ಟಾಲಿವುಡ್ ನಟ ರಾಮ್ ಪೋತಿನೇನಿ (Ram Pothineni) ಮತ್ತೆ ಇಸ್ಮಾರ್ಟ್ ಶಂಕರ್ ಆಗಿ ಅವತಾರ ಎತ್ತಲು ರೆಡಿಯಾಗಿದ್ದಾರೆ. ಈ ಬಾರಿ ಡಬಲ್ ಇಸ್ಮಾರ್ಟ್ ಆಗಿ ಬರುತ್ತಿದ್ದಾರೆ. ಇದೀಗ ಚಿತ್ರದ ಮೊದಲ ಟೀಸರ್ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಇದನ್ನೂ ಓದಿ:ರಾಗಿಣಿ ಜೊತೆ ಕಿಶನ್ ಬಿಳಗಲಿ ರೊಮ್ಯಾಂಟಿಕ್ ರೈನ್ ಡ್ಯಾನ್ಸ್
‘ಲೈಗರ್’ ಚಿತ್ರದ ಸೋಲಿನ ಸುಳಿಯಲ್ಲಿರುವ ಪುರಿ ಜಗನ್ನಾಥ್ ಇದೀಗ ‘ಡಬಲ್ ಇಸ್ಮಾರ್ಟ್’ (Double Ismart) ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಎಂದೂ ಕಾಣಿಸಿಕೊಂಡಿರದ ಗೆಟಪ್‌ನಲ್ಲಿ ರಾಮ್ ಪೋತಿನೇನಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಝಲರ್ ಸದ್ಯ ಪೋಸ್ಟರ್ ಮೂಲಕ ಸುಳಿವು ಸಿಕ್ಕಿದೆ. ಚಿತ್ರದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಫ್ಯಾನ್ಸ್‌ಗೆ ಈಗ ಸಿಹಿಸುದ್ದಿ ಸಿಕ್ಕಿದೆ.
View this post on Instagram
‘ಡಬಲ್ ಇಸ್ಮಾರ್ಟ್’ ಚಿತ್ರದ ಫಸ್ಟ್ ಟೀಸರ್ ಇದೇ ಮೇ 15ರಂದು ರಿಲೀಸ್ ಆಗಲಿದೆ. ಇಸ್ಮಾರ್ಟ್ ಶಂಕರ್ ಚಿತ್ರಕ್ಕಿಂತ ಭಿನ್ನವಾಗಿದೆ ಈ ಚಿತ್ರ ಎಂಬುದು ಇನ್‌ಸೈಡ್ ಸ್ಟೋರಿ. ಇದನ್ನೂ ಓದಿ:‘ಹಲಗಲಿ’ ಸಿನಿಮಾದಿಂದ ಹೊರ ಬಂದ ಡಾರ್ಲಿಂಗ್ ಕೃಷ್ಣ
ಅಂದಹಾಗೆ, ರಾಮ್ ಪೋತಿನೇನಿ ಎದುರು ಸಂಜಯ್ ದತ್ (Sanjay Dutt) ನಟಿಸಿದ್ದಾರೆ. ಚಿತ್ರದ ನಾಯಕಿಯಾಗಿ ಕಾವ್ಯಾ ಥಾಪರ್ (Kavya Thapar) ನಟಿಸಿದ್ದಾರೆ. ರಾಮ್ ಜೋಡಿಯಾಗಿ ಕಾವ್ಯ ಮೊದಲ ಬಾರಿ ನಟಿಸುತ್ತಿದ್ದಾರೆ. ಒಟ್ನಲ್ಲಿ ಈ ಪ್ರೇಮಕಥೆಯನ್ನು ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.