ರಕ್ಷಿತ್ ಶೆಟ್ಟಿ (Rakshit Shetty) ತಮ್ಮ ಅಭಿಮಾನಿಗಳಿಗೆ ಇನ್ ಡೈರೆಕ್ಟ್ ಆಗಿ ರಚರ್ಡ್ ಆಂಟನಿ (Richard Antony) ಕುರಿತು ಅಪ್ ಡೇಟ್ ವೊಂದನ್ನು ನೀಡಿದ್ಧಾರೆ. ರಿಚರ್ಡ್ ಆಂಟನಿ ಯಾವಾಗಿಂದ ಶುರು ಎಂದು ಕೇಳಲಾದ ಪ್ರಶ್ನೆಗೆ ತಮ್ಮ ಉಳಿದವರು ಕಂಡಂತೆ ಸಿನಿಮಾ ರಿಲೀಸ್ ಡೇಟ್ ಹೇಳಿದ್ದಾರೆ. ಮಾರ್ಚ್ 28ಕ್ಕೆ ಎಂದು ಹೇಳುವ ಮೂಲಕ ರಿಚರ್ಡ್ ಆಂಟನಿಯ ಮುಹೂರ್ತದ (Muhurta) ದಿನಾಂಕವನ್ನೂ ಅವರು ಬಹಿರಂಗ ಪಡಿಸಿದ್ದಾರೆ.
ಈ ಹಿಂದೆ ಹೊಂಬಾಳೆ ಸಂಸ್ಥೆಯ ಆಪ್ತರು ಕೂಡ ಪಬ್ಲಿಕ್ ಟಿವಿ ಡಿಜಿಟೆಲ್ ಜೊತೆ ಮಾತಾಡ್ತಾ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದರು. ಮಾರ್ಚ್ ಕೊನೆಯ ವಾರದ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಚಿತ್ರಕ್ಕೆ ಮುಹೂರ್ತ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಹೊಂಬಾಳೆ ಫಿಲ್ಮ್ಸ್ (Hombale Films) ಅಂಗಳದಿಂದಲೇ ಬಂದಿತ್ತು. ಈ ಚಿತ್ರವನ್ನು ಅದ್ಧೂರಿಯಾಗಿ ತಯಾರಿಸುವುದಕ್ಕಾಗಿ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಹಲವು ತಿಂಗಳ ಹಿಂದೆಯೇ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿತ್ತು.ರಕ್ಷಿತ್ ಶೆಟ್ಟಿ ನಟನೆಯಲ್ಲೇ ಬ್ಯುಸಿಯಾಗಿದ್ದರಿಂದ ಮುಹೂರ್ತಕ್ಕೆ ತಡವಾಗಿತ್ತು. ಸಪ್ತ ಸಾಗರದಾಚೆ ಶೂಟಿಂಗ್ ಮತ್ತು ಬಿಡುಗಡೆಯ ಎಲ್ಲ ಕೆಲಸಗಳನ್ನು ಮುಗಿಸಿ, ಸ್ಕ್ರಿಪ್ಟ್ ನಲ್ಲಿ ತೊಡಗಿದ್ದರು ರಕ್ಷಿತ್ ಶೆಟ್ಟಿ, ಈಗ ಸ್ಕ್ರಿಪ್ಟ್ ಕೆಲಸ ಕೂಡ ಬಹುತೇಕ ಮುಗಿದಿದ್ದು, ಶೀಘ್ರದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆಯಂತೆ.
ಈ ನಡುವೆ ಹೊಂಬಾಳೆ ಮತ್ತು ರಕ್ಷಿತ್ ನಡುವೆ ಬಿರುಕುಉಂಟಾಗಿದ್ದು, ಬೇರೊಂದು ಸಂಸ್ಥೆಯು ರಿಚರ್ಡ್ ಆಂಟನಿ ಚಿತ್ರವನ್ನು ನಿರ್ಮಾಣ ಮಾಡಲಿದೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಈ ಕುರಿತು ಹೊಂಬಾಳೆ ಫಿಲ್ಮ್ಸ್ ಆಪ್ತರೇ ಹೇಳುವಂತೆ, ‘ಸಿನಿಮಾ ಮುಹೂರ್ತಕ್ಕೆ ಹೊಂಬಾಳೆಯೇ ತಯಾರಿ ಮಾಡಿಕೊಳ್ಳುತ್ತಿದೆ ಅಂದ ಮೇಲೆ ಈ ಪ್ರಶ್ನೆಯೇ ಅಪ್ರಸ್ತುತ’ ಎನ್ನುತ್ತಾರೆ.
ಕಾಂತಾರ 2 ಚಿತ್ರಕ್ಕೆ ಮುಹೂರ್ತಕ್ಕೆ ಕಾಲ ಕೂಡಿ ಬಂದಿತ್ತು, ದೈವದ ಅಭಯ ಸಿಕ್ಕಿತ್ತು. ಹಾಗಾಗಿ ಅದರ ಮುಹೂರ್ತವನ್ನು ಬೇಗ ಮಾಡಲಾಯಿತು. ರಿಚರ್ಡ್ ಆಂಟನಿಗೂ ಒಳ್ಳೆಯ ದಿನಾಂಕ ಹುಡುಕುತ್ತಿದ್ದಾರೆ. ಅತೀ ಶೀಘ್ರದಲ್ಲೇ ಎಲ್ಲವನ್ನೂ ಸಂಸ್ಥೆಯೇ ತಿಳಿಸಲಿದೆ ಎನ್ನುವುದು ಆಪ್ತರ ಮಾತು.