ನಟ ರಕ್ಷಿತ್ ಶೆಟ್ಟಿ (Rakshit Shetty) ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಕೆಲಸದಲ್ಲೇ ಕಳೆದು ಹೋಗಿದ್ದಾರೆ ಎಂದು ಹೇಳಲಾಗಿತ್ತು. ಮುಂದಿನ ಅವರ ಸಿನಿಮಾಗಳು ಯಾವವು? ಏನು ಮಾಡಲಿದ್ದಾರೆ? ನಿರ್ದೇಶನವಾ ಅಥವಾ ಬೇರೆ ನಿರ್ದೇಶಕರ (Directer) ಸಿನಿಮಾದಲ್ಲಿ ನಟನೆಯಾ ಎನ್ನುವ ಪ್ರಶ್ನೆಗಳು ಮೂಡಿದ್ದವು. ಇದೀಗ ರಕ್ಷಿತ್ ಎಲ್ಲದಕ್ಕೂ ಉತ್ತರ ನೀಡಿದ್ದಾರೆ.
ಗುರು ಪೂರ್ಣಿಮೆಯ ದಿನದಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿರುವ ರಕ್ಷಿತ್, ತಮ್ಮ ಮುಂದಿನ ಕನಸು ಮತ್ತು ಪ್ರಾಜೆಕ್ಟ್ ಗಳ ಬಗ್ಗೆ ಹೇಳಿಕೊಂಡಿದ್ದಾರೆ. ತಾವು ಯಾವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎನ್ನುವುದನ್ನೂ ಅವರು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಸ್ಪೂರ್ತಿ ತುಂಬಬಲ್ಲಂತಹ ಕೆಲವು ಮಾತುಗಳನ್ನೂ ರಕ್ಷಿತ್ ಆಡಿದ್ದಾರೆ.
ಮುಂದಿನ ನಾಲ್ಕು ವರ್ಷಗಳ ಒಳಗೆ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡುವ ಗುರಿಯನ್ನು ಹೊಂದಿರುವುದಾಗಿ ಹೇಳಿರುವ ರಕ್ಷಿತ್, ರಿಚರ್ಡ್ ಆಂಟನಿ (Richard Antony) ಮತ್ತು ಪುಣ್ಯಕೋಟಿ (Punyakoti) ಸಿನಿಮಾಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಈ ಸಿನಿಮಾಗಳ ಕುರಿತಂತೆ ನಾಲ್ಕು ವರ್ಷಗಳನ್ನು ಕಳೆದಿದ್ದೇನೆ. ಇನ್ನೂ ನಾಲ್ಕು ವರ್ಷ ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ:ಖ್ಯಾತ ನಟ ಧನುಷ್ ಮೇಲೆ ನಿಷೇಧದ ತೂಗುಕತ್ತಿ
ಯಶಸ್ಸು ಎನ್ನುವುದು ಕೆಲವರಿಗೆ ರಾತ್ರೋರಾತ್ರಿ ಸಿಕ್ಕಿದೆ. ಇನ್ನೂ ಕೆಲವರು ತಪಸ್ಸು ಮಾಡಬೇಕು ಎನ್ನುತ್ತಾ ತಾವು ನಡೆದು ಬಂದು ಹಾದಿಯನ್ನು ರಕ್ಷಿತ್ ನೆನಪಿಸಿಕೊಂಡಿದ್ದಾರೆ. ನಿರ್ದೇಶನ ಎನ್ನುವುದು ಎಂತಹದ್ದು ಎಂದೂ ತಿಳಿಸಿರುವ ಅವರು, ಅದನ್ನು ತಾವು ಎಂಜಾಯ್ ಮಾಡಬೇಕು ಎನ್ನುವ ಮಾತುಗಳನ್ನೂ ಆಡಿದ್ದಾರೆ.
ರಿಚರ್ಡ್ ಆಂಟನಿ ಮತ್ತು ಪುಣ್ಯಕೋಟಿ ಸಿನಿಮಾಗೆ ಪ್ರೇರಣೆ ಏನು? ತಮಗೆ ಕಥೆ ಹುಟ್ಟಿದ್ದು ಎಲ್ಲಿ? ತಾವು ಬೆಳೆದು ಬಂದ ಪರಿಸರ ಎಂತಹದ್ದು ಎಂದೂ ಹೇಳಿಕೊಂಡಿರುವ ರಕ್ಷಿತ್, ಪರಶುರಾಮ ಮತ್ತು ಆತನ ಕೊಡಲಿಯೇ ತಮ್ಮ ನಿರ್ದೇಶನದ ಎರಡು ಸಿನಿಮಾಗಳಿಗೆ ಸ್ಫೂರ್ತಿ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
Web Stories