ರಾಮನಗರ: ಜಿಲ್ಲೆಯ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಎಲ್.ಚಂದ್ರಶೇಖರ್ ಕೂಡ ಕೋಟ್ಯಧಿಪತಿಯಾಗಿದ್ದಾರೆ. ಚಂದ್ರಶೇಖರ್ ಇಂದು ಬೃಹತ್ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಸ್ಥಿರಾಸ್ತಿ ಹಾಗೂ ಚರಾಸ್ತಿಗಳ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ. ಒಟ್ಟು 10.20 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಚಂದ್ರಶೇಖರ್ 65 ಲಕ್ಷ ರೂ. ಸಾಲ ಮಾಡಿದ್ದಾರೆ. ಬಿಡದಿ ಕೆನರಾ ಬ್ಯಾಂಕಿಗೆ ಬಡ್ಡಿ ಸಹಿತ 65 ಲಕ್ಷ ರೂ. ಮರುಪಾವತಿ ಮಾಡಬೇಕಾಗಿದೆ.
Advertisement
Advertisement
ಆಸ್ತಿ ಎಷ್ಟಿದೆ?
ಚಂದ್ರಶೇಖರ್ ರ ಸ್ಥಿರಾಸ್ತಿ ಮೌಲ್ಯ 6.80 ಕೋಟಿ ರೂ. ಇದ್ದು, ಇದರಲ್ಲಿ ಬಿಡದಿ ಹೋಬಳಿ ಅಬ್ಬನಕುಪ್ಪೆ ಗ್ರಾಮದ ಸರ್ವೇ ನಂಬರ್ 137 ರಲ್ಲಿ 5.09 ಎಕರೆ, ಹೆಗ್ಗಡಗೆರೆಯ ಸರ್ವೇ ನಂಬರ್ 256 ರಲ್ಲಿ 1 ಎಕರೆ, 258 ರಲ್ಲಿ 3.35 ಎಕರೆ, ಸರ್ವೇ ನಂಬರ್ 91 ರಲ್ಲಿ 2 ಎಕರೆ, ಕಲ್ಲಗೋಪಹಳ್ಳಿ ಸರ್ವೇ ನಂಬರ್ 1 ರಲ್ಲಿ 1 ಎಕರೆ ಸೇರಿದಂತೆ ಒಟ್ಟು 13.34 ಎಕರೆ ಜಮೀನು ಹೊಂದಿದ್ದಾರೆ. ಚರಾಸ್ತಿ ಮೌಲ್ಯ 13.60 ಲಕ್ಷ ರೂ. ಇದ್ದು, ಇದರಲ್ಲಿ, 10 ಲಕ್ಷ ರೂ. ಮೌಲ್ಯದ ಸ್ಕೋಡಾ ಕಾರು, ನಗದು 2 ಲಕ್ಷ ರೂಪಾಯಿ ಇದೆ. ಇದನ್ನೂ ಓದಿ: ಕೋಟ್ಯಂತರ ರೂ. ಆಸ್ತಿಯ ಒಡತಿ ಅನಿತಾ ಕುಮಾರಸ್ವಾಮಿ: 2013ರಲ್ಲಿ ಎಷ್ಟಿತ್ತು? ಈಗ ಎಷ್ಟಿದೆ?
Advertisement
ಪತ್ನಿ ಸುಮಿತ್ರಾದೇವಿ ಹೆಸರಲ್ಲಿ ಬೆಂಗಳೂರಿನಲ ಕಾಮಾಕ್ಷಿ ಪಾಳ್ಯದ ವೃಷಭಾವತಿ ನಗರದಲ್ಲಿ 48×45 ಅಡಿ ನಿವೇಶನ, ಕಾಮಾಕ್ಷಿಪಾಳ್ಯದಲ್ಲಿ 70×28.6 ನಿವೇಶನ ಮತ್ತು ಇಂಡಸ್ಟ್ರಿಯಲ್ ಶೆಡ್ ಸೇರಿದಂತೆ ಒಟ್ಟು 3 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಇದಲ್ಲದೇ 23.70 ಲಕ್ಷ ರೂ. ಚರಾಸ್ಥಿ ಹೊಂದಿದ್ದು, ಇದರಲ್ಲಿ 20 ಲಕ್ಷ ರೂ. ಮೌಲ್ಯದ 700 ಗ್ರಾಂ ಚಿನ್ನಾಭರಣ, 70 ಸಾವಿರ ಮೌಲ್ಯದ 2 ಕೆಜಿ ಬೆಳ್ಳಿ ವಸ್ತುಗಳು ಹಾಗೂ ಬ್ಯಾಂಕ್ ಖಾತೆಯಲ್ಲಿ 3 ಲಕ್ಷ ರೂ. ಹಣ ಇದೆ. ಪುತ್ರ ಮನೀಷ್ ಹೆಸರಲ್ಲಿ 3 ಲಕ್ಷ ರೂ ಮೌಲ್ಯದ ಒಂದು ಕೆಟಿಎಂ ಬೈಕ್ ಇದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv