ದಕ್ಷಿಣದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸುಮ್ಮನಿರಲು ಅವರ ಬಾಯಿ ಬಿಡುತ್ತಿಲ್ಲ. ಹಾಗಾಗಿಯೇ ಮನಬಂದಂತೆ ಮಾತನಾಡುತ್ತಲೇ ಇರುತ್ತಾರೆ. ಆ ಮಾತುಗಳು ಯಾವ ರೀತಿಯಲ್ಲಿ ತಮಗೇ ಪರಿಣಾಮ ಬೀರಬಲ್ಲವು ಎಂಬುದನ್ನು ಅವರು ಬಹುಶಃ ಯೋಚಿಸುವುದಿಲ್ಲ. ಹಾಗಾಗಿ ಮಾತೆಲ್ಲವೂ ವಿವಾದಗಳಾಗಿ ಬದಲಾಗುತ್ತವೆ. ಆದರೂ, ಅವರು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಮಾತನಾಡುತ್ತಲೇ ಹೋಗುತ್ತಾರೆ. ಇದನ್ನೂ ಓದಿ: ರಾಕ್ಷಸರ ರೂಪದಲ್ಲಿ ಬರುತ್ತಿದ್ದಾರೆ ಡೈಲಾಂಗ್ ಕಿಂಗ್ ಸಾಯಿಕುಮಾರ್
ಇದೀಗ ರಾಮ್ ಗೋಪಾಲ್ ವರ್ಮಾ ಮತ್ತೆ ಮಾತಿಗೆ ಸಿಕ್ಕಿದ್ದಾರೆ. ಇವರ ನಿರ್ದೇಶನದ ಲಡಕಿ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಮೊದಲ ಬಾರಿಗೆ ಭಾರತೀಯ ಸಿನಿಮಾ ರಂಗಕ್ಕೆ ಪೂರ್ಣ ಪ್ರಮಾಣದ ಮಾರ್ಷಲ್ ಆರ್ಟ್ ಬಳಸಿಕೊಂಡು ಮಾಡಿದ ಸಿನಿಮಾವನ್ನು ನೀಡುತ್ತಿದ್ದಾರೆ. ಈ ಸಿನಿಮಾಗೆ ಪ್ರೇರಣೆ ಬ್ರೂಸಲಿ ಎಂದು ಹೇಳಿಕೊಂಡಿದ್ದಾರೆ. ಬ್ರೂಸಲಿ ಎನ್ನು ಇಷ್ಟಕ್ಕೆ ಬಳಸಿಕೊಂಡಿದ್ದರೆ ಚೆನ್ನಾಗಿತ್ತು. ಆದರೆ, ಅವರು ಹಾಗೆ ಮಾಡಿಲ್ಲ.
ಸದ್ಯ ಲಡಕಿ ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ರಾಮ್ ಗೋಪಾಲ್ ವರ್ಮಾ, ತಾವು ಈ ಸಿನಿಮಾವನ್ನು ಬ್ರೂಸ್ಲಿ ಪ್ರೇರಣೆಯಿಂದ ಮಾಡಿದ್ದು, ನಾನು ಅವರಿಗೆ ಕಿಸ್ ಮಾಡುವ ಆಸೆ ಹೊಂದಿದ್ದೆ. ತುಂಬಾ ಸಲ ಅವರಿಗೆ ಕಿಸ್ ಮಾಡಬೇಕು ಅಂತ ಅನಿಸಿತ್ತು. ಹಾಗಂತ ನನ್ನನ್ನು ಸಲಿಂಗಿ ಕಾಮಿ ಅಂದುಕೊಳ್ಳಬೇಡಿ. ನಾನು ಸಲಂಗಿ ಅಲ್ಲ ಎಂದೂ ಹೇಳಿದ್ದಾರೆ. ಆದರೆ, ಫ್ಯಾನ್ಸ್ ಮಾತ್ರ ಸುಮ್ಮನಿಲ್ಲ. ನೀವು ಸಲಂಗಿಯೇ ಎಂದು ಜರಿದಿದ್ದಾರೆ.