‘ಆರ್ಆರ್ಆರ್’ (RRR) ಸಿನಿಮಾದ ಸಕ್ಸಸ್ ನಂತರ ದೇಶದೆಲ್ಲೆಡೆ ರಾಮ್ ಚರಣ್ (Ram Charan) ಸದ್ದು ಮಾಡ್ತಿದ್ದಾರೆ. ಸದ್ಯ ಜಿ20 ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ನಟ ರಾಮ್ ಚರಣ್ ಗಮನ ಸೆಳೆದಿದ್ದಾರೆ. ಈ ಸಭೆಯಲ್ಲಿ ಭಾರತದ ಸಿನಿಮಾ (Indian Films) ಮತ್ತು ಸಂಸ್ಕೃತಿ (Culture) ಬಗ್ಗೆ ನಟ ಮಾತನಾಡಿದ್ದಾರೆ.
Advertisement
ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ಅವರು ಸದ್ಯ ‘ಗೇಮ್ ಚೇಂಜರ್’ (Game Changer) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಆರ್‌ಆರ್‌ಆರ್’ ಸಿನಿಮಾದ ಯಶಸ್ಸಿನ ನಂತರ ಸ್ಕ್ರಿಪ್ಟ್ ಸೆಲೆಕ್ಷನ್‌ನಲ್ಲಿ ಸಖತ್ ಚ್ಯೂಸಿಯಾಗಿದ್ದಾರೆ.
Advertisement
Advertisement
ಭಾರತೀಯ ಚಿತ್ರರಂಗದ ಸ್ಟಾರ್ ಆಗಿ ಮಿಂಚ್ತಿರುವ ರಾಮ್ ಚರಣ್, ಶ್ರೀನಗರದಲ್ಲಿ ನಡೆದ ಜಿ20 (G20) ಸಭೆಯಲ್ಲಿ ರಾಮ್ ಚರಣ್ ಭಾಗವಹಿಸಿದ್ದಾರೆ. ಭಾರತದ ಸಿನಿಮಾ- ಸಂಸ್ಕೃತಿ ಬಗ್ಗೆ ಮಾತನಾಡಿದ್ದಾರೆ. ನನಗೆ ಭಾರತವನ್ನು ಇನ್ನಷ್ಟು ಶೋಧಿಸುವ ಆಸೆಯಿದೆ. ಭಾರತದ ಮಣ್ಣಿಗೆ ಘನತೆಯಿದೆ. ಇಲ್ಲಿನ ಭಾವನೆಗಳ ಕುರಿತು ಜನರಿಗೆ ತಲುಪಿಸುವ ಆಸೆಯಿದೆ ಎಂದಿದ್ದಾರೆ. ಇದನ್ನೂ ಓದಿ:‘ಕೆರಾಡಿ’ ಹೆಸರಿನಲ್ಲಿ ಹೊಸ ಉದ್ಯಮಕ್ಕೆ ರಿಷಬ್ ಶೆಟ್ಟಿ ಎಂಟ್ರಿ
Advertisement
View this post on Instagram
ಒಂದು ಸಿನಿಮಾವನ್ನು ಶೂಟ್ ಮಾಡಲು ಅದ್ಭುತ ಜಾಗವೆಂದರೆ ಅದು ಕಾಶ್ಮೀರ. ನನ್ನ ತಂದೆ ಸಾಕಷ್ಟು ಸಿನಿಮಾಗಳನ್ನ ಕಾಶ್ಮೀರದಲ್ಲಿಯೇ ಶೂಟ್ ಮಾಡಿದ್ದಾರೆ. 95 ವರ್ಷಗಳಿಂದ ಚಿತ್ರರಂಗ ಇಲ್ಲಿಯೇ ಚಿತ್ರೀಕರಣ ಮಾಡುತ್ತಿದೆ. ಕಾಶ್ಮೀರ ಶೋಧಿಸಲು 95 ವರ್ಷ ಸಾಲದು ಎಂದು ಕಾಶ್ಮೀರ ಬಗ್ಗೆ ಬಣ್ಣಿಸಿ ರಾಮ್ ಚರಣ್ ಮಾತನಾಡಿದ್ದಾರೆ. ಒಟ್ನಲ್ಲಿ ರಾಮ್ ಚರಣ್ ಮಾತಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿದ್ದಾರೆ.