ನವದೆಹಲಿ: ಶುಕ್ರವಾರದಿಂದ ಎಲ್ಲೆಡೆ ಮುಸ್ಲಿಮರ (Muslim) ಪವಿತ್ರ ರಂಜಾನ್ (Ramadan) ಉಪವಾಸ ವೃತ ಆರಂಭವಾಗಿದೆ. ಈ ಪವಿತ್ರ ತಿಂಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಶುಭ ಹಾರೈಸಿದ್ದಾರೆ.
ರಂಜಾನ್ ಹಿನ್ನೆಲೆ ಟ್ವೀಟ್ ಮಾಡಿರುವ ಮೋದಿ, ಹಬ್ಬಕ್ಕೆ ಶುಭಾಶಯ ತಿಳಿಸುತ್ತಾ, ಈ ಪವಿತ್ರ ತಿಂಗಳು ನಮ್ಮ ಸಮಾಜದಲ್ಲಿ ಹೆಚ್ಚಿನ ಏಕತೆ ಹಾಗೂ ಸಾಮರಸ್ಯ ತರಲಿ. ಇದು ಬಡವರ ಸೇವೆಯ ಮಹತ್ವವನ್ನು ಪುನರುಚ್ಚರಿಸಲಿ ಎಂದಿದ್ದಾರೆ. ಇದನ್ನೂ ಓದಿ: ‘ಪರಿಮಳಾ ಡಿಸೋಜಾ’ ಚಿತ್ರದ 2ನೇ ಹಾಡು ರಿಲೀಸ್ ಮಾಡಿದ ಜಿ.ಟಿ ದೇವೇಗೌಡ
Advertisement
Best wishes on the start of Ramzan. pic.twitter.com/SJk5qNAIRm
— Narendra Modi (@narendramodi) March 24, 2023
Advertisement
ಇಸ್ಲಾಂ ಸಮುದಾಯದ ಅತಿ ದೊಡ್ಡ ಹಬ್ಬವಾದ ರಂಜಾನ್ ತಿಂಗಳಲ್ಲಿ ಹೆಚ್ಚಿನವರು ಉಪವಾಸ (Fasting) ಮಾಡುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಈ ಪವಿತ್ರ ತಿಂಗಳಲ್ಲಿ ದೇಶಾದ್ಯಂತ ಮುಸ್ಲಿಮರು ಸುರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ಈ ತಿಂಗಳ ಉಪವಾಸದ ಬಳಿಕ ಈದ್-ಉಲ್-ಫಿತರ್ ಅನ್ನು ಆಚರಿಸಲಾಗುತ್ತದೆ. ಇದನ್ನೂ ಓದಿ: ಭದ್ರತಾ ಕಾರಣಕ್ಕೆ TikTok ಬ್ಯಾನ್ ಮಾಡಿದ ಬ್ರಿಟಿಷ್ ಸಂಸತ್ತು