ್ರೋಫಿ ಹಾಗೂ ಮೂರು ಸಾವಿರ ನಗದು ಬಹುಮಾನವನ್ನು ಪಡೆದರು. ಗೀತಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ. ರಂಗಾರೆಡ್ಡಿ ಕೋಡಿರಾಂಪುರ, ಕರ್ನಾಟಕ ಜಾನಪದ ಪರಿಷತ್ತಿನ ಮೆನೇಜಿಂಗ್ ಟ್ರಸ್ಟಿ ಆದಿತ್ಯಾನಂಜರಾಜ್, ತೀರ್ಪುಗಾರರಾದ ಹೊಳಗೆರೆಹಳ್ಳಿ ಲೋಕೇಶ್, ಡಾ.ಯು.ಎಂ. ರವಿ, ಬಂಡ್ಲಳ್ಳಿ ವಿಜಯ್ ಕುಮಾರ್, ಜಾನಪದ ಲೋಕದ ಮುಖ್ಯ ಆಡಳಿತಾಕಾರಿ ಸಿ.ಎನ್. ರುದ್ರಪ್ಪ, ಆಡಳಿತಾಕಾರಿ ಡಾ. ಕುರುವ ಬಸವರಾಜ್ ಇತರರು ಪಾಲ್ಗೊಂಡಿದ್ದರು.

ಇದೇ ವೇಳೆ ಮಾತನಾಡಿದ ಜನಪದ ಪರಿಷತ್ತಿನ ಅದ್ಯಕ್ಷ ಡಾ.ಟಿ ತಿಮ್ಮೇಗೌಡರವರು ಆದಿಚುಂಚನಗಿರಿಯ ಮಹಾಸಂಸ್ಥಾನದ ಪೀಠಾದ್ಯಕ್ಷ ಡಾ.ಶ್ರೀ ನಿರ್ಮಲಾನಂದ ಸ್ವಾಮೀಜಿಗಳನ್ನು ಕರ್ನಾಟಕ ಜನಪದ ಪರಿಷತ್ತಿನ ಪ್ರಧಾನ ಪೋಷಕರನ್ನಾಗಿ ಹಾಗೂ ರಾಮನಗರ ತಾಲೂಕಿನ ಅರ್ಚಕರಹಳ್ಳಿ ಬಳಿ ಇರುವ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರನಾಥ ಸ್ವಾಮೀಜಿ ಅವರನ್ನು ಪರಿಷತ್ತಿನ ಆಡಳಿತ ಮಂಡಳಿಯ ಧರ್ಮದರ್ಶಿಗಳನ್ನಾಗಿ ಸರ್ವಾನುಮತದಿಂದ ಪರಿಷತ್ತಿನ ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿಸಿದರು.

ಜಾನಪದ ಲೋಕದ ಬೆಳ್ಳಿಹಬ್ಬ ಹಾಗೂ ಲೋಕೋತ್ಸವವನ್ನು ಫೆಬ್ರವರಿ 16ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಚರಿಸಲಾಗುತ್ತದೆ. ಹಾಗೂ ಫೆಬ್ರವರಿ 17 ಹಾಗೂ 18 ರಂದು ಬೆಳ್ಳಿ ಹಬ್ಬ ಹಾಗೂ ಲೋಕೋತ್ಸವವನ್ನು ವಿಜೃಂಭಣೆಯಿಂದ ಜನಪದ ಲೋಕದಲ್ಲಿ ಆಚರಿಸಲಾಗುತ್ತದೆ ಎಂದರು. ಅದರಲ್ಲೂ ಬೆಳ್ಳಿ ಹಬ್ಬವನ್ನು ಜನಪದ ಲೋಕದಲ್ಲಿ ಜನಪದ ಕಲಾತಂಡಗಳು ಹಾಗೂ ಜನಪದ ತತ್ವಗಳನ್ನು ಸಾರುವ ದೃಷ್ಟಿಯಿಂದ ಜನಪದ ಲೋಕೋತ್ಸವವನ್ನು ಆಚರಿಸಲಾಗುವುದು ಎಂದು ಹೇಳಿದರು.

Click to comment

Leave a Reply

Your email address will not be published. Required fields are marked *