ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo yatre) ಯು ಸದ್ಯ ಉತ್ತರಪ್ರದೇಶಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯ ರಾಮಜನ್ಮಭೂಮಿ ದೇಗುಲದ ಪ್ರಧಾನ ಅರ್ಚಕ ರಾಹುಲ್ ಗಾಂಧಿಗೆ ವಿಶ್ ಮಾಡಿ ಪತ್ರವೊಂದನ್ನು ಬರೆದಿದ್ದಾರೆ.
ರಾಮನ ಆಶೀರ್ವಾದ ಸದಾ ನಿಮ್ಮೊಂದಿಗಿರಲಿದೆ ಎಂದು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ (Acharya Satyendra Das) ಅವರು ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರದಲ್ಲೇನಿದೆ..?: ನಿಮ್ಮ ಈ ಹೋರಾಟಕ್ಕೆ ಯಶಸ್ಸು ಸಿಗಲಿದೆ ಎಂದು ನಾನು ಭಾವಿಸುತ್ತೇನೆ. ಹಾಗೆಯೇ ಅದಕ್ಕಾಗಿ ಪ್ರಾರ್ಥಿಸುತ್ತೇನೆ. ದೇವರು ನಿಮಗೆ ಆಯುಷ್ಯ, ದೀರ್ಘಾಯುಷ್ಯ ನೀಡಿ ಕಾಪಾಡಲಿ ಎಂದು ತಿಳಿಸಿದ್ದಾರೆ. ಈ ಮೂಲಕ ದೇಶವನ್ನು ಒಗ್ಗೂಡಿಸುವ ಕಾಂಗ್ರೆಸ್ ಕ್ರಮಕ್ಕೆ ತಮ್ಮ ಬೆಂಬಲವನ್ನು ನೀಡಿದರು. ಇದನ್ನೂ ಓದಿ: 9 ದಿನದ ಬ್ರೇಕ್ ಬಳಿಕ ಜೋಡೋ ಯಾತ್ರೆ ಪುನರಾರಂಭ
ನೀವು ಜನರ ಹಿತಾಸಕ್ತಿ ಮತ್ತು ಅವರ ಸಂತೋಷಕ್ಕಾಗಿ ‘ಸರ್ವಜನ್ ಹಿತೈ ಸರ್ವಜನ್ ಸುಖೇ’ ಎಂಬ ಉದಾತ್ತ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿದ್ದೀರಿ. ಶ್ರೀರಾಮನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಹಾರೈಸುವುದಾಗಿ ದಾಸ್ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಜ.31ಕ್ಕೆ ಸಂಸತ್ ಅಧಿವೇಶನ; ಫೆ.1ಕ್ಕೆ ಕೇಂದ್ರ ಬಜೆಟ್ ಮಂಡನೆ
ಕಾಂಗ್ರೆಸ್ ಪಕ್ಷದ ಅಯೋಧ್ಯೆ ಜಿಲ್ಲಾ ವಕ್ತಾರ ಸುನೀಲ್ ಕೃಷ್ಣ ಗೌತಮ್ ಈ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದ ಭಾರತ್ ಜೋಡೋ ಯಾತ್ರೆಗೆ ಬೆಂಬಲ ನೀಡುವ ಸಲುವಾಗಿ ಆಚಾರ್ಯ ಸತ್ಯೇಂದ್ರ ದಾಸ್ ಅವರು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.