ರಾಮನಗರ: ಬಿಜೆಪಿಯವರು (BJP) ಮೊದಲು ಅವರ ಮನೆ ದೇವರ ಮೇಲೆ ಆಣೆ ಮಾಡಲಿ, ನಾವು 40% ಕಮಿಷನ್ ತೆಗೆದುಕೊಂಡಿಲ್ಲ, ವರ್ಗಾವಣೆ ದಂಧೆ ಮಾಡಿಲ್ಲ, ಭ್ರಷ್ಟಾಚಾರ (Corruption) ಮಾಡಿಲ್ಲ ಅಂತ ಆಣೆ ಮಾಡಲಿ. ನಮ್ಮ ವಿರುದ್ಧ ಆರೋಪ ಮಾಡುವುದಕ್ಕೂ ನೈತಿಕತೆ ಬೇಕು ಎಂದು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಕಮಿಷನ್ ವಿಚಾರ ಕುರಿತು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅಜ್ಜಯ್ಯನ ಮೇಲೆ ಆಣೆ ಮಾಡಲಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ರಾಮನಗರದಲ್ಲಿ (Ramanagara) ಅವರು ಪ್ರತಿಕ್ರಿಯಿಸಿದರು. ಇನ್ನೂ ಸರ್ಕಾರ ಟೇಕಾಫ್ ಆಗಿಲ್ಲ ಎಂಬ ವಿಪಕ್ಷಗಳ ಆರೋಪದ ಕುರಿತು ಮಾತನಾಡಿದ ಅವರು, ನಮ್ಮ ಸರ್ಕಾರ ಟೇಕಾಫ್ ಆಗಿ ಈಗಾಗಲೇ ಸಾವಿರಾರು ಕಿಲೋ ಮೀಟರ್ ಮುಂದೆ ಹೋಗಿದೆ. ಟೀಕೆ ಮಾಡುವವರು ಮಾಡಲಿ ಬಿಡಿ. ವಿರೋಧ ಪಕ್ಷದ ಕೆಲಸವೇ ಟೀಕೆ ಮಾಡುವುದು ಎಂದರು. ಇದನ್ನೂ ಓದಿ: DCM ಡಿಕೆಶಿ ಮನೆದೇವರು ಕೆಂಕೇರಮ್ಮ ದೇವಾಲಯದಲ್ಲಿ ಚಿನ್ನ, ಬೆಳ್ಳಿ ಕಳ್ಳತನ!
Advertisement
Advertisement
ಸರ್ಕಾರದ ವಿರುದ್ಧ ಸಚಿವ ಅಶ್ವಥ್ ನಾರಾಯಣ್ (CN Ashwath Narayan) ವಾಗ್ದಾಳಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅಶ್ವಥ್ ನಾರಾಯಣ್ ಮಾತಿಗೆ ಅವರ ಪಕ್ಷದಲ್ಲೇ ಕಿಮ್ಮತಿಲ್ಲ. ಬಿಜೆಪಿ ನೀಡಿದ್ದ 610 ಭರವಸೆಯಲ್ಲಿ ಕೇವಲ 60 ಭರವಸೆಗಳನ್ನಷ್ಟೇ ಈಡೇರಿಸಿದೆ. ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ನಮ್ಮ ಸರ್ಕಾರ 2013ರಲ್ಲಿ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಹಾಗಾಗಿ ಬಿಜೆಪಿಯವರ ಮಾತಿಗೆ ಮಹತ್ವ ಕೊಡಬೇಕಿಲ್ಲ. ನಾವು ಗ್ಯಾರೆಂಟಿಗಳ ಮೂಲಕ ಜನರನ್ನು ತಲುಪಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಪಾಕಿಸ್ತಾನ ಇಸ್ಲಾಂ ರಾಷ್ಟ್ರ ಎಂದು ಘೋಷಿಸಿಕೊಂಡು ಏನಾಗಿದೆ ಎಂದು ಎಲ್ಲರಿಗೂ ಗೊತ್ತು: ದಿಗ್ವಿಜಯ್ ಸಿಂಗ್
Advertisement
Advertisement
ಇನ್ನೂ ಎರಡು ವರ್ಷದ ಬಳಿಕ ಕಿರಿಯರಿಗೆ ಅವಕಾಶ ನೀಡಬೇಕು ಎಂಬ ಸಚಿವ ಮುನಿಯಪ್ಪ ಹೇಳಿಕೆ ಕುರಿತು ಮಾತನಾಡಿ, ಅದು ಅವರು ವೈಯಕ್ತಿಕವಾಗಿ ಹೇಳಿದ್ದಾರೆ. ಎಲ್ಲರಿಗೂ ಅವಕಾಶ ಸಿಗಬೇಕಲ್ವಾ? ಹಾಗಾಗಿ ಹೇಳಿದ್ದಾರೆ. ಇನ್ನು ಎರಡೂವರೆ ವರ್ಷ ಆದಮೇಲೆ ನೋಡೋಣ. ಈ ಬಗ್ಗೆ ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ ಎಂದರು. ಇದನ್ನೂ ಓದಿ: ಶಸ್ತ್ರಚಿಕಿತ್ಸೆ ಬಳಿಕ ಧ್ವಜಾರೋಹಣ ನೆರವೇರಿಸಿದ ಶತಾಯುಷಿ ಅಜ್ಜಿ!
Web Stories