ಕೋಲ್ಕತ್ತಾ/ಮುಂಬೈ: ದೇಶಾದ್ಯಂತ ಗುರುವಾರ ರಾಮನವಮಿ ಆಚರಿಸಲಾಯಿತು. ರಾಮನವಮಿ ಆಚರಣೆ ವೇಳೆ ಕೆಲವು ರಾಜ್ಯಗಳಲ್ಲಿ ಗುಂಪು ಘರ್ಷಣೆ ನಡೆದಿದ್ದು, ತೀವ್ರ ಹಿಂಸಾಚಾರಕ್ಕೆ ಕಾರಣವಾಗಿದೆ. ಇದರಿಂದ ಬಿಹಾರ, ಪಶ್ಚಿಮ ಬಂಗಾಳ (West Bengal), ಮಹಾರಾಷ್ಟ್ರ (ಮುಂಬೈ) ಹಾಗೂ ಗುಜರಾತ್ ರಾಜ್ಯಗಳಲ್ಲಿ ವಿವಿಧೆಡೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಘಟನಾ ಸ್ಥಳಗಳಲ್ಲಿ 144 ನಿಷೇಧಾಜ್ಞೆ (Section 144) ಜಾರಿಗೊಳಿಸಲಾಗಿದೆ.
#WATCH | Mumbai: All 21 people, who were arrested by Malvani Police, in connection with the scuffle between two groups during ‘Ram Navami’ Shobha Yatra in Malad’s Malvani area yesterday, were produced before Borivali court today.
All of them have been sent to Police custody till… pic.twitter.com/goZtyx7nPX
— ANI (@ANI) March 31, 2023
Advertisement
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆ, ಗುಜರಾತ್‌ನ ವಡೋದರಾ, ಮುಂಬೈನ ಮಲವಾನಿ ಹಾಗೂ ಬಿಹಾರದ ಸಾರ್ಸಮ್ ಸೇರಿದಂತೆ ವಿವಿಧೆಡೆ ರಾಮನವಮಿ ಆಚರಣೆ ಸಂದರ್ಭದಲ್ಲಿ ನಡೆದ ಗುಂಪುಗಳ ನಡುವೆ ಘರ್ಷಣೆಯಿಂದ ಹಿಂಸಾಚಾರ ಭುಗಿಲೆದ್ದಿದೆ. 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
Advertisement
#WATCH | Bihar: A clash broke out between two groups in Sasaram after the Ram Navami procession. Stone pelting also reported. Police and Administration reached the spot to control the situation. Section 144 CrPC imposed in Sasaram city. pic.twitter.com/WTTSUJ2VfT
— ANI (@ANI) March 31, 2023
Advertisement
ಗುರುವಾರ ರಾತ್ರಿ ಹೌರಾದಲ್ಲಿ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ, ಹಲವಾರು ಮಳಿಗೆಗಳನ್ನ ಧ್ವಂಸಗೊಳಿಸಲಾಗಿದೆ. ಮಹಾರಾಷ್ಟ್ರದ ಔರಂಗಾಬಾದ್ ಮತ್ತು ಗುಜರಾತ್‌ನ ವಡೋದರದಲ್ಲಿಯೂ ಕಲ್ಲು ತೂರಾಟ ನಡೆದಿದೆ. ಇದನ್ನೂ ಓದಿ: ವರುಣಾದಿಂದ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್ ಒಪ್ಪಿತ್ತು; ಆದ್ರೆ ನಾನೇ ಬೇಡ ಎಂದಿದ್ದೇನೆ – ಬಿಎಸ್‌ವೈ
Advertisement
ಶೋಭಾ ಯಾತ್ರೆ ಮೇಲೆ ಕಲ್ಲು ತೂರಾಟ: ವಡೋದರ ನಗರದ ಫತೇಹ್‌ಪುರ ಪ್ರದೇಶದಲ್ಲಿ ರಾಮ ನವಮಿ ಉತ್ಸವದ ಅಂಗವಾಗಿ ಗುರುವಾರ ನಡೆಯುತ್ತಿದ್ದ ಶೋಭಾಯಾತ್ರೆ ಮೇಲೆ ಕಲ್ಲುತೂರಾಟ ನಡೆಸಿದ್ದ 24 ಮಂದಿ ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ರಾಮ ನವಮಿ ಆಚರಣೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಜನರನ್ನು ವಶಕ್ಕೆ ಪಡೆದಿದ್ದೇವೆ. ಎಫ್‌ಐಆರ್ ದಾಖಲಾದ ಬಳಿಕ ಎಲ್ಲರನ್ನೂ ಅಧಿಕೃತವಾಗಿ ಬಂಧಿಸಲಾಗುವುದು. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಜನಜೀವನ ಸಹಜ ಸ್ಥಿತಿಯಲ್ಲಿದೆ’ ಎಂದು ವಡೋದರ ಪೊಲೀಸ್ ಕಮಿಷನರ್ ಶಮ್ಶೇರ್ ಸಿಂಗ್ ಹೇಳಿದ್ದಾರೆ.
ಅಲ್ಲದೇ ಮುಂಬೈನಲ್ಲಿ 21 ಮಂದಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: Mood Of Karnataka – ಮಲೆನಾಡು, ಮಧ್ಯ ಕರ್ನಾಟಕದಲ್ಲಿ ಹಿನ್ನಡೆಯಾದರೂ ಬಿಜೆಪಿಯೇ ದೊಡ್ಡ ಪಕ್ಷ
ಈ ನಡುವೆ ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್ ರಾಮ ನವಮಿಯಂದು ರಾಜ್ಯದಲ್ಲಿ ಭುಗಿಲೆದ್ದ ಹಿಂಸಾಚಾರದ ಬಗ್ಗೆ ಕೇಂದ್ರೀಯ ಸಂಸ್ಥೆಯಿಂದ ತನಿಖೆ ನಡೆಸುವಂತೆ ಕೋರಿ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.