ನವದೆಹಲಿ: ಅಯೋಧ್ಯೆ ರಾಮಮಂದಿರ (Ayodhya Ram Mandir) ಪ್ರಾಣಪ್ರತಿಷ್ಠೆ ಸಮಾರಂಭವನ್ನು ನಾಚ್ ಗಾನಕ್ಕೆ (ನೃತ್ಯ ಕಾರ್ಯಕ್ರಮ) ಹೋಲಿಸಿದ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಬಿಜೆಪಿ (BJP) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ರಾಮಮಂದಿರ ಕುರಿತು ರಾಗಾ ಆಡಿದ ಮಾತುಗಳ ವಿರುದ್ಧ ಬಿಜೆಪಿಗರು ಮುಗಿಬಿದ್ದಿದ್ದು, ಕಾಂಗ್ರೆಸ್ ಪಕ್ಷವು ಪದೇ ಪದೇ ಹಿಂದೂಗಳನ್ನು ಅವಮಾನಿಸುತ್ತಿದೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಬೈರೂತ್ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥನ ಪುತ್ರಿಯೂ ಸಾವು; ನಸ್ರಲ್ಲಾ ಬಳಿಕ ಮತ್ತೊಬ್ಬ ಟಾಪ್ ಲೀಡರ್ ಟಾರ್ಗೆಟ್!
ಬಿಜೆಪಿ ನಾಯಕ, ಆಂಧ್ರ ಪ್ರದೇಶ ಆರೋಗ್ಯ ಸಚಿವ ಸತ್ಯ ಕುಮಾರ್ ಯಾದವ್ ಈ ಕುರಿತು ಎಕ್ಸ್‌ನಲ್ಲಿ ಕಿಡಿಕಾರಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರದ ಅದ್ಧೂರಿ ಉದ್ಘಾಟನೆಯನ್ನು ರಾಹುಲ್ ಗಾಂಧಿ ಕೇವಲ ‘ನೃತ್ಯ ಕಾರ್ಯಕ್ರಮ’ ಎಂದು ಉಲ್ಲೇಖಿಸಿ ಹಿಂದೂಗಳ ಮೇಲಿನ ದ್ವೇಷ ಎಷ್ಟಿದೆ ಎಂದು ತೋರಿಸಿದ್ದಾರೆ. ಈ ಪವಿತ್ರ ಕ್ಷಣಕ್ಕಾಗಿ ಅಸಂಖ್ಯಾತ ಹಿಂದೂಗಳು ತಮ್ಮ ರಕ್ತವನ್ನು ಚೆಲ್ಲಿ ತ್ಯಾಗ ಮಾಡಿದ್ದಾರೆ. ನಿಮ್ಮ ನೀಚ ಮಾತುಗಳು ಸಾವಿರಾರು ಹಿಂದೂಗಳ ಭಕ್ತಿ ಮತ್ತು ತ್ಯಾಗಕ್ಕೆ ಮಾಡಿದ ಘೋರ ಅಪಮಾನ ಎಂದು ಸತ್ಯ ಯಾದವ್ ಆರೋಪಿಸಿದ್ದಾರೆ. ಇದನ್ನೂ ಓದಿ: ಕಾನೂನು ಹೋರಾಟದ ವಿಚಾರವನ್ನು ನಮ್ಮ ಕಾನೂನಿನ ಟೀಂ ನೋಡಿಕೊಳ್ಳುತ್ತದೆ : ಸಿಎಂ
ಇನ್ನು ಬಿಜೆಪಿ ಪಕ್ಷದ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ ಈ ಕುರಿತು ಮಾತನಾಡಿದ್ದು, ರಾಗಾ ಹೇಳಿಕೆಗಳನ್ನು ಖೇದನೀಯ ಎಂದು ಕರೆದಿದ್ದಾರೆ. ರಾಹುಲ್ ಗಾಂಧಿಯವರ ನಂಬಿಕೆ ಮತ್ತು ಅವರ ಪವಿತ್ರ ಸಂದರ್ಭಗಳ ಬಗ್ಗೆ ಇದೇ ರೀತಿ ಟೀಕಿಸುತ್ತಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: IPL 2025 | ಮೆಗಾ ಹರಾಜಿಗೂ ಮುನ್ನವೇ IPL ಆಟಗಾರರಿಗೆ ಬಿಸಿಸಿಐ ಭರ್ಜರಿ ಗಿಫ್ಟ್
ಏನಿದು ವಿವಾದ?
ಅಯೋಧ್ಯೆ ರಾಮಮಂದಿರ ಉದ್ಘಾಟನಾ ಸಮಾರಂಭವು `ನಾಚ್ ಗಾನ’ ಕಾರ್ಯಕ್ರಮವಾಗಿತ್ತು. ಕರೆಯಬೇಕಿದ್ದವರನ್ನು ಬಿಟ್ಟು ಅಮಿತಾಬ್ ಬಚ್ಚನ್, ಅದಾನಿ ಮತ್ತು ಅಂಬಾನಿಯಂತಹ ದೊಡ್ಡ ವ್ಯಕ್ತಿಗಳು ಹಾಗೂ ಹಣವಿದ್ದ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು. ರಾಮಮಂದಿರ ಸಂಘಟಕರು ಕೆಳವರ್ಗದವರನ್ನು ಏಕೆ ಆಹ್ವಾನಿಸಿಲ್ಲ? ಅನೇಕ ಗಣ್ಯರನ್ನು ಆಹ್ವಾನಿಸಿದ್ದರೂ ಒಬ್ಬ ಕಾರ್ಮಿಕ, ರೈತನನ್ನು ಆಹ್ವಾನಿಸಿಲ್ಲ. ಇದರಿಂದಾಗಿ ಬಿಜೆಪಿ ಅಯೋಧ್ಯೆಯಲ್ಲಿ ಸೋತುಹೋಯಿತು ಎಂದು ರಾಹುಲ್ ಗಾಂಧಿ ಹರಿಯಾಣ ಮತ್ತು ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಮಾತನಾಡಿ ವಿವಾದಕ್ಕೀಡಾಗಿದ್ದಾರೆ. ಇದನ್ನೂ ಓದಿ: ಐಎಎಸ್ ಅಧಿಕಾರಿ ಪತ್ನಿ ರೇಪ್ ಕೇಸ್; ತನಿಖೆಯಲ್ಲಿ ಲೋಪವೆಸಗಿದ ಪೊಲೀಸರ ವಿರುದ್ಧ ಕ್ರಮಕ್ಕೆ ಕೋಲ್ಕತ್ತಾ ಹೈಕೋರ್ಟ್