ರಕ್ಷಿತಾ ಶೆಟ್ಟಿಯ ಹಗಲೊತ್ತಿನ ನಿದ್ರೆಯ ಸೀಕ್ರೆಟ್ ಬಯಲಾಗಿದೆ. ಅದೂ ಟಾಯ್ಲೆಟ್‌ನಲ್ಲಿ ಗಂಟೆಗಟ್ಟಲೆ ನಿದ್ರೆ ಮಾಡ್ತಾ ರಕ್ಷಿತಾ (Rakshitha Shetty) ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಬಿಗ್ ಬಾಸ್ (Bigg Boss) ವಾರ್ನಿಂಗ್ ಕೊಟ್ಟಿದ್ದಾರೆ.
ಟಾಯ್ಲೆಟ್‌ನಲ್ಲಿ ಗಂಟೆಗಟ್ಟಲೆ ಏನ್ ಮಾಡ್ತಾರೆ ಅನ್ನೋದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಕೊನೆಗೂ ರಕ್ಷಿತಾ ಸಿಕ್ಕಿಬಿದ್ದಿದ್ದಾರೆ. ಗಿಲ್ಲಿ, ಧ್ರುವಂತ್, ರಜತ್, ರಘು ನಾಲ್ವರು ಕುಳಿತು ಮಾತನಾಡುತ್ತಿದ್ದರು. ಈ ವೇಳೆ ರಕ್ಷಿತಾ ಹಾವ-ಭಾವವನ್ನು ಗಿಲ್ಲಿ ಗಮನಿಸಿ ರಜತ್‌ಗೆ ಹೇಳ್ತಾರೆ. ‘ಅವಳಿಗೆ ಬೇಕಾದ ಬಟ್ಟೆ ತಗೊಂಡು ಟಾಯ್ಲೆಟ್‌ಗೆ ಹೋಗ್ತಾಳೆ.. 2 ಗಂಟೆ ಆಚೆ ಬರಲ್ಲ’ ಅಂತ ಗಿಲ್ಲಿ ಹೇಳ್ತಾರೆ. ಈ ಮಾತಿಗೆ ರಜತ್ ಬಿದ್ದುಬಿದ್ದು ನಗ್ತಾರೆ. ಇದನ್ನೂ ಓದಿ: ನನಗೆ ಅಶ್ವಿನಿ ಗೆಲ್ಲಬೇಕು..ಆದರೆ ಗೆಲ್ಲೋದು ಗಿಲ್ಲಿ – ಜಾನ್ವಿ
ಗಿಲ್ಲಿ ಹೇಳಿದಂತೆ ಗಂಟೆ ಕಳೆದರೂ ರಕ್ಷಿತಾ ಟಾಯ್ಲೆಟ್‌ನಿಂದ ಆಚೆ ಬರಲ್ಲ. ನಾನು ಹೇಳಿದ್ದು ನಿಜ ಆಯ್ತು ಅಂತ ಗಿಲ್ಲಿ, ಮನೆ ಕ್ಯಾಪ್ಟನ್ ಧನು ಅವರನ್ನು ಕೂಗ್ತಾರೆ. ಧನು ಬಂದು ಟಾಯ್ಲೆಟ್ ಬಾಗಿಲು ತಟ್ಟಿ, ‘ಏನ್ ಮಾಡ್ತಿದ್ದೀಯಾ?’ ಅಂತ ಕೇಳ್ತಾರೆ. ಅದಕ್ಕೆ ರಕ್ಷಿತಾ, ‘ಟಾಸ್ಕ್ ಉಂಟಲ್ಲ.. ಬಟ್ಟೆ ಚೇಂಜ್ ಮಾಡ್ತಿದ್ದೀನಿ’ ಅಂತಾರೆ. ಆಚೆ ಬಂದಾಗ ಬಟ್ಟೆ ಬದಲಾಯಿಸಿರಲ್ಲ. ಇದನ್ನು ಗಿಲ್ಲಿ ಕಾಮಿಡಿ ಮಾಡ್ತಾರೆ.
ಮತ್ತೊಮ್ಮೆ ರಕ್ಷಿತಾ ನಿದ್ರೆ ಮಾಡ್ತಾ ಸಿಕ್ಕಿ ಬೀಳ್ತಾರೆ. ಎಲ್ಲರೂ ಒಂದು ಕಡೆ ಕೂತು ಮಾತಾಡುವಾಗ ಇದ್ದಕ್ಕಿದ್ದಂತೆ ನಾಯಿ ಜೋರಾಗಿ ಬೊಗಳುವ ಶಬ್ದ ಕೇಳುತ್ತೆ. ತಕ್ಷಣ ಬಿಗ್ ಬಾಸ್ ‘ರಕ್ಷಿತಾ’ ಅಂತ ಕೂಗ್ತಾರೆ. ಆಗ ರಕ್ಷಿತಾ ಟಾಯ್ಲೆಟ್‌ನಲ್ಲಿ ನಿದ್ರೆ ಮಾಡುವುದು ಮನೆಯವರಿಗೆ ಗೊತ್ತಾಗುತ್ತೆ. ಕ್ಯಾಪ್ಟನ್ ಹೋಗಿ ರಕ್ಷಿತಾಳನ್ನು ಕರೆತಂದು ಸ್ವಿಮ್ಮಿಂಗ್ ಪೂಲ್ ನೀರಿನಲ್ಲಿ ಮುಳುಗಿಸುತ್ತಾರೆ. ಇದನ್ನೂ ಓದಿ: ಕ್ಷಮೆ ಕೇಳಿದರೂ ರಣವೀರ್‌ಗೆ ತಪ್ಪದ ಸಂಕಷ್ಟ
‘ನಾಯಿ ಬೊಗಳಿದ ಶಬ್ಧಕ್ಕೆ ಎಚ್ಚರ ಆಗೋಯ್ತು, ಭಯ ಆಯ್ತು’ ಅಂತ ಸೂರಜ್ ಜೊತೆ ರಕ್ಷಿತಾ ಹೇಳಿಕೊಳ್ತಾರೆ. ‘ನೀವು ಟಾಯ್ಲೆಟ್‌ಗೆ ಹೋಗಿ ಹೆಚ್ಚು ಹೊತ್ತು ಕಳೆದಿದ್ರೆ ಹಾಡು ಹೇಳ್ತಿರಿ.. ಇಲ್ಲಾಂದ್ರೆ ಮಲಗಿ ಬಿಡ್ತೀರಿ’ ಅಂತ ಸೂರಜ್‌ಗೆ ರಕ್ಷಿತಾ ಹೇಳ್ತಾರೆ. ಅದಕ್ಕೆ ಸೂರಜ್, ‘ನಾನು ಬೇರೆ ಕಡೆ ಮಲಗೋದು, ಟಾಯ್ಲೆಟ್‌ನಲ್ಲಿ ಅಲ್ಲ’ ಅಂತ ಹೇಳಿ ನಗ್ತಾರೆ. ಆ ಮಾತಿಗೆ ರಕ್ಷಿತಾ ಕೂಡ ನಗುತ್ತಾರೆ.


