ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 12 ನೇ ಬಜೆಟ್‍ನಲ್ಲಿ ಇಂದು ರಾಮರಾಜ್ಯದ ಪ್ರಸ್ತಾಪವೂ ಆಯಿತು. ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವಿರೋಧಿಸುವವರು ರಾಮರಾಜ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ ಎನ್ನುವುದು ನನ್ನ ಭಾವನೆ ಅಂತಾ ರಾಮಮಂದಿರ ಜಪ ಮಾಡುತ್ತಿರುವ ಬಿಜೆಪಿಗೆ ಸಿಎಂ ಸಿದ್ದು ಪರೋಕ್ಷ ಟಾಂಗ್ ನೀಡಿದ್ರು.
ಬಜೆಟ್‍ನಲ್ಲಿ ‘ರಾಮ ರಾಜ್ಯ’ದ ಬಗ್ಗೆ ಏನಿದೆ?: ‘ರಾಮರಾಜ್ಯವೆನ್ನುವುದು ಹಸಿವು ಮುಕ್ತ, ಶೋಷಣೆ ಮುಕ್ತ, ಗಾಢ ಸಾಮರಸ್ಯದ, ಸರ್ವಾಂಗೀಣ ಪ್ರಗತಿಯನ್ನು ಪ್ರತಿನಿಧಿಸುವ ಒಂದು ಪರಿಕಲ್ಪನೆ.
Advertisement
ಅಂಬೇಡ್ಕರ್ ರಚಿಸಿದ ಸಂವಿಧಾನದ ಹಿಂದಿನ ಪ್ರೇರಣೆಯಾಗಲಿ, ನನ್ನ ಬದುಕೇ ನನ್ನ ಸಂದೇಶವೆಂದ ಗಾಂಧೀಜಿಯ ಜೀವನವಾಗಲಿ, ಅಣ್ಣ ಬಸವಣ್ಣನ ಆದರ್ಶವಾಗಲಿ ಇವೆಲ್ಲವೂ ಧ್ವನಿಸುವುದು ಇದನ್ನೇ. ಹಾಗಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವಿರೋಧಿಸುವವರು ರಾಮರಾಜ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ ಎನ್ನುವುದು ನನ್ನ ಭಾವನೆ’ ಎಂದು ಸಿಎಂ ಸಿದ್ದರಾಮಯ್ಯ ರಾಮಜಪ ಮಾಡುತ್ತಿರುವ ಕೇಸರಿ ಪಡೆಗೆ ಟಾಂಗ್ ನೀಡಿದ್ದಾರೆ.