ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಮತ್ತು ಆಕೆ ಪತಿ ಆದಿಲ್ ಜಗಳ ಕೋರ್ಟ್ ಮೆಟ್ಟಿಲು ಏರಿತ್ತು. ಆದಿಲ್ (Adil) ಜಾಮೀನು ಮೇಲೆ ಬಿಡುಗಡೆಯಾಗಿ ಬರುತ್ತಿದ್ದಂತೆಯೇ ಇಬ್ಬರೂ ಮತ್ತೆ ಮಾಧ್ಯಮಗಳ ಮುಂದೆ ಕಿತ್ತಾಡುತ್ತಿದ್ದಾರೆ. ದಿನಕ್ಕೊಂದು ಮಾಧ್ಯಮ ಗೋಷ್ಠಿ ಮಾಡಿ, ಆರೋಪಗಳ ಸುರಿಮಳೆ ಹರಿಸುತ್ತಿದ್ದಾರೆ.
ಈವರೆಗೂ ರಾಖಿ ಸುತ್ತಲೇ ಸುತ್ತಿದ್ದ ಮತ್ತು ರಾಖಿಯ ಜೀವದ ಗೆಳತಿಯರು ಎಂದೇ ಗುರುತಿಸಿಕೊಂಡಿದ್ದ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಮತ್ತು ಜಯಶ್ರೀ (Jayashree)ಇದೀಗ ರಾಖಿಗೆ ಭಾರೀ ಶಾಕ್ ನೀಡಿದ್ದು, ಆದಿಲ್ ಪರವಾಗಿ ಇಬ್ಬರೂ ಬ್ಯಾಟ್ ಮಾಡುತ್ತಿದ್ದಾರೆ. ಸಹಜವಾಗಿಯೇ ಈ ನಡೆ ರಾಖಿಗೆ ನುಂಗಲಾರದ ತುಪ್ಪವಾಗಿದೆ. ಇದನ್ನೂ ಓದಿ:ಹರ್ಷಿಕಾ-ಭುವನ್ ಮದುವೆಯಲ್ಲಿ ಬಗೆ ಬಗೆಯ ಭೋಜನ
ರಾಖಿಯ ಕೆಟ್ಟ ದಿನಗಳಲ್ಲಿ ಜೊತೆಗೆ ನಿಂತು ಧೈರ್ಯ ತುಂಬಿದವರು ಶೆರ್ಲಿನ್ ಮತ್ತು ಜಯಶ್ರೀ. ಆದರೆ, ಇದೀಗ ಆದಿಲ್ ಪರವಾಗಿ ಮಾತನಾಡುತ್ತಿದ್ದಾರೆ. ಆದಿಲ್ ಕರೆದ ಪತ್ರಿಕಾಗೋಷ್ಠಿಗೆ ಇಬ್ಬರೂ ಬಂದು, ರಾಖಿ ವಿರುದ್ಧ ಕಿಡಿಕಾರಿದ್ದಾರೆ. ಆದಿಲ್ ತುಂಬಾ ಒಳ್ಳೆಯ ವ್ಯಕ್ತಿ. ಅವನಿಗೆ ಮೋಸ ಮಾಡಬಾರದಿತ್ತು ಎಂದಿದ್ದಾರೆ.
ರಾಖಿ ಒಳ್ಳೆಯವಳು ಅಲ್ಲ ಎಂದು ಮೊನ್ನೆಯಷ್ಟೇ ಜಯಶ್ರೀ ಹೇಳಿದ್ದಳು. ಈ ಮಾತಿಗೆ ರಾಖಿ ಪ್ರತಿಕ್ರಿಯೆ ನೀಡಿ, ಜಯಶ್ರೀ ಹೀಗೆ ಮೋಸ ಮಾಡುತ್ತಾಳೆ ಎಂದು ಗೊತ್ತಿರಲಿಲ್ಲ ಎಂದಿದ್ದಳು. ಈಗ ಜಯಶ್ರೀ ಜೊತೆ ಶೆರ್ಲಿನ್ ಕೂಡ ಸೇರಿಕೊಂಡಿದ್ದಾಳೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]