ಚಿತ್ರರಂಗದಲ್ಲಿ ಬಯೋಪಿಕ್‌ಗಳ ಹಾವಳಿ ಜೋರಾಗಿದೆ. ಎಂ.ಎಸ್ ಧೋನಿ, ಸಂಜಯ್ ದತ್ ಜೀವನ ಚರಿತ್ರೆ ಸಿನಿಮಾ ಮಾಡುವ ಮೂಲಕ ಸಕ್ಸಸ್ ಕಂಡಿತ್ತು. ಈಗ ವಿರಾಟ್ ಕೊಹ್ಲಿ ಬಯೋಪಿಕ್ ಮಾಡುವ ಬಗ್ಗೆ ಬಾಲಿವುಡ್ ನಿರ್ಮಾಪಕರು ಪ್ಲ್ಯಾನ್ ಮಾಡ್ತಿದ್ದಾರೆ. ಹೀಗಿರುವಾಗ ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ಬಯೋಪಿಕ್ ಆಫರ್ ಸಿಕ್ಕರೆ ನಟಿಸುವೆ ಎಂದು ರಾಮ್ ಪೋತಿನೇನಿ (Ram Pothineni) ರಿಯಾಕ್ಟ್ ಮಾಡಿದ್ದಾರೆ.
ಕನ್ನಡದ ನಟಿ ಶ್ರೀಲೀಲಾ(Sreeleela)- ರಾಮ್ ಪೋತಿನೇನಿ ಅಭಿನಯದ ಸ್ಕಂದ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಚಿತ್ರದ ಪ್ರಚಾರ ಕಾರ್ಯ ಕೂಡ ಭರದಿಂದ ಸಾಗುತ್ತಿದೆ. ಈ ವೇಳೆ ವಿರಾಟ್ ಕೊಹ್ಲಿ (Virat Kohli) ಅವರಂತೆ ಹೋಲಿಕೆ ಇರುವ ಬಗ್ಗೆ ರಾಮ್‌ಗೆ ಪ್ರಸ್ತಾಪಿಸಿ, ಅವರ ಬಯೋಪಿಕ್‌ನಲ್ಲಿ ನಟಿಸಲು ಆಸಕ್ತಿ ಇದ್ಯಾ ಎಂದು ಸಂದರ್ಶನದಲ್ಲಿ ಕೇಳಿದ್ದಾರೆ.
ಖಂಡಿತಾ, ಸಾಕಷ್ಟು ಜನ ವಿರಾಟ್ ಕೊಹ್ಲಿಗೆ ತಮ್ಮನ್ನು ಹೋಲಿಕೆ ಮಾತನಾಡಿರುವ ಬಗ್ಗೆ ನಟ ರಿಯಾಕ್ಟ್ ಮಾಡಿ, ವಿರಾಟ್ ಕೊಹ್ಲಿ ಬಯೋಪಿಕ್ ಆಫರ್ ಬಂದರೆ ಖಂಡಿತಾ ನಟಿಸುವೆ ಎಂದು ಖುಷಿಯಿಂದ ಮಾತನಾಡಿದ್ದಾರೆ. ಸಿನಿಮಾ ಬಗೆಗಿನ ಆಸಕ್ತಿಯನ್ನ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಮಾಲಿವುಡ್ ನಿರ್ಮಾಪಕ ಕೆ.ಜಿ ಜಾರ್ಜ್ ವಿಧಿವಶ
ಕೆಲದಿನಗಳ ಹಿಂದೆ ವಿರಾಟ್ ಬಯೋಪಿಕ್‌ನಲ್ಲಿ ಆರ್‌ಆರ್‌ಆರ್ ಹೀರೋ ರಾಮ್ ಚರಣ್ (Ram Charan) ನಟಿಸುತ್ತಾರೆ ಎನ್ನಲಾಗಿತ್ತು. ವಿರಾಟ್ ಹುಟ್ಟುಹಬ್ಬದ ನವೆಂಬರ್ 5ರಂದು ಅಧಿಕೃತ ಮಾಹಿತಿ ಸಿಗಲಿದೆ ಎಂದು ಹೇಳಲಾಗ್ತಿದೆ. ರಾಮ್ ಚರಣ್- ರಾಮ್ ಪೋತಿನೇನಿ ಇಬ್ಬರಲ್ಲಿ ಯಾರು ಲೆಜೆಂಡರಿ ಕ್ರಿಕೆಟಿಗ ವಿರಾಟ್ ಪಾತ್ರಕ್ಕೆ ಜೀವ ತುಂಬುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.
ಸೆ.28ಕ್ಕೆ ಸ್ಕಂದ (Skanda) ಸಿನಿಮಾ ರಿಲೀಸ್ ಆಗುತ್ತಿದೆ. ಮೊದಲ ಬಾರಿಗೆ ರಾಮ್ ಪೋತಿನೇನಿ-ಶ್ರೀಲೀಲಾ ಜೊತೆಯಾಗಿ ನಟಿಸಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯಿದೆ.