LatestNational

ರಾಮ ಮಂದಿರ ನಿರ್ಮಾಣ ಬಿಜೆಪಿಯ ಮತ್ತೊಂದು ಜುಮ್ಲಾ(ಸುಳ್ಳು)- ಮಿತ್ರ ಪಕ್ಷದ ವಿರುದ್ಧವೇ ಸಿಡಿದ ಶಿವಸೇನೆ

-ಶ್ರೀರಾಮನಿಗೆ ಅಚ್ಛೇ ದಿನ್ ಯಾವಾಗ ಬರುತ್ತೆ?

ಮುಂಬೈ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಬಿಜೆಪಿ ಸುಳ್ಳು ಭರವಸೆಯನ್ನು ನೀಡುತ್ತಿದೆಯಂದು ಶಿವಸೇನೆ ತನ್ನ ಸಾಮ್ನಾ ಪತ್ರಿಕೆಯಲ್ಲಿ ಮಿತ್ರ ಪಕ್ಷದ ವಿರುದ್ಧವೇ ಕಿಡಿಕಾರಿದೆ.

ಶಿವಸೇನೆ ಎಂದಿನಂತೆ ತನ್ನ ಮಿತ್ರ ಪಕ್ಷ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಗುರುವಾರದ ಸಾಮ್ನಾ ಪತ್ರಿಕೆಯಲ್ಲಿ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದೆ. 2014ರ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಮಾತು ಕೊಟ್ಟಿತ್ತು. ಆದರೆ ತನ್ನ ಎಲ್ಲಾ ಮಾತುಗಳನ್ನು ಸುಳ್ಳಾಗಿಸಿಕೊಂಡಿರುವ ಬಿಜೆಪಿಯು ರಾಮಮಂದಿರ ನಿರ್ಮಾಣದಲ್ಲಿಯೂ ಮತ್ತೊಂದು ಜುಮ್ಲಾ(ಸುಳ್ಳು)ವನ್ನು ಹೇಳಿದೆ ಎಂದು ಆಕ್ರೋಶ ಹೊರಹಾಕಿದೆ.

ರಾಮ ಮಂದಿರ ನಿರ್ಮಾಣ ಬಿಜೆಪಿಯ ಮತ್ತೊಂದು ಜುಮ್ಲಾ(ಸುಳ್ಳು)- ಮಿತ್ರ ಪಕ್ಷದ ವಿರುದ್ಧವೇ ಸಿಡಿದ ಶಿವಸೇನೆ

ಇತ್ತೀಚೆಗೆ ನಡೆದ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ್ದರೂ, ಎಚ್ಚೆತ್ತುಕೊಂಡಿಲ್ಲ. ಅಲ್ಲದೇ ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಂದಲೂ ಕಲಿಯಲು ಸಿದ್ಧರಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂಬ ಬಗ್ಗೆ ಬಿಜೆಪಿಯಲ್ಲೇ ಒತ್ತಡ ಇದೆ. ಆದರೆ ಶ್ರೀರಾಮನಿಗೆ ಅಚ್ಚೇ ದಿನ್ ಬರುವುದು ಯಾವಾಗ ಎಂದು ಶಿವಸೇನೆ ಪ್ರಶ್ನಿಸಿದೆ.

ಮೋಹನ್ ಭಾಗವತ್ ರವರು ಭಗವದ್ಗೀತೆಯನ್ನು ಉಲ್ಲೇಖಿಸುತ್ತಾ, ನಾನು ಮಾಡುತ್ತಿರುವುದು ಅತ್ಯುತ್ತಮವಾದುದು ಎಂದು ಭಾವಿಸಿ ಅದನ್ನು ಮೊದಲು ಮಾಡಬೇಕು ಎಂದು ಬಿಜೆಪಿಗೆ ಮಾರ್ಗದರ್ಶನ ನೀಡಿದ್ದರು. ಆದರೂ ಸಹ ಬಿಜೆಪಿ ಸರ್ಕಾರ ಕುಂಭಕರ್ಣನಂತೆ ವರ್ತಿಸುತ್ತಿದೆ ಟೀಕಿಸಿದೆ.

ರಾಮ ಮಂದಿರ ನಿರ್ಮಾಣ ಬಿಜೆಪಿಯ ಮತ್ತೊಂದು ಜುಮ್ಲಾ(ಸುಳ್ಳು)- ಮಿತ್ರ ಪಕ್ಷದ ವಿರುದ್ಧವೇ ಸಿಡಿದ ಶಿವಸೇನೆ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Related Articles

Leave a Reply

Your email address will not be published. Required fields are marked *