ನವದೆಹಲಿ: ರಾಮ ಸೇತುವೆ ಅಸ್ತಿತ್ವದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವೆ ಸಾವಿರಾರು ವರ್ಷಗಳ ಹಿಂದೆ ಕಟ್ಟಲಾಗಿರೋ ರಾಮಸೇತುವೆ ಬಗ್ಗೆ ಅಮೆರಿಕದ ವಾಹಿನಿಯೊಂದು ಕಾರ್ಯಕ್ರಮ ಮಾಡಿದೆ. ವಿಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದಾಗ ಸೇತುವೆ ಅಸ್ತಿತ್ವದಲ್ಲಿರುವ ಸಾಧ್ಯತೆಯಿದೆ ಎಂದು ಹೇಳಿದೆ.

ಸೈನ್ಸ್ ಚಾನೆಲ್ ಈ ಕಾರ್ಯಕ್ರಮದ ಪ್ರೋಮೋವನ್ನ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಈ ಸೇತುವೆ ನೈಸರ್ಗಿಕವಾಗಿ ನಿರ್ಮಾಣವಾಗಿಲ್ಲ. ಇದು ಮಾನವ ನಿರ್ಮಿತ ಎಂದು ಹೇಳಿದೆ. ಬುಧವಾರ ರಾತ್ರಿ 7.30ಕ್ಕೆ ಡಿಸ್ಕವರಿ ಕಮ್ಯುನಿಕೇಷನ್ಸ್ ಮಾಲೀಕಕತ್ವದ ಅಮೆರಿಕದ ಸೈನ್ಸ್ ಚಾನೆಲ್‍ನಲ್ಲಿ “ಏನ್ಶಿಯಂಟ್ ಲ್ಯಾಂಡ್ ಬ್ರಿಡ್ಜ್” ಎಂಬ ಕಾರ್ಯಕ್ರಮ ಪ್ರಸಾರವಾಗಲಿದೆ.

ನಾಸಾದ ಫೋಟೋಗಳನ್ನ ಉದಾಹರಣೆಯಾಗಿ ನೀಡಿ 50 ಕಿ.ಮೀ ಉದ್ದದ ಈ ಸೇತುವೆ ಮಾನವ ನಿರ್ಮಿತವಾದುದು ಎಂದು ಕಾರ್ಯಕ್ರಮದಲ್ಲಿ ಅಮೆರಿಕದ ಪುರಾತತ್ವಶಾಸ್ತ್ರಜ್ಞರು ಹೇಳಿದ್ದಾರೆ.
https://twitter.com/ScienceChannel/status/940259901166600194?ref_src=twsrc%5Etfw&ref_url=http%3A%2F%2Fzeenews.india.com%2Findia%2Fram-setu-exists-us-promo-reignites-debate-on-the-mythological-bridge-2065734.html
ಮರಳಿನ ಮೇಲಿರುವ ಕಲ್ಲುಗಳು ಮರಳಿಗಿಂತ ಹಿಂದಿನ ಕಾಲದ್ದಾಗಿರುವುದರಿಂದ, ಕಥೆಯಲ್ಲಿ ಹೆಚ್ಚಿನದ್ದೇನೋ ಇದೆ ಎಂದು ಪ್ರೋಮೋದಲ್ಲಿ ಅಮೆರಿಕದ ಪುರಾತತ್ವಶಾಸ್ತ್ರಜ್ಞರೊಬ್ಬರು ಹೇಳೋದನ್ನ ಕೇಳಬಹುದು. ಇದರ ಆಧಾರದ ಮೇಲೆ ಹೇಳುವುದಾದರೆ ಮರಳು ನೈಸರ್ಗಿಕವಾಗಿ ರಚನೆಯಾಗಿದ್ದು, 7 ಸಾವಿರ ವರ್ಷಗಳಷ್ಟು ಹಳೆಯದ್ದು ಎನ್ನಲಾದ ಕಲ್ಲುಗಳನ್ನು ಅದರ ಮೇಲೆ ಇರಿಸಲಾಗಿದೆ ಎಂದು ಹೇಳಿದ್ದಾರೆ.

ಈ ಪ್ರೋಮೋವನ್ನ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಪಕ್ಷದ ಮುಖಂಡರಾದ ತರುಣ್ ವಿಜಯ್ ಹಾಗೂ ಪ್ರತಾಪ್ ಸಿಂಹ ರೀಟ್ವೀಟ್ ಮಾಡಿದ್ದಾರೆ.
'Ram Setu' exists, is man-made, claims promo on US TV channel! https://t.co/xx0NyKAwEb
— Prathap Simha (@mepratap) December 13, 2017
जय श्री राम 🙏🙏🙏🙏 https://t.co/M85KFnyZIY
— Smriti Z Irani (@smritiirani) December 11, 2017



