ಹೈದರಾಬಾದ್: ಪುಲ್ವಾಮಾ ದಾಳಿಯಲ್ಲಿ ಸಾಕ್ಷ್ಯಾಧಾರಗಳಿಲ್ಲದೇ ಪಾಕಿಸ್ತಾನ ವಿರುದ್ಧ ಭಾರತ ಆರೋಪ ಮಾಡುತ್ತಿದೆ ಎಂದಿದ್ದ ಪಾಕ್ ಪ್ರಧಾನಿಗೆ ನಿರ್ದೇಶಕ ರಾಮ್ ಗೋಪಲ್ ವರ್ಮಾ ಮೈಮುಟ್ಟಿ ನೋಡಿಕೊಳ್ಳುವಂತೆ ಟಾಂಗ್ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಫೋಟೋವೊಂದನ್ನು ಶೇರ್ ಮಾಡಿರುವ ಆರ್‍ಜಿವಿ, ಎಲ್ಲಾ ಸಮಸ್ಯೆಗಳು ಮಾತುಕತೆಯಿಂದಲೆ ಬಗೆಹರಿಯುವುದಾದರೇ 3ನೇ ಮದುವೆ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ. ಪುಲ್ವಾಮಾ ದಾಳಿಯ 3 ದಿನಗಳ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ 6 ನಿಮಿಷಗಳ ವಿಡಿಯೋ ಸಂದರ್ಶನವನ್ನು ನೀಡಿದ್ದರು. ಈ ವೇಳೆ ಆಧಾರ ರಹಿತವಾಗಿ ಭಾರತ ಪಾಕಿಸ್ತಾನ ಮೇಲೆ ಆರೋಪ ಮಾಡುತ್ತಿದೆ. ಭಾರತ ಏನಾದರೂ ಕ್ರಮಕ್ಕೆ ಮುಂದಾದರೆ ನಾವು ಪ್ರತ್ಯುತ್ತರವನ್ನು ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
Advertisement
— Ram Gopal Varma (@RGVzoomin) February 20, 2019
Advertisement
ಪುಲ್ವಾಮಾ ದಾಳಿ ಬಗ್ಗೆ ಸರಣಿ ಟ್ವೀಟ್ ಮಾಡಿರುವ ವರ್ಮಾ, ಅಮೆರಿಕ ದೇಶಕ್ಕೆ ಲಾಡೆನ್ ಪಾಕಿಸ್ತಾನದಲ್ಲಿ ವಾಸವಾಗಿದ್ದಾನೆ ಎನ್ನುವ ಅಂಶ ತಿಳಿದಿದ್ದು, ಆದರೆ ಪಾಕಿಸ್ತಾನಕ್ಕೆ ಮಾತ್ರ ಇದರ ಅರಿವು ಆಗಿಲ್ಲ. ನಿಮ್ಮ ದೇಶದಲ್ಲಿ ಯಾರಿದ್ದಾರೆ ಎಂಬುವುದೇ ನಿಮಗೆ ತಿಳಿದಿಲ್ಲವಾ? ದಯಮಾಡಿ ನನಗೆ ಎಜುಕೇಟ್ ಮಾಡಿ ಎಂದು ವ್ಯಂಗ್ಯವಾಗಿ ಕಾಲೆಳೆದಿದ್ದಾರೆ.
Advertisement
ಮತ್ತೊಂದು ಟ್ವೀಟ್‍ನಲ್ಲಿ ಉಗ್ರ ಸಂಘಟನೆಗಳಾದ ಜೈಶ್ ಇ ಮೊಹಮದ್, ಲಷ್ಕರ್ ಎ ತೋಯಿಬಾ, ತಾಲಿಬಾನ್, ಅಲ್ ಕೈದಾ ಸಂಘಟನೆಗಳು ಪಾಕಿಸ್ತಾನದಲ್ಲಿ ಅಶ್ರಯ ಪಡೆದಿದೆ ಎಂದು ಯಾರು ನನಗೆ ಹೇಳಿಲ್ಲ. ಆದರೆ ಒಮ್ಮೆಯೂ ನೀವು ಉಗ್ರ ಸಂಘಟನೆಗಳು ಪಾಕಿಸ್ತಾನದಲ್ಲಿ ಇಲ್ಲ ಎನ್ನುವ ಹೇಳಿಕೆಯನ್ನೇ ನೀಡಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
Advertisement
Dear Prime Minister @ImranKhanPTI
Nobody told me that jaish e Mohammed ,Lashkar e taiba ,Taliban and Alqaeda are not ur play stations …but I never heard u not denying that u don’t love them Imran sir????
— Ram Gopal Varma (@RGVzoomin) February 20, 2019
ನಿರ್ದೇಶಕ ಆರ್ ಜಿವಿ ಸಿನಿಮಾ ಸೇರಿದಂತೆ ಹಲವು ಅಂಶಗಳ ಕುರಿತು ವಿವರಿಸಲು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರುತ್ತಾರೆ. ಸದ್ಯ ಅವರ ನಿರ್ದೇಶನದ ಬಹು ವಿವಾದಾತ್ಮಕ ಚಿತ್ರ ‘ಲಕ್ಷ್ಮಿಸ್ ಎನ್‍ಟಿಆರ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
Dear Prime Minister @ImranKhanPTI
I heard that jaish e Mohammed ,Lashkar e taiba ,Taliban and Alqaeda are ur balls which u keep hitting them out of boundaries of pakistan into Indian pavilions .Sir please tell if u think cricket balls are bombs sir. Educate us sir please sir ????
— Ram Gopal Varma (@RGVzoomin) February 20, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv