ಉಡುಪಿ: ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಉಡುಪಿಯಲ್ಲಿ ಹುಲಿ ನೃತ್ಯ ಮಾಡಿದ್ದಾರೆ.
ಉಳಿದವರು ಕಂಡಂತೆಯಲ್ಲಿ ನೆಗೆಟಿವ್ ಶೇಡ್‍ನಲ್ಲಿ ಕುತ್ತಿಗೆಗೆ ಸೇವಂತಿಗೆ ಮಾಲೆ ಹಾಕೊಂಡು ರಕ್ಷಿತ್ ಟೈಗರ್ ಡ್ಯಾನ್ಸ್ ಮಾಡಿದ್ದರು. ಆ ಬಳಿಕ ಅದೊಂದು ಟ್ರೆಂಡಾಗಿದ್ದು, ನಂತರದಿಂದ ಅಷ್ಟಮಿ ಬಂತು ಅಂದ ತಕ್ಷಣ ಎಲ್ಲಿದ್ದರೂ ರಕ್ಷಿತ್ ಶೆಟ್ಟಿ, ಊರಿಗೆ ಓಡೋಡಿ ಬರುತ್ತಾರೆ. ಊರೆಲ್ಲಾ ಸುತ್ತಾಡಿ ಎಲ್ಲೆಲ್ಲಿ ಹುಲಿವೇಷ ತಂಡಗಳು ಇವೆಯೋ ಅಲ್ಲೆಲ್ಲಾ ಹೋಗಿ ಕುಣಿಯುತ್ತಾರೆ.
Advertisement
Advertisement
ಇಂದು ಉಡುಪಿ ಕೊರಂಗ್ರಪಾಡಿಯ ಯಂಗ್ ಫ್ರೆಂಡ್ಸ್ ಟೀಂ ಜೊತೆ ರಕ್ಷಿತ್ ಸಿಕ್ಕಾಪಟ್ಟೆ ಹುಲಿ ನೃತ್ಯ ಮಾಡಿದ್ದಾರೆ. ರಕ್ಷಿತ್ ಇದ್ದಾರೆ ಎಂದ ತಕ್ಷಣ ಸುತ್ತಮುತ್ತಲಿನ ನೂರಾರು ಯುವಕ ಯುವತಿಯರು ಕೊರಂಗ್ರಪಾಡಿಗೆ ಭೇಟಿ ಕೊಟ್ಟಿದ್ದಾರೆ. ಜನ ಬರುತ್ತಿದ್ದಂತೆ ರಕ್ಷಿತ್ ಮತ್ತೆ ಮತ್ತೆ ಕುಣಿದಿದ್ದಾರೆ.
Advertisement
ಕೊಲ್ಲೂರಿನಲ್ಲಿ ಕುಟುಂಬ ಮಾಡಿಸಿದ್ದ ಚಂಡಿಕಾ ಹೋಮಕ್ಕೆ ಬಂದಿದ್ದ ರಕ್ಷಿತ್ ಮನೆಯಲ್ಲೇ ಉಳಿದುಕೊಂಡು ಕೃಷ್ಣ ಜನ್ಮಾಷ್ಟಮಿಯಲ್ಲಿ ಪಾಲ್ಗೊಂಡಿದ್ದಾರೆ. ಪಕ್ಕಾ ಪ್ರೊಫೆಷನಲ್ಸ್ ಥರ ಕುಣಿಯುವ ರಕ್ಷಿತ್ ಶೆಟ್ಟಿ, ಹುಲಿವೇಷ ಕುಣಿತದ ಹಿನ್ನೆಲೆಯಲ್ಲಿ ಸಂಗೀತಕ್ಕೊಂದು ಹೊಸ ಟಚ್ ಕೊಟ್ಟಿದ್ದಾರೆ. ಆ ಮ್ಯೂಸಿಕ್‍ಗೂ ಉಡುಪಿಯಲ್ಲಿ ಕುಣಿದಿದ್ದಾರೆ.
Advertisement
ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಕ್ಷಿತ್ ಶೆಟ್ಟಿ, ಚಿಕ್ಕಂದಿನಿಂದಲೂ ನನಗೆ ಹುಲಿವೇಷ ಕುಣಿತ ಎಂದರೆ ಬಹಳ ಇಷ್ಟ. ಅಷ್ಟಮಿಗೆ ಊರಿಗೆ ಬಂದು ಊರಲ್ಲಿ ಹುಲಿಕುಣಿಯುವ ಆಸೆಯಾಗಿ ಬಂದಿದ್ದೇನೆ. ಮತ್ತೆ ನನ್ನ ಬಾಲ್ಯ ನೆನಪಾಗ್ತಾಯಿದೆ. ಉಳಿದವರು ಕಂಡಂತೆಯಲ್ಲಿ ಹುಲಿವೇಷ ಕುಣಿತ ಅಳವಡಿಸಲಾಗಿತ್ತು. ರಾಜ್ಯದ ಜನ ಕೂಡ ಅದನ್ನು ಬಹಳ ಮೆಚ್ಚಿಕೊಂಡಿದ್ದರು. ಅವನೇ ಶ್ರೀಮನ್ನಾರಾಯಣ ಚಿತ್ರ ಅತೀ ಶೀಘ್ರ ಬಿಡುಗಡೆಯಾಗುತ್ತೆ ಎಂದು ಹೇಳಿದರು.