ಬೆಂಗಳೂರು: ಬಿಜೆಪಿ (BJP) ಅವರಿಗೆ ದುರ್ಬುದ್ಧಿ ಇದೆ. ವಯನಾಡ್ ಪ್ರಿಯಾಂಕಾ ಗಾಂಧಿ ಅವರ ಕ್ಷೇತ್ರ ಅಂತ ಸಹಿಸೋಕೆ ಆಗದೇ ಏನೇನೋ ಆರೋಪ ಮಾಡ್ತಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಕಿಡಿಕಾರಿದ್ದಾರೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (KSTDC) ವಯನಾಡ್ ಪ್ರವಾಸೋದ್ಯಮದ ಪರವಾಗಿ ಜಾಹೀರಾತು ನೀಡಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದರು. ವಯನಾಡ್ ನಮ್ಮ ಪಕ್ಕದ ಕೇರಳ ರಾಜ್ಯದ ಒಂದು ಜಿಲ್ಲೆಯಾಗಿದೆ. ಅಲ್ಲಿಗೆ ಟೂರಿಸಂಗೆ ಬನ್ನಿ ಅಂತ ಕೆಎಸ್‌ಟಿಡಿಸಿ ಹೇಳಿದೆ ಅಂತ ಬಿಜೆಪಿ ಟೀಕೆ ಮಾಡಿದ್ದಾರೆ. ವಯನಾಡ್ ಪ್ರಿಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವ ಕ್ಷೇತ್ರ. ಅದನ್ನ ಸಹಿಸೋಕೆ ಆಗದೇ ಬಿಜೆಪಿಯವರು ಹೀಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದಾಖಲಾತಿ ಇಟ್ಟುಕೊಂಡು ಬಿಜೆಪಿಯವ್ರು ಆರೋಪ ಮಾಡಲಿ – ಖಾದರ್ ಪರ ರಾಮಲಿಂಗಾರೆಡ್ಡಿ ಬ್ಯಾಟಿಂಗ್
ನಮ್ಮ ದೇಶದಲ್ಲಿ ಬೇರೆ ರಾಜ್ಯದ ಟೂರಿಸಂಗೆ ಅವಕಾಶ ಇದೆ. ನಮ್ಮ ಇಲಾಖೆಯಿಂದ ಅಯೋಧ್ಯೆ, ಗಯಾ, ವಾರಣಾಸಿ, ತಮಿಳುನಾಡು, ಚಾರ್ ದಾಮ್, ಮಾನಸ ಸರೋವರಕ್ಕೂ ಕಳುಹಿಸುತ್ತೇವೆ. ಕೇವಲ ದೇವಸ್ಥಾನ ನೋಡೋದು ಅಲ್ಲ ಟೂರಿಸಂಗೂ ನಾವು ಅವಕಾಶ ಕೊಟ್ಟಿದ್ದೇವೆ. ಇದು ಬಿಜೆಪಿ ಅವರಿಗೆ ಗೊತ್ತಿಲ್ವಾ? ಬಿಜೆಪಿಯವರು ತಲೆಬುಡ ಗೊತ್ತಿಲ್ಲದೇ ಮಾತಾಡ್ತಾರೆ ಎಂದು ಗುಡುಗಿದ್ದಾರೆ.
ಬಿಜೆಪಿ ಅವರು ವಾಟ್ಸಾಪ್ ಯೂನಿವರ್ಸಿಟಿಯಿಂದ ಇಂತಹ ಸುದ್ದಿ ಹರಡಿಸ್ತಾರೆ. ಆರೋಪ ಮಾಡದೇ ಬಿಜೆಪಿ ಅವರಿಗೆ ನಿದ್ರೆ ಬರಲ್ಲ, ಊಟ ಸೇರಲ್ಲ. ಬಿಜೆಪಿ ಅವರಿಗೆ ದುರ್ಬುದ್ಧಿ ಇದೆ. ಇದನ್ನ ಬಿಡಬೇಕು ಅಂತ ಕಿಡಿಕಾರಿದ್ದಾರೆ.
 


 
		 
		 
		 
		 
		
 
		 
		 
		