ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ `ಚಮಕ್’ ಚಿತ್ರದ ಮೊದಲ ಶೋವನ್ನು ತಮ್ಮ ಭಾವಿ ಪತ್ನಿಯೊಂದಿಗೆ ನೋಡಿದ ರಕ್ಷಿತ್ ಶೆಟ್ಟಿ ಚಿತ್ರ ವಿಮರ್ಶೆಯನ್ನು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದು, ಚಮಕ್ ಚಿತ್ರದಲ್ಲಿ ರಶ್ಮಿಕಾ ಅವರ ಅಭಿನಯ ನೋಡಿ ಮತ್ತೆ ಲವ್ ಆಯ್ತು ಎಂದು ಟ್ವೀಟ್ ಮಾಡಿದ್ದಾರೆ.
ಸ್ಯಾಂಡಲ್‍ವುಡ್ ಕ್ಯೂಟ್ ಜೋಡಿ ಎಂದೇ ಕರೆಸಿಕೊಳ್ಳುತ್ತಿರುವ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ಎಂಗೇಜ್ ಮೆಂಟ್ ನಂತರ ರಶ್ಮಿಕಾ ಅವರ ಎರಡು ಸಿನಿಮಾಗಳು ಬಿಡುಗಡೆಯಾಗಿದೆ. ಪುನೀತ್ ರಾಜ್ ಕುಮಾರ್ ಜೊತೆಗಿನ ಅಭಿನಯದ `ಅಂಜನೀಪುತ್ರ’ ಈಗಾಗಲೇ ಬಿಡುಗಡೆಗೊಂದು ಉತ್ತಮ ಪ್ರದರ್ಶನ ಕಾಣುತ್ತಿದೆ. ಬಳಿಕ ಇದೀಗ ಗಣೇಶ್ ಜೊತೆ ಕಾಣಿಸಿಕೊಂಡ `ಚಮಕ್’ ಚಿತ್ರ ಕೂಡ ಬಿಡುಗಡೆಯಾಗಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಜೋಡಿಯ ಪ್ರೇಕ್ಷರನ್ನು ಮೆಚ್ಚಿಸಿದೆ.
ಈ ಚಿತ್ರವನ್ನು ತಮ್ಮ ಭಾವಿ ಪತ್ನಿಯೊಂದಿಗೆ ನೋಡಿರುವ ರಕ್ಷಿತ್ ಶೆಟ್ಟಿ, ನಟ ಗಣೇಶ್ ಮತ್ತು ರಶ್ಮಿಕಾ ಜೋಡಿಯ ಅಭಿನಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮ ಟ್ವೀಟ್‍ನಲ್ಲಿ ಗಣೇಶ್, ರಶ್ಮಿಕಾ ಜೋಡಿಯಾ ಅಭಿನಯ ಮತ್ತು ಚಿತ್ರದ ನಿರ್ದೇಶಕ ಸಿಂಪಲ್ ಸುನಿಯ ನಿರ್ದೇಶನಕ್ಕೆ ಫುಲ್ ಮಾಕ್ರ್ಸ್ ನೀಡಿದ್ದಾರೆ.
ಫುಲ್ ಮಾಕ್ರ್ಸ್: ಚಮಕ್ ಚಿತ್ರದ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾರೇ ಅದ್ಭುತ. ಪೂರ್ತಿ ಸಿನಿಮಾ ತುಂಬ ಇಷ್ಟ ಆಯ್ತು. ಗಣೇಶ್ ಸರ್ ಅವರ ಅಭಿನಯ ಟಾಪ್ ಕ್ಲಾಸ್. ರಶ್ಮಿಕಾ ನೋಟ ಆಕರ್ಷಕವಾಗಿದೆ ಮತ್ತು ನಟನೆಯಲ್ಲಿ ಮೋಡಿ ಮಾಡ್ತಾರೆ. ಒಟ್ಟಿನಲ್ಲಿ ಚಮಕ್ ಚಿತ್ರವನ್ನ ನೋಡಿ ರಶ್ಮಿಕಾ ಅವರ ಮೇಲೆ ಮತ್ತೊಂದು ಬಾರಿ ಲವ್ ಆಗಿದೆ ಅಂತ ಬರೆದಿದ್ದಾರೆ.
ವರ್ಷದ ಅತ್ಯುತ್ತಮ ಚಿತ್ರ: ಸುನಿ ನಿರ್ದೇಶನದ ಇದುವರೆಗಿನ ಚಿತ್ರಗಳಲ್ಲಿ `ಚಮಕ್’ ಚಿತ್ರ ಬೆಸ್ಟ್. ಪ್ರತಿಯೊಂದು ಚಿತ್ರದಲ್ಲೂ ಅವರ ನಿರ್ದೇಶನ ಮತ್ತು ಸಂಭಾಷಣೆಯಲ್ಲಿ ಬೆಳವಣಿಗೆ ಕಾಣುತ್ತಿದೆ. ಚಮಕ್ ಚಿತ್ರವನ್ನು ನಿಮ್ಮ ಜೊತೆಗಾರರ ಜೊತೆ ನೋಡಿ. ಈ ವರ್ಷದ ಅತ್ಯುತ್ತಮ ಫ್ಯಾಮಿಲಿ ಮನರಂಜನೆ ಚಿತ್ರ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ: ಆಡಿ ಕಾರ್ ಒಡತಿಯಾದ ಕಿರಿಕ್ ಹುಡ್ಗಿ ರಶ್ಮಿಕಾ- ಭಾವಿ ಪತಿ ಜೊತೆ ಫಸ್ಟ್ ರೌಂಡ್