Bengaluru City
ರಕ್ಷಿತ್, ರಶ್ಮಿಕಾ ಎಂಗೇಜ್‍ಮೆಂಟ್: ಆಮಂತ್ರಣ ಪತ್ರಿಕೆ ಇಲ್ಲಿದೆ ನೋಡಿ

ಬೆಂಗಳೂರು: ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಜೋಡಿಯ ಮದುವೆ ನಿಶ್ಚಿತಾರ್ಥ ಸಮಾರಂಭದ ಆಮಂತ್ರಣ ಪತ್ರಿಕೆ ರೆಡಿಯಾಗಿದೆ.
ಎರಡೂ ಕಡೆಯಿಂದ ಕುಟುಂಬದ ಆಪ್ತರಿಗೆ ಮಾತ್ರ ಆಮಂತ್ರಣ ಪತ್ರಿಕೆ ನೀಡುತ್ತಿದ್ದು ಜುಲೈ 3 ರಂದು ಕೊಡಗಿನ ವಿರಾಜಪೇಟೆಯ ಸೆರೆನಿಟಿ ಹಾಲ್‍ನಲ್ಲಿ ನಡೆಯಲಿದೆ. ಅಂದು ಸಂಜೆ ಎರಡೂ ಕಡೆಯ ಕುಟುಂಬದ ಸದಸ್ಯರಿಗೆ ಔತಣಕೂಟ ಏರ್ಪಡಿಸಲಾಗಿದೆ.
ಕಿರಿಕ್ ಪಾರ್ಟಿಯಲ್ಲಿ ಕರ್ಣ ಮತ್ತು ಸಾನ್ವಿಯಾಗಿ ನಟಿಸಿದ್ದ ಈ ಜೋಡಿಯ ನಿಶ್ಚಿತಾರ್ಥ ಜುಲೈನಲ್ಲಿ ನಡೆದರೆ ಮದುವೆ ದಿನಾಂಕ ಇನ್ನು ಅಂತಿಮವಾಗಿಲ್ಲ. ಈ ಹಿಂದೆ ರಕ್ಷಿತ್ ಶೆಟ್ಟಿ ಮದುವೆ ದಿನಾಂಕ ನಿಗದಿಯಾಗಿಲ್ಲ ಮುಂದೆ ತಿಳಿಸಲಾಗುವುದು ಎಂದು ಹೇಳಿದ್ದರು.
ರಕ್ಷಿತ್ ಶೆಟ್ಟಿ ಈಗ `ಅವನೇ ಶ್ರೀಮನ್ನನಾರಾಯಣ’ ಸಿನಿಮಾದಲ್ಲಿ ತೊಡಗಿದ್ದು, ಇದಾದ ಬಳಿಕ ಸುದೀಪ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ರಕ್ಷಿತ್ ಅವರ ಬರೆದ ಕಥೆಯಾಧಾರಿತ `ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸಿನಿ ಲೋಕಕ್ಕೆ ರಶ್ಮಿಕಾ ಎಂಟ್ರಿ ಕೊಟ್ಟಿದ್ದರು. ಮೊದಲ ಚಿತ್ರದಲ್ಲೇ ಮೆಚ್ಚುಗೆ ಪಡೆದ ಇವರು ಈಗ ಸುನಿ ನಿರ್ದೇಶನದ `ಚಮಕ್’ ನಲ್ಲಿ ಅಭಿನಯಿಸುವುದರ ಜೊತೆಗೆ ತೆಲುಗು ಚಿತ್ರದಲ್ಲೂ ನಟಿಸುತ್ತಿದ್ದಾರೆ.
ತಮ್ಮ ಚಿತ್ರದಲ್ಲಿ ಅವಕಾಶ ನೀಡಿದ ಹುಡುಗಿಯನ್ನೇ ಮದುವೆಯಾಗುವ ಮೂಲಕ ರಕ್ಷಿತ್ ಶೆಟ್ಟಿ ಚಿತ್ರರಂಗದ ತಾರಾ ಜೋಡಿಗಳ ಸಾಲಿಗೆ ಸೇರುತ್ತಿದ್ದಾರೆ.
ಸುಳ್ಳು ಸುದ್ದಿ ಅಂದಿದ್ರು: ಈ ಹಿಂದೆ ಪಬ್ಲಿಕ್ ಟಿವಿ ರಶ್ಮಿಕಾ ಅವರನ್ನು ಈ ವಿಚಾರದ ಬಗ್ಗೆ ಮಾತನಾಡಿಸಿತ್ತು, ಆಗ ಅವರು, ನನಗೆ ಇತ್ತೀಚಿಗೆ ಈ ಸುದ್ದಿ ತಿಳಿಯಿತು. ಅದೂವರೆಗೂ ಗೊತ್ತಿರಲಿಲ್ಲ. ಇದು ಸುಳ್ಳು ಸುದ್ದಿ. ಇದರಿಂದ ನನ್ನ ಸಿನಿ ಕೆರಿಯರ್ಗೆ ತೊಂದರೆ ಆಗುತ್ತದೆ. ದಯವಿಟ್ಟು ಈ ರೀತಿಯ ಸುದ್ದಿಗಳನ್ನು ಹಬ್ಬಿಸಬೇಡಿ. ನಾನು ಮೂರ್ನಾಲ್ಕು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದೇನೆ. ನನ್ನ ಖಾಸಗಿ ವಿಚಾರಗಳಿಗೆ ಸಮಯ ಸಿಗುತ್ತಿಲ್ಲ. ನನಗೆ ಪ್ರತಿದಿನ ತುಂಬಾ ಕೆಲಸಗಳಿರುತ್ತವೆ. ಪರೀಕ್ಷೆಗಳಿವೆ. ಶೂಟಿಂಗ್‍ನಲ್ಲಿ ಬ್ಯೂಸಿಯಿದ್ದೇನೆ. ನನಗೆ ಲವ್ ಮಾಡಲು ಸಮಯವಿಲ್ಲ. ರಕ್ಷಿತ್ ಅವರು ಸಹ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ರಕ್ಷಿತ್ ಮತ್ತು ನನ್ನ ನಡುವಿನ ಸುದ್ದಿಗಳೆಲ್ಲಾ ಫೇಕ್ ಎಂದು ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: ಯಶ್ ಸರ್ ಅವರನ್ನು ನಾನು ಗೌರವಿಸುತ್ತೇನೆ: ತಪ್ಪಿಗೆ ಕ್ಷಮೆ ಕೋರಿದ ರಶ್ಮಿಕಾ
ಇದನ್ನೂ ಓದಿ: ಮದ್ವೆಯಾದ ಬಳಿಕ ಆ್ಯಕ್ಟ್ ಮಾಡ್ತೀರಾ? ಲವ್ ಆಗಿದ್ದು ಹೇಗೆ? ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ರು ರಶ್ಮಿಕಾ
https://www.youtube.com/watch?v=ESowcly8f7s
https://www.youtube.com/watch?v=cfYkNs_ZyD0
https://www.youtube.com/watch?v=uh5_9oujdto
https://www.youtube.com/watch?v=rmB-D2bhHUM
ರಷ್ಮಿಕಾ ಮಂದಣ್ಣ ಸಂದರ್ಶನದ ಫುಲ್ ವಿಡಿಯೋ ನೋಡಿ.
ಲವ್ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ…
https://www.youtube.com/watch?v=jzSaQ0QLDCE
