ವಿವಾದಿತ ಮಾತುಗಳು, ಹಾಟ್ ಹಾಟ್ ಫೋಟೋ, ಬಾಯ್ ಫ್ರೆಂಡ್ ಜೊತೆಗಿನ ತಮಾಷೆ ಮಾಡುವಂತಹ ವಿಡಿಯೋಗಳನ್ನು ಪೋಸ್ಟ್ ಮಾಡಿ ಅಭಿಮಾನಿಗಳನ್ನು ಸದಾ ರಂಜಿಸುತ್ತಿದ್ದ ಬಾಲಿವುಡ್ ವಿವಾದಿತ ತಾರೆ ರಾಖಿ ಸಾವಂತ್ (Rakhi Sawant), ಇದೇ ಮೊದಲ ಬಾರಿಗೆ ಭಾವುಕ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ತಾಯಿಯು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅಮ್ಮನಿಗಾಗಿ ನೀವೆಲ್ಲರೂ ಪಾರ್ಥಿಸಿರಿ ಎಂದು ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.
Advertisement
ರಾಖಿ ಸಾವಂತ್ ತಾಯಿ ಜಯಾ ಸಾವಂತ್ (Jaya) ಬ್ರೈನ್ ಟ್ಯೂಮರ್ ಮತ್ತು ಕ್ಯಾನ್ಸರ್ (Cancer) ಕಾರಣದಿಂದಾಗಿ ಆಸ್ಪತ್ರೆ ಸೇರಿಕೊಂಡಿದ್ದಾರೆ. ಹಾಗಾಗಿಯೇ ಮರಾಠಿ ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಯಾಗಿದ್ದ ರಾಖಿ, ದೊಡ್ಮನೆಯಿಂದ ಹೊರಗೆ ಬಂದಿದ್ದಾರೆ. ಅಮ್ಮನ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸ ಕಂಡ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವುದಾಗಿ ಅವರು ವಿಡಿಯೋ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ವಜ್ರಕಾಯ’ ನಟಿ ಶುಭ್ರಾ ಅಯ್ಯಪ್ಪ
Advertisement
Advertisement
ತಾಯಿಯು ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೋವೊಂದನ್ನು ಹಾಕಿರುವ ಅವರು, ಆನಂತರ ವಿಡಿಯೋವೊಂದನ್ನು ಮಾಡಿ, ನಾನು ನನ್ನ ಬಾಯ್ ಫ್ರೆಂಡ್ ಆದಿಲ್ ಹಾಗೂ ಸಹೋದರ ರಾಕೇಶ್ ಮೂವರು ಅಮ್ಮನನ್ನು ಉಳಿಸಿಕೊಳ್ಳುವುದಕ್ಕಾಗಿ ಹರಸಾಹಸ ಪಡುತ್ತಿದ್ದೇವೆ. ನೀವು ಕೂಡ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
Advertisement
ರಾಖಿನೇ ಹೇಳಿಕೊಂಡಂತೆ ಅವರ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರಂತೆ. ಕ್ಯಾನ್ಸರ್ ಜೊತೆಗೆ ಬ್ರೇನ್ ಟ್ಯೂಮರ್ ಕೂಡ ಇರುವುದರಿಂದ ಅವರ ಎಡಭಾಗವು ಪಾರ್ಶ್ವವಾಯುವಿಗೆ ತುತ್ತಾಗಿದೆ. ಕ್ಯಾನ್ಸರ್ ಶ್ವಾಸಕೋಶಕ್ಕೆ ಹರಡಿದೆ. ಈ ಹಂತದಲ್ಲಿ ಆಪರೇಷನ್ ಮಾಡುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರಂತೆ. ಸದ್ಯ ರಾಖಿ ತಾಯಿ ಮುಂಬೈನ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k