ಬೆಂಗಳೂರು: ಸಮಾಜದ ಶಾಂತಿ ಕದಡಿ ನಿರಂತರ ಭೀತಿ ಉಂಟುಮಾಡುವವರೇ ಭಯೋತ್ಪಾದಕರು, ಅವರು ಯಾರೇ ಆಗಿರಲಿ ಯಾವುದೇ ಧರ್ಮಕ್ಕೆ ಸೇರಿರಲಿ. ಈತ ಸಂಸದ ಹಾಗೂ ಕೇಂದ್ರ ಸಚಿವನಾಗಲೂ ನಾಲಾಯಕ್. ಇದನ್ನು ಜನರೇ ನಿರ್ಧರಿಸಲಿ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಕೇಂದ್ರ ಕೌಶಲ್ಯಾಭಿವೃದ್ಧಿ ಮಂತ್ರಿ ಅನಂತ್ ಕುಮಾರ್ ಹೆಗಡೆ ವಿರುದ್ಧ ಸ್ಟೇಟಸ್ ಹಾಕಿದ್ದಾರೆ.
ಇಷ್ಟು ಸಾಕಾ ಇನ್ನೂ ಬೇಕಾ ತಪರಾಕಿ ಸಿದ್ದರಾಮಯ್ಯನವರೇ? ಹೇಮಂತ್ ನಿಂಬಾಳ್ಕರ್, ರಾಮಲಿಂಗಾರೆಡ್ಡಿ ಹಾಗೂ ಕೆಂಪಯ್ಯರಂಥ ಜನರಿದ್ದರೆ ಮುಂದಿದೆ ನೋಡಿ ಮಾರಿಹಬ್ಬ. ಪ್ರತಿಭಟನೆ ವೇಳೆ ಬಂಧಿರಾಗಿದ್ದ ಎಲ್ಲರಿಗೂ ನ್ಯಾಯಾಲಯ ಜಾಮೀನು ನೀಡಿದ್ದು, ಇದು ಪ್ರಜಾಪ್ರಭುತ್ವದ ವಿಜಯ ಎಂದು ಅನಂತ್ ಕುಮಾರ್ ಹೆಗಡೆ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದರು.
Advertisement
Advertisement
ಈ ಪೋಸ್ಟಿಗೆ ಸಂಬಂಧಿಸಿದಂತೆ ರಾಮಲಿಂಗಾ ರೆಡ್ಡಿ ಅವರು ಎಫ್‍ಬಿ ಪೋಸ್ಟ್ ಪ್ರಕಟಿಸಿ, ಪರೇಶ್ ಮೇಸ್ತಾ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಿದೆ. ಸಮಾಜದ ಶಾಂತಿ ಹಾಗೂ ಜನಹಿತ ಕಾಪಾಡಲು ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ ಎಂದು ಬರೆದು ತಿರುಗೇಟು ನೀಡಿದ್ದಾರೆ.
Advertisement
ರಾಮಲಿಂಗಾ ರೆಡ್ಡಿ ಎಫ್‍ಬಿ ಪೋಸ್ಟ್ ನಲ್ಲಿ ಏನಿದೆ?
ಹೊನ್ನಾವರದ ಘಟನೆಯನ್ನು ಸರಕಾರ ಪ್ರಾಮಾಣಿಕವಾಗಿ ಸಿಬಿಐಗೆ ವಹಿಸಿದೆ. ಸಮಾಜದ ಶಾಂತಿ ಕದಡಿ ನಿರಂತರ ಭೀತಿ ಉಂಟುಮಾಡುವವರೇ ಭಯೋತ್ಪಾದಕರು, ಅವರು ಯಾರೇ ಆಗಿರಲಿ ಯಾವುದೇ ಧರ್ಮಕ್ಕೆ ಸೇರಿರಲಿ. ಈತ ಸಂಸದ ಹಾಗೂ ಕೇಂದ್ರ ಸಚಿವನಾಗಲೂ ನಾಲಾಯಕ್. ಇದನ್ನು ಜನರೇ ನಿರ್ಧರಿಸಲಿ.
Advertisement
ಮೊದಲು ನೀವು ಮನುಷ್ಯರಾಗಿ ಸಹಬಾಳ್ವೆಯಿಂದ ಬದುಕಲು ಕಲಿಯಿರಿ. ರಾಜ್ಯದ ಜನರಿಗೆ ರಕ್ಷಣೆ ಕೊಡುವುದು ರಾಜ್ಯ ಸರ್ಕಾರದ ಕರ್ತವ್ಯ, ಅದನ್ನ ರಾಜ್ಯ ಸರ್ಕಾರ ನಿಭಾಯಿಸುತ್ತದೆ. ಮುಂದೆಯೂ ಅದನ್ನ ನಿಭಾಯಿಸುತ್ತದೆ. ನಿಮ್ಮ ಹಾಗೆ ಒಡೆದು ಆಳುವ ನೀತಿ ನಮ್ಮದಲ್ಲ. ಎಲ್ಲಾ ಮಾನವರನ್ನು ಒಂದೇ ಆಗಿ ನೋಡುವುದೇ ರಾಜ್ಯಸರ್ಕಾರದ ಉದ್ದೇಶ. ಜನರಿಗೆ ತೊಂದರೆ ಕೊಟ್ಟು, ಸಾವಿನಲ್ಲಿ ರಾಜಕೀಯ ಮಾಡುವ ನಿಮಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ.
ನಿಮ್ಮ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ನೀವು ಮಾಡುತ್ತಿರುವ ಹಿಂಸಾಚಾರಕ್ಕೆ ಜನರೇ ತಕ್ಕ ಉತ್ತರ ನೀಡುತ್ತಾರೆ. ರಾಜ್ಯ ಸರ್ಕಾರ ಕ್ಕೆ ಜವಾಬ್ದಾರಿ ನಿಭಾಯಿಸುವುದು ಗೊತ್ತಿದೆ. ಮೈಯಲ್ಲಾ ವಿಷ ತುಂಬಿಕೊಂಡು ಜನರಿಗೆ ತೊಂದರೆ ಕೊಡುವ ನಿಮ್ಮಗಳ ಮನಸ್ಥಿತಿ ಜನರಿಗೆ ಗೊತ್ತಿದೆ. ನಿಮ್ಮ ನಡವಳಿಕೆಗಳಿಗೆ ಕಾಲವೇ ಶೀಘ್ರ ಉತ್ತರ ಕೊಡಲಿದೆ.
ಸಮಾಜದ ಶಾಂತಿ ಹಾಗೂ ಜನಹಿತ ಕಾಪಾಡಲು ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ. ಜನರು ಸರ್ಕಾರದ ಪರವಾಗಿದ್ದಾರೆ ನಮ್ಮ ಒಳ್ಳೆಯ ಕೆಲಸಗಳನ್ನು ನೀವುಗಳು ಸಹಿಸಲಾರದೆ ರಾಜ್ಯದ ಜನರಿಗೆ ತೊಂದರೆ ಮಾಡಲು ಹೊರಟಿರುವುದು ಹೀನಕೃತ್ಯ. ಜನರ ರಕ್ಷಣೆ ಸರ್ಕಾರದ ಮೇಲಿದೆ, ಅದನ್ನು ಸರ್ಕಾರ ನಿಭಾಯಿಸುತ್ತದೆ.
ಇದನ್ನು ಓದಿ: ತಪರಾಕಿ ಸಿದ್ದರಾಮಯ್ಯನವರೇ ಸಾಕಾ, ಬೇಕಾ?-ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗಡೆ ಕಿಡಿ
https://www.youtube.com/watch?v=CS00Fer7y7s