ನನಗೆ ಲವ್ ಫೆಲ್ಯೂರ್ ಆಗಿಲ್ಲ, ಜಗತ್ತು ಹಾಗೆ ಅಂದ್ಕೊಂಡಿದೆ: ರಕ್ಷಿತ್ ಶೆಟ್ಟಿ

Public TV
1 Min Read
rakshith shetty

ಮ್ಮದೇ ಕಿರಿಕ್ ಪಾರ್ಟಿ ಸಿನಿಮಾದ ಹೀರೋಯಿನ್ ರಶ್ಮಿಕಾ ಮಂದಣ್ಣ ಅವರನ್ನು ಪ್ರೀತಿಸಿ, ನಿಶ್ಚಿತಾರ್ಥ ಮಾಡಿಕೊಂಡು ನಂತರ ದೂರ ದೂರ ಆದವರು ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಜೋಡಿ. ಈ ಜೋಡಿಯು ದೂರವಾದಾಗ ಅನೇಕರು ನೊಂದುಕೊಂಡರು. ರಕ್ಷಿತ್ ಶೆಟ್ಟಿ ಪರ ನಿಂತು, ಧೈರ್ಯ ತುಂಬಿದರು. ಇಂತಹ ಜೋಡಿ ಜೀವನ ಪರ್ಯಂತ ಇರಬೇಕು ಎಂದು ಬಯಸಿದರು. ಆದರೆ ವಿಧಿ ಆಟ ಬೇರೆ ಆಗಿತ್ತು. ಇದನ್ನೂ ಓದಿ : ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

rakshit shetty 1

ಸದ್ಯ ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ರಕ್ಷಿತ್ ಶೆಟ್ಟಿ ಕೂಡ ಹಲವು ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನಷ್ಟೇ ಅವರ ಚಾರ್ಲಿ 777 ಸಿನಿಮಾ ರಿಲೀಸ್ ಆಗಬೇಕಿದೆ. ಈ ಸಂದರ್ಭದಲ್ಲಿ ರವಿಚಂದ್ರನ್ ಜೊತೆ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡಿರುವ ರಕ್ಷಿತ್, ನೇರ ಪ್ರಶ್ನೆಗಳಿಗೆ ಅಷ್ಟೇ ನೇರವಾಗಿ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

rakshit shetty 4

ನಿರೂಪಕಿ ಅನುಶ್ರೀ ‘ನಿಮಗೆ ಲವ್ ಫೆಲ್ಯೂರ್ ಆಗಿದ್ದಕ್ಕೆ ಇಷ್ಟೊಂದು ಸಕ್ಸಸ್ ಪಡೆಯುತ್ತಿದ್ದೀರಿ’ ಎಂದು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಉತ್ತರವಾಗಿ ‘ನನಗೆ ಲವ್ ಫೆಲ್ಯೂರ್ ಆಗಿದೆ ಅಂತ ಯಾರು ಹೇಳಿದ್ದು? ಜಗತ್ತು ಹಾಗೆ ತಿಳಿದುಕೊಂಡಿದೆ. ನನ್ನ ಪ್ರಕಾರ ನನಗೆ ಲವ್ ಫೆಲ್ಯೂರ್ ಆಗಿಲ್ಲ. ಜಗತ್ತು ಹಾಗೆ ಭಾವಿಸಿದೆ ಅಷ್ಟೆ’ ಎಂದಿದ್ದಾರೆ ರಕ್ಷಿತ್. ಇದನ್ನೂ ಓದಿ : ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

rakshit shetty 2

ಇದೇ ಸಂದರ್ಭದಲ್ಲಿ ರಕ್ಷಿತ್ ಮತ್ತೆ ರಮ್ಯಾ ಧ್ಯಾನ ಮಾಡಿದ್ದಾರೆ. ನಿಮ್ಮ ನೆಚ್ಚಿನ ನಟಿ ಯಾರು ಎಂದು ಕೇಳಿದ ಪ್ರಶ್ನೆಗೆ ರಮ್ಯಾ ಎಂದು ಉತ್ತರಿಸುವ ಮೂಲಕ ರಕ್ಷಿತ್ ಕುತೂಹಲ ಮೂಡಿಸಿದ್ದಾರೆ. ಮೊನ್ನೆಯಷ್ಟೇ ರಮ್ಯಾ ಮೇಲೆ ಕ್ರಶ್ ಆಗಿತ್ತು ಎಂದು ಹೇಳಿ ಅಚ್ಚರಿ ಮೂಡಿಸಿದ್ದರು. ಇದೀಗ ಮತ್ತೆ ರಮ್ಯಾ ಧ್ಯಾನ ಮಾಡಿದ್ದಾರೆ ರಕ್ಷಿತ್.

Share This Article
Leave a Comment

Leave a Reply

Your email address will not be published. Required fields are marked *