ಲಕ್ನೋ: ಉತ್ತರ ಪ್ರದೇಶದ (Uttar Pradesh) ಎಲ್ಲಾ ಜೈಲುಗಳಲ್ಲಿ ಜನವರಿ 22 ರಂದು ರಾಮಮಂದಿರ (Ram Mandir) ಉದ್ಘಾಟನೆ ಸಮಾರಂಭದ ನೇರಪ್ರಸಾರ ಮಾಡಲಾಗುವುದು ಎಂದು ಸಚಿವ ಧರ್ಮವೀರ್ ಪ್ರಜಾಪತಿ ಹೇಳಿದ್ದಾರೆ.
ಕೈದಿಗಳು ಸಹ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಲು ಸಾಧ್ಯವಾಗುತ್ತದೆ. ಸದ್ಯ 1.05 ಲಕ್ಷಕ್ಕೂ ಹೆಚ್ಚು ಕೈದಿಗಳಿದ್ದಾರೆ. ಅವರೂ ಈ ದೇಶದ ಪ್ರಜೆಗಳು. ಅವರು ಈ ಸಂದರ್ಭದಿಂದ ದೂರ ಉಳಿಯದಂತೆ ನೋಡಿಕೊಳ್ಳಲು, ರಾಜ್ಯದ ಎಲ್ಲಾ ಜೈಲುಗಳಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಮಭಕ್ತರಿಗೆ ಮರೆಯಲಾಗದ ಗಿಫ್ಟ್ – ಉಚಿತ ಹಚ್ಚೆಹಾಕುವ ಮೂಲಕ ಶ್ರೀರಾಮನ ಸೇವೆಗೆ ಮುಂದಾದ ಗುಜರಾತ್ ಕಲಾವಿದ
Advertisement
Advertisement
ಎಲ್ಲಾ ಕೈದಿಗಳು ವೃತ್ತಿಪರ ಅಪರಾಧಿಗಳಲ್ಲ. ಕೆಲವು ಘಟನೆಗಳು ಸಂಭವಿಸಿದಾಗ ಅವರು ಅಪರಾಧಿಗಳಾಗುತ್ತಾರೆ. ಇಂತಹ ಪವಿತ್ರ ಸಂದರ್ಭದಲ್ಲಿ ಅವರು ಪ್ರತ್ಯೇಕವಾಗಿ ಉಳಿಯಬಾರದು. ಹೀಗಾಗಿ ಈ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
ಭಾರತೀಯ ಜನತಾ ಪಕ್ಷ (ಬಿಜೆಪಿ) ಅಯೋಧ್ಯೆಯ ಶ್ರೀರಾಮ ಮಂದಿರದ ಮಹಾಮಸ್ತಕಾಭಿಷೇಕ ಸಮಾರಂಭವನ್ನು ದೇಶಾದ್ಯಂತ ಬೂತ್ ಮಟ್ಟದಲ್ಲಿ ನೇರಪ್ರಸಾರ ಮಾಡುವ ಯೋಜನೆಯನ್ನು ಪ್ರಕಟಿಸಿದೆ. ಬೂತ್ ಮಟ್ಟದಲ್ಲಿ ಶ್ರೀರಾಮ ಪ್ರತಿಷ್ಠಾಪನೆಯ ನೇರಪ್ರಸಾರಕ್ಕಾಗಿ ದೊಡ್ಡ ಪರದೆಗಳನ್ನು ಸ್ಥಾಪಿಸಲು ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಇದನ್ನೂ ಓದಿ: Ayodhya: ಚಂಡೀಗಢದಲ್ಲಿ 7 ದಿನಗಳ ಕಾಲ ಅದ್ಧೂರಿ ಕಾರ್ಯಕ್ರಮ, 108 ಕ್ವಿಂಟಾಲ್ ಲಡ್ಡು ವಿತರಣೆ
Advertisement
ಜನವರಿ 22 ರಂದು ರಾಮಮಂದಿರದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಭಾರತ ಮತ್ತು ವಿದೇಶದಿಂದ ಹಲವಾರು ವಿವಿಐಪಿ ಅತಿಥಿಗಳು ಅಯೋಧ್ಯೆಯಲ್ಲಿ ಶುಭ ಸಂದರ್ಭದಲ್ಲಿ ಭಾಗವಹಿಸಲು ಆಹ್ವಾನಗಳನ್ನು ಸ್ವೀಕರಿಸಿದ್ದಾರೆ.