ಟಗರು ಚಿತ್ರದ ಡಾಲಿ ಪಾತ್ರದಲ್ಲಿ ಧನಂಜಯ ಮಿಂಚುತ್ತಲೇ ಮೀನ ಮೇಷ ಎಣಿಸದೆ ಅವರೊಂದಿಗೆ ಚಿತ್ರ ಶುರು ಮಾಡಿದ್ದವರು ರಾಂ ಗೋಪಾಲ್ ವರ್ಮಾ. ಅವರು ನಿರ್ಮಾಣ ಮಾಡಿರೋ ಭೈರವ ಗೀತಾ ಎಂಬ ಚಿತ್ರದಲ್ಲಿ ಧನಂಜಯ ನಾಯಕನಾಗಿ ನಟಿಸುತ್ತಿರೋದು ಗೊತ್ತೇ ಇದೆ. ಇದೀಗ ಅದರ ಫಸ್ಟ್ ಲುಕ್ ಆರ್‌ಜಿವಿ ಕೈ ಸೇರಿದೆ. ಅದನ್ನು ನೋಡಿ ಅವರ ಥ್ರಿಲ್ ಆಗಿದ್ದಾರೆ.
A moment from #BhairavaGeetha Debutant director Siddhardha is the most promising director I have seen in the last 10 years ..Really feeling both lucky and proud to have discovered him pic.twitter.com/0PXWrVyx5D
— Ram Gopal Varma (@RGVzoomin) August 18, 2018
Advertisement
Advertisement
ಭೈರವ ಗೀತಾ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ವರ್ಮಾ ಗರಡಿಯಲ್ಲಿ ಪಳಗಿರುವ ಸಿದ್ದಾರ್ಥ. ಅವರ ನಿರ್ದೇಶನದಲ್ಲಿ ಧನಂಜಯ್ ಅಬ್ಬರದ ನಟನೆ ನೀಡಿರೋ ಈ ಚಿತ್ರದ ಫಸ್ಟ್ ಲುಕ್ಕನ್ನು ವರ್ಮಾ ಮೆಚ್ಚಿ ಕೊಂಡಾಡಿದ್ದಾರೆ. ಡಾಲಿ ಭೈರವನಾಗಿ ನೀಡಿರೋ ನಟನೆಯನ್ನು ಮೆಚ್ಚಿಕೊಂಡಿರೋ ವರ್ಮಾ, ಧನಂಜಯನ ಪಾಲಿಗೆ ಈ ಚಿತ್ರ ನಿರ್ದಿಷ್ಟವಾದೊಂದು ಮಹಾ ತಿರುವು ನೀಡುವ ಭವಿಷ್ಯವನ್ನೂ ಹೇಳಿದ್ದಾರೆ.
Advertisement
ಇನ್ನುಳಿದಂತೆ ವರ್ಮಾ ಬಹುವಾಗಿ ಹೊಗಳಿರೋದು ನಿರ್ದೇಶಕ ಸಿದ್ದಾರ್ಥ ಅವರ ಕಸುಬುದಾರಿಕೆಯನ್ನು. ಆರ್‌ಜಿವಿ ಬಹಳಷ್ಟು ನಂಬಿಕೆಯಿಟ್ಟು ಭೈರವ ಗೀತಾ ಚಿತ್ರವನ್ನು ಸಿದ್ದಾರ್ಥ ಕೈಗೊಪ್ಪಿಸಿದ್ದರು. ಆದರೆ ಫಸ್ಟ್ ಲುಕ್ಕು ನೋಡಿದ ವರ್ಮಾ ತಮ್ಮ ಶಿಷ್ಯ ನಿರೀಕ್ಷೆಗೂ ಮೀರಿ ಈ ಚಿತ್ರವನ್ನು ರೂಪಿಸಿದ್ದಾನೆಂದು ಬೆನ್ನು ತಟ್ಟಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ಸಿದ್ದಾರ್ಥನನ್ನು ನೋಡುತ್ತಿದ್ದೇನೆ. ಆತ ಪ್ರತಿಭಾವಂತ, ಶ್ರಮ ಜೀವಿ. ಆತನ ಟ್ಯಾಲೆಂಟಿನ ಮೇಲೆ ನಂಬಿಕೆ ಇಟ್ಟು ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊರಿಸಿದ್ದೆ. ಅದನ್ನಾತ ಸಮರ್ಥವಾಗಿ ನಿರ್ವಹಿಸಿದ್ದಾನೆಂದೂ ವರ್ಮಾ ಹೇಳಿದ್ದಾರೆ.
Advertisement
ಈ ಚಿತ್ರ ಆರಂಭದಲ್ಲಿಯೇ ಎಬ್ಬಿಸಿರೋ ಹವಾ ನೋಡಿದರೆ ಖಂಡಿತವಾಗಿಯೂ ಈ ಚಿತ್ರ ಟಗರು ಚಿತ್ರವನ್ನೇ ಸರಿಗಟ್ಟುವಂಥಾ ದಾಖಲೆ ನಿರ್ಮಿಸುವ ಲಕ್ಷಣಗಳೇ ಕಾಣಿಸುತ್ತಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
A pic of @Dhananjayaka from Siddhardha directed #BhairavaGeetha pic.twitter.com/Isp1Z5HOeS
— Ram Gopal Varma (@RGVzoomin) August 18, 2018
Best wishes to debutant director Siddhartha and “Daali” @dhananjayaka for the 1st look poster launch of the bilingual #BhairavaGeetha
Telugu: https://t.co/BHliERIydc
Kannada: https://t.co/bOWEEdFb25
— Ram Gopal Varma (@RGVzoomin) June 21, 2018