Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಶ್ಮಿಕಾ ಮಂದಣ್ಣ ಹುಟ್ಟು ಹಬ್ಬಕ್ಕೆ ರಕ್ಷಿತ್ ಶೆಟ್ಟಿ ಸ್ಟುಡಿಯೋ ವಿಶ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ರಶ್ಮಿಕಾ ಮಂದಣ್ಣ ಹುಟ್ಟು ಹಬ್ಬಕ್ಕೆ ರಕ್ಷಿತ್ ಶೆಟ್ಟಿ ಸ್ಟುಡಿಯೋ ವಿಶ್

Cinema

ರಶ್ಮಿಕಾ ಮಂದಣ್ಣ ಹುಟ್ಟು ಹಬ್ಬಕ್ಕೆ ರಕ್ಷಿತ್ ಶೆಟ್ಟಿ ಸ್ಟುಡಿಯೋ ವಿಶ್

Public TV
Last updated: April 5, 2022 6:14 pm
Public TV
Share
2 Min Read
FotoJet 6
SHARE

ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ ಮುರಿದು ಬಿದ್ದ ನಂತರವೂ ಒಬ್ಬರಿಗೊಬ್ಬರು ಗೌರವಿಸುವುದನ್ನು ಮರೆತಿಲ್ಲ. ರಕ್ಷಿತ್ ಅಭಿಮಾನಿಗಳು ರಶ್ಮಿಕಾ ಬಗ್ಗೆ ಏನಾದರೂ ಕೆಟ್ಟ ಕಾಮೆಂಟ್ ಮಾಡಿದಾಗೆಲ್ಲ ರಶ್ಮಿಕಾ ಪರ ನಿಂತುಕೊಂಡು ರಕ್ಷಿತ್ ಮಾತನಾಡಿದ್ದಾರೆ. ಅಷ್ಟರ ಮಟ್ಟಿಗೆ ರಶ್ಮಿಕಾ ಮೇಲೆ ರಕ್ಷಿತ್ ಅವರಿಗೆ ಗೌರವವಿದೆ. ಈ ಕಾರಣಕ್ಕಾಗಿಯೇ ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಅವರ ಒಡೆತನದ ಪರಮ್ ಸ್ಟುಡಿಯೋದಿಂದ ಹಾರೈಕೆಗಳನ್ನು ಟ್ವಿಟ್ ಮಾಡಲಾಗಿದೆ. ಅತೀ ಸುಂದರವಾದ ಫೋಟೋ ಹಾಕಿ ‘ಸ್ಟಾರ್ ಮತ್ತು ಸುಂದರವಾದ ನಟಿಗೆ ಶುಭಾಶಯಗಳು. ನಿಮ್ಮ ಜನುಮದಿನ ವಿಶೇಷ, ಸಿನಿಮಾದಿಂದ ಸಿನಿಮಾಗೆ ನಿಮ್ಮ ಅಸಾಧಾರಣ ಶಕ್ತಿಯನ್ನು ಪ್ರಸ್ತುತಪಡಿಸುತ್ತಿದ್ದೀರಿ’ ಎಂದು ಸುಂದರವಾದ ಸಾಲುಗಳ ಮೂಲಕ ರಶ್ಮಿಕಾ ಅವರನ್ನು ವರ್ಣನೆ ಮಾಡಲಾಗಿದೆ.

rashmika mandanna 2 1

ಈ ಹಿಂದೆ ರಶ್ಮಿಕಾ ಮತ್ತು ರಕ್ಷಿತ್ ಅವರು ಎಂಗೇಜ್ ಮೆಂಟ್ ಮುರಿದು ಬಿದ್ದಾಗ ರಕ್ಷಿತ್ ಅಭಿಮಾನಿಗಳು ರಶ್ಮಿಕಾ ಬಗ್ಗೆ ಕೆಟ್ಟದ್ದಾಗಿ ಕಾಮೆಂಟ್ ಮಾಡುತ್ತಿದ್ದರು. ಪ್ರತಿ ಸಲವೂ ಅವರನ್ನು ಟ್ರೋಲ್ ಮಾಡುತ್ತಿದ್ದರು. ರಕ್ಷಿತ್ ಶೆಟ್ಟಿ ಅವರಿಗೆ ಹೋಲಿಕೆ ಮಾಡಿ, ಬೈಯುತ್ತಿದ್ದರು. ಆಗೆಲ್ಲ ರಶ್ಮಿಕಾ ಪರವಾಗಿಯೇ ರಕ್ಷಿತ್ ನಿಂತಿದ್ದರು. ಯಾರೂ ಯಾರಿಗೂ ಕೆಟ್ಟದ್ದಾಗಿ ಮಾತನಾಡುವ ಹಕ್ಕಿಲ್ಲ. ಜೀವನದಲ್ಲಿ ಎಲ್ಲವೂ ನಡೆಯುವುದು ಸಹಜ. ನನ್ನ ಸಿನಿಮಾವನ್ನು ನೀವು ಪ್ರೀತಿಸುತ್ತಿದ್ದರೆ, ನನ್ನನ್ನು ಅಭಿಮಾನಿಸುತ್ತಿದ್ದರೆ, ಅವರನ್ನೂ ಗೌರವಿಸಿ ಎಂದಿದ್ದರು. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ

rashmika mandanna 3

ರಕ್ಷಿತ್ ಶೆಟ್ಟಿ ನಟನೆಯ ಮತ್ತು ನಿರ್ಮಾಣದ ‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದವರು ರಶ್ಮಿಕಾ. ಚೊಚ್ಚಲು ಸಿನಿಮಾದಲ್ಲೇ ಅವರು ಸಿಕ್ಕಾಪಟ್ಟೆ ಫೇಮಸ್ ಆದರು. ಒಂದು ರೀತಿಯಲ್ಲಿ ರಕ್ಷಿತ್ ಮತ್ತು ರಶ್ಮಿಕಾ ಜೋಡಿ ಸ್ಯಾಂಡಲ್ ವುಡ್ ಹಿಟ್ ಪೇರ್ ಆಯಿತು. ಅಲ್ಲಿಂದ ರಶ್ಮಿಕಾ ಕನ್ನಡದ ಬಹುತೇಕ ಸ್ಟಾರ್ ಗಳ ಜತೆ ನಟಿಸಿದರು. ಈ ನಡುವೆ ರಕ್ಷಿತ್ ಮತ್ತು ರಶ್ಮಿಕಾ ಪ್ರೇಮಗೀತೆ ಹಾಡಿದರು. ಗೆಳೆತನ ಪ್ರೇಮಕ್ಕೆ ತಿರುಗಿತು. ಮನೆಯವರ ಒಪ್ಪಿಗೆ ಪಡೆದು ನಿಶ್ಚಿತಾರ್ಥ ಕೂಡ ಮಾಡಿಕೊಂಡರು. ಆದರೆ, ಈ ಬಂಧನ ತುಂಬಾ ದಿನ ಉಳಿಯಲಿಲ್ಲ. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ

Rashmika 3

2018ರಲ್ಲಿ ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ತೆಲುಗು ಸಿನಿಮಾ ರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟರು. ವಿಜಯ್ ದೇವರಕೊಂಡ ಹೆಸರಿನ ಜತೆ ರಶ್ಮಿಕಾ ಮಂದಣ್ಣ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್ ಹರಡಿತು. ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎನ್ನುವಲ್ಲಿಗೆ ಸುದ್ದಿ ಬೆಳೆಯಿತು. ಈ ಕುರಿತು ಇಬ್ಬರೂ ನಿರಾಕರಿಸಿದರೂ, ಹಲವಾರು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಈ ಸುದ್ದಿಯನ್ನು ಸದಾ ಜೀವಂತವಾಗಿಡುತ್ತಿದ್ದಾರೆ. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್

Rashmika Mandanna Allu Arjun Pushpa 1 1

ಸದ್ಯ ಬಾಲಿವುಡ್ ಗೂ ರಶ್ಮಿಕಾ ಹಾರಿದ್ದಾರೆ. ಅಲ್ಲಿಯೂ ಸ್ಟಾರ್ ನಟರ ಚಿತ್ರಗಳಿಗೆ ಸಹಿ ಮಾಡಿದ್ದಾರೆ. ಅಲ್ಲದೇ ಇದಕ್ಕೂ ಮೊದಲು ತಮಿಳು ಚಿತ್ರದಲ್ಲೂ ನಟಿಸಿದ್ದಾರೆ. ಇತ್ತೀಚಿಗೆ ತೆರೆಕಂಡ ‘ಪುಷ್ಪಾ’ ಸಿನಿಮಾ ರಶ್ಮಿಕಾ ಮತ್ತಷ್ಟು ಸ್ಟಾರ್ ವ್ಯಾಲ್ಯೂ ತಂದು ಕೊಟ್ಟಿತು. ಹೀಗಾಗಿ ದಕ್ಷಿಣದ ಸೂಪರ್ ಸ್ಟಾರ್ ನಟಿಯರಲ್ಲಿ ರಶ್ಮಿಕಾ ಕೂಡ ಒಬ್ಬರಾಗಿದ್ದಾರೆ.

TAGGED:Kirik PartyKodaguPushpa CinemaRakshit ShettyRashmika BirthdayRashmika Mandannasandalwoodಕಿರಿಕ್ ಪಾರ್ಟಿಕೊಡಗುಪುಷ್ಪಾ ಸಿನಿಮಾರಕ್ಷಿತ್ ಶೆಟ್ಟಿರಶ್ಮಿಕಾ ಬರ್ತಡೇರಶ್ಮಿಕಾ ಮಂದಣ್ಣಸ್ಯಾಂಡಲ್ ವುಡ್
Share This Article
Facebook Whatsapp Whatsapp Telegram

Cinema news

Dhurandhar 2
ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ‘ಧುರಂಧರ್‌ 2’ – ಮೂರೇ ದಿನದಲ್ಲಿ ವಿಶ್ವಾದ್ಯಂತ 500 ಕೋಟಿ ಕಲೆಕ್ಷನ್‌
Bollywood Cinema Latest Top Stories
Puneeth Rajakumar
800 ಕೆ.ಜಿ ಕಂಚಿನ ಅಪ್ಪು ಪುತ್ಥಳಿ ಅನಾವರಣ
Bengaluru City Cinema Districts Karnataka Latest Sandalwood Top Stories
Moogathi Malli
ಮೂಗುತಿ ಮಲ್ಲಿ: ಚೂಟಿ ಹುಡುಗಿ, ಘಾಟಿ ಬೆಡಗಿ!
Cinema Latest Sandalwood Top Stories
Dhurandhar 2 ranveer singh
ರಿಲೀಸ್‌ ದಿನವೇ ಎಲ್ಲಾ ಬಾಕ್ಸಾಫೀಸ್‌ ರೆಕಾರ್ಡ್‌ ಉಡೀಸ್‌ ಮಾಡಿದ ಧುರಂಧರ್‌ 2‌ – ಗಳಿಸಿದ್ದೆಷ್ಟು?
Bollywood Cinema Latest Main Post

You Might Also Like

Bagalkote Byelection Umesh Meti
Bagalkot

ಬಾಗಲಕೋಟೆ ಉಪಚುನಾವಣೆ – ನಾಮಪತ್ರ ಸಲ್ಲಿಸಿದ `ಕೈ’ ಅಭ್ಯರ್ಥಿ ಹೈಚ್‌.ವೈ ಮೇಟಿ ಪುತ್ರ

Public TV
By Public TV
31 seconds ago
srinivas das kariyappa nomination
Davanagere

ದಾವಣಗೆರೆ ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ – ಮೆರವಣಿಗೆಯಲ್ಲಿ ಬಿಎಸ್‌ವೈ ಭಾಗಿ

Public TV
By Public TV
20 minutes ago
Lucknow Crime
Crime

ಗಂಡನಿಲ್ಲದಾಗ ಸೊಸೆ, ಬಾಡಿಗೆದಾರನ ಲವ್ವಿಡವ್ವಿ – ವಿರೋಧಿಸಿದ ಅತ್ತೆಯನ್ನೇ ಚಟ್ಟಕ್ಕೇರಿಸಿದ ಖರ್ತನಾಕ್ ಪ್ರೇಮಿಗಳು

Public TV
By Public TV
33 minutes ago
KH Muniyappa
Bengaluru City

ರಾಜ್ಯದ ಹೋಟೆಲ್‌ ಮಾಲೀಕರಿಗೆ ಗುಡ್‌ ನ್ಯೂಸ್‌ – ಹೆಚ್ಚುವರಿ 1 ಸಾವಿರ ಕಮರ್ಷಿಯಲ್ ಸಿಲಿಂಡರ್ ಪೂರೈಕೆ: ಮುನಿಯಪ್ಪ

Public TV
By Public TV
42 minutes ago
LPG Cylinder Queue
Chikkaballapur

ಬಂದಿರೋದು 500 ಸಿಲಿಂಡರ್, 3 ಸಾವಿರ ಜನ ಬುಕ್ ಮಾಡಿದ್ರೆ ಕೊಡೋದು ಹೇಗೆ?: ಗ್ಯಾಸ್ ಏಜೆನ್ಸಿ ಮಾಲೀಕರು

Public TV
By Public TV
2 hours ago
Indian stock markets
Latest

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ – ಸೆನ್ಸೆಕ್ಸ್‌ 1,700 ಪಾಯಿಂಟ್‌ಗಳ ಕುಸಿತ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?